ಬ್ರೇಕಿಂಗ್ ನ್ಯೂಸ್
22-02-25 09:48 pm HK News Desk ದೇಶ - ವಿದೇಶ
ದುಬೈ, ಫೆ.22 : ದುಬೈ ಪೊಲೀಸ್ ಇಲಾಖೆಯ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳು ಎಂಬ ಸೋಗಿನಲ್ಲಿ ಭಾರತೀಯ ಮೂಲದವರ ಜುವೆಲ್ಲರಿ ಕಂಪನಿ ಕಚೇರಿಗೆ ನುಗ್ಗಿ ದರೋಡೆಗೈದ ಪ್ರಕರಣದಲ್ಲಿ ದುಬೈ ಕೋರ್ಟ್ ಮೂವರು ಪಾಕಿಸ್ತಾನಿ ಮೂಲದ ಪ್ರಜೆಗಳನ್ನು ಅಪರಾಧಿಗಳೆಂದು ಘೋಷಿಸಿದೆ.
2024ರ ಮಾರ್ಚ್ 7ರಂದು ದುಬೈನ ನೈಫ್ ಪ್ರದೇಶದಲ್ಲಿರುವ ಜುವೆಲ್ಲರಿ ಕಚೇರಿಗೆ ನುಗ್ಗಿದ ಅಧಿಕಾರಿ ಸೋಗಿನಲ್ಲಿದ್ದ ಮೂವರು ಕಚೇರಿ ಸಿಬಂದಿಯನ್ನು ಯಾಮಾರಿಸಿ ಹಣವನ್ನು ಹೊತ್ತೊಯ್ದಿದ್ದರು. ಎರಡನೇ ಅಂತಸ್ತಿನ ಕಚೇರಿಗೆ ಮೂವರು ಒಳಹೊಕ್ಕಿದ್ದರೆ, ನಾಲ್ಕನೇ ವ್ಯಕ್ತಿ ಕಟ್ಟಡದ ಹೊರಗೆ ನಿಂತು ಪರಿಶೀಲನೆ ನಡೆಸುವ ರೀತಿ ನಾಟಕವಾಡಿದ್ದ. ಜುವೆಲ್ಲರಿ ಕಚೇರಿಯ ಸಿಬಂದಿಯಾಗಿದ್ದ ಭಾರತೀಯ ಮೂಲದ ವ್ಯಕ್ತಿಯನ್ನು ಬಲವಂತದಿಂದ ಒಳಕ್ಕೆ ತಳ್ಳಿ ಹಲ್ಲೆ ಮಾಡಿದ್ದಾರೆ. ತಮ್ಮನ್ನು ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳು ಎಂದು ಹೇಳಿ ಪರಿಚಯಿಸಿದ್ದು ಆತನ ಕೈಯಲ್ಲಿದ್ದ ಸ್ಯಾಮ್ಸಂಗ್ ಮೊಬೈಲ್ ಮತ್ತು ಅದರಲ್ಲಿದ್ದ 3100 ದಿರ್ಹಮ್ ಮೌಲ್ಯದ ಸಿಮ್ ಅನ್ನು ಕಿತ್ತುಕೊಂಡಿದ್ದಾರೆ.
ಕೆಲಹೊತ್ತಿನಲ್ಲೇ ಮತ್ತೊಬ್ಬ ಭಾರತೀಯ ಸಿಬಂದಿ ಕಚೇರಿಗೆ ಬಂದಿದ್ದು, ಆತನಿಗೂ ಹಲ್ಲೆಗೈದು ಕೈಯಲ್ಲಿದ್ದ ಐಫೋನ್ ಅನ್ನು ಪಡೆದಿದ್ದಾರೆ. ಆನಂತರ, ಕಚೇರಿ ಡ್ರಾವರಿನಲ್ಲಿದ್ದ 3.22 ಲಕ್ಷ ದಿರ್ಹಂ ನಗದು ಹಣವನ್ನು ಪಡೆದಿದ್ದು, ಒಳಗಡೆ ಇದ್ದ ಸಿಸಿಟಿವಿ ಕ್ಯಾಮರಾದ ಡಿವಿಆರ್ ಉಪಕರಣವನ್ನೂ ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದರು. ಆನಂತರ ದುಬೈ ಪೊಲೀಸರು ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನೂ ಬಂಧಿಸಿದ್ದು ಅವರ ಬಳಿಯಿದ್ದ 34,305 ದಿರ್ಹಂ ನಗದನ್ನು ವಶಕ್ಕೆ ಪಡೆದಿದ್ದಾರೆ. ತನಿಖೆಯ ಸಂದರ್ಭದಲ್ಲಿ ತಮ್ಮ ಕೈಗೆ ಸಿಕ್ಕಿದ್ದ ನಗದಿನ ಪಾಲು, ಅದನ್ನು ಖರ್ಚು ಮಾಡಿರುವ ವಿಚಾರವನ್ನು ಒಪ್ಪಿಕೊಂಡಿದ್ದಾರೆ.
ವಿಚಾರಣೆ ಪೂರ್ತಿಗೊಳಿಸಿದ ಕೋರ್ಟ್ ಮೂವರು ಆರೋಪಿಗಳಿಗೆ ಒಂದು ವರ್ಷದ ಶಿಕ್ಷೆ ಮತ್ತು ಶಿಕ್ಷೆ ಪೂರೈಸಿದ ಬಳಿಕ ದುಬೈನಿಂದ ಗಡೀಪಾರು ಮಾಡುವಂತೆ ಆದೇಶ ಮಾಡಿದೆ. ಇದಲ್ಲದೆ, ಮೂವರು ಆರೋಪಿಗಳು ಸೇರಿ 2,90,795 ದಿರ್ಹಂ ನಗದನ್ನು ದಂಡದ ರೂಪದಲ್ಲಿ ತೆರುವಂತೆ ಆದೇಶ ಮಾಡಿದೆ. ಇಲ್ಲದಿದ್ದರೆ, ದಿನಕ್ಕೆ 100 ದಿರ್ಹಂ ರೀತಿಯಲ್ಲಿ ಹಣ ಪಾವತಿ ಆಗೋವರೆಗೂ ಹೆಚ್ಚುವರಿ ಅವಧಿಗೆ ಜೈಲಿನಲ್ಲಿರಿಸುವಂತೆ ಹೇಳಿದೆ. ನಾಲ್ಕನೇ ಆರೋಪಿ ಕಟ್ಟಡದ ಹೊರಗೆ ನಿಂತಿದ್ದರಿಂದ ಮತ್ತು ಕೃತ್ಯದಲ್ಲಿ ನೇರವಾಗಿ ಪಾಲ್ಗೊಂಡಿಲ್ಲದ ಕಾರಣ ಆತನ ಮೇಲಿನ ಆರೋಪ ಸಾಬೀತಾಗದೆ ಖುಲಾಸೆಗೊಳಿಸಿ ಆದೇಶ ಮಾಡಿದೆ.
Three men have been found guilty of impersonating Dubai Police criminal investigations officers to carry out an armed robbery at a gold trading company's office in the emirate. Dubai Criminal Court convicted the men, all of Pakistani nationality, of theft, unlawful entry, and impersonating law enforcement officers to intimidate and steal from two victims at the company's office.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
27-07-26 11:47 am
HK News Staffer
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm