CBI raid, Gain Bitcoin: 6,600 ಕೋಟಿ ರೂ. ಕ್ರಿಸ್ಟೋ ಕರೆನ್ಸಿ ಹಗರಣ ; ಬೆಂಗಳೂರು ಸೇರಿ 60 ಕಡೆಗಳಲ್ಲಿ ಸಿಬಿಐ ದಾಳಿ, ಡಿಜಿಟಲ್ ಸಾಕ್ಷ್ಯಗಳ ಜಪ್ತಿ 

26-02-25 12:47 pm       HK News Desk   ದೇಶ - ವಿದೇಶ

6,600 ಕೋಟಿ ರೂ. ಮೌಲ್ಯದ ಕ್ರಿಸ್ಟೋ ಕರೆನ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಂಗಳವಾರ ಬೆಂಗಳೂರು ಸೇರಿದಂತೆ ದೇಶಾದ್ಯಂತ 60 ಸ್ಥಳಗಳಲ್ಲಿ ಶೋಧ ನಡೆಸಿದೆ.

ಹೊಸದಿಲ್ಲಿ , ಫೆ 26: 6,600 ಕೋಟಿ ರೂ. ಮೌಲ್ಯದ ಕ್ರಿಸ್ಟೋ ಕರೆನ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಂಗಳವಾರ ಬೆಂಗಳೂರು ಸೇರಿದಂತೆ ದೇಶಾದ್ಯಂತ 60 ಸ್ಥಳಗಳಲ್ಲಿ ಶೋಧ ನಡೆಸಿದೆ.

ಗೇನ್‌ಬಿಟ್‌ಕಾಯಿನ್ ಕ್ರಿಸ್ಟೋ ಕರೆನ್ಸಿ ಹಗರಣಕ್ಕೆ ಸಂಬಂಧಿಸಿ ದಿಲ್ಲಿ, ಪುಣೆ, ಚಂಡೀಗಢ, ನಾಂದೇಡ್, ಕೊಲ್ಲಾಪುರ, ಮತ್ತು ಬೆಂಗಳೂರು ಸೇರಿದಂತೆ ಆರೋಪಿಗಳಿಗೆ ಸೇರಿದ 60 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಈ ವೇಳೆ, ಕೆಲವು ಕ್ರಿಸ್ಟೋ ವಾಲೆಟ್ಸ್, ಡಿಜಿಟಲ್ ಸಾಕ್ಷ್ಯಗಳನ್ನು ಜಪ್ತಿ ಮಾಡಲಾಗಿದೆ. ಜತೆಗೆ, ಇಮೇಲ್‌ಗಳು, ಕೌಡ್‌ಗಳಲ್ಲಿ ಇರುವ ಮಾಹಿತಿಯನ್ನು ಸಿಬಿಐ ಪಡೆದುಕೊಂಡಿದೆ.

ಏನಿದು ಹಗರಣ ?

ಅಮಿತ್‌ ಭಾರದ್ವಾಜ್ ಮತ್ತು ಅಜಯ್ ಭಾರದ್ವಾಜ್ ಎಂಬುವರು ಗೇನ್‌ಬಿಟ್‌ಕಾಯಿನ್ ಜಾಲತಾಣ ಮೂಲಕ 2015ರಲ್ಲಿ ಪ್ರತೀ ತಿಂಗಳು ಶೇ. 10ರಷ್ಟು ಲಾಭಮಾಡಿಕೊಡುವುದಾಗಿ ಜನರಿಂದ ಹೂಡಿಕೆ ಮಾಡಿಸಿಕೊಂಡಿದ್ದರು. ಆರಂಭದಲ್ಲಿ ಹೂಡಿಕೆದಾರರಿಗೆ ಲಾಭಾಂಶ ನೀಡಲಾಗುತ್ತಿತ್ತು. ಆದರೆ ಅನಂತರದ ದಿನಗಳಲ್ಲಿ ಲಾಭಾಂಶ ನೀಡಲು ಸಾಧ್ಯವಾಗದ್ದರಿಂದ ಹೂಡಿಕೆದಾರರಿಗೆ ನಷ್ಟ ಉಂಟಾಯಿತು. ದೇಶಾದ್ಯಂತ ಈ ಕಂಪೆನಿ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಬಳಿಕ ಸುಪ್ರೀಂ ಕೋರ್ಟ್ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.

The CBI on Tuesday conducted countrywide coordinated searches at 60 locations as part of its probe into Rs 6,600 crore GainBitcoin cryptocurrency scam, officials said. The searches were spread across multiple cities including Delhi NCR, Pune, Chandigarh, Nanded, Kolhapur and Bengaluru, targeting premises allegedly linked to key accused individuals, a CBI spokesperson said in a statement.