Corruption, Amit Shah, MK Stalin: ಕ್ಷೇತ್ರ ಪುನರ್ ವಿಂಗಡಣೆ ಬಳಿಕ ದಕ್ಷಿಣದ ಯಾವುದೇ ರಾಜ್ಯಗಳು ಸಂಸದ ಸ್ಥಾನ ಕಳೆದುಕೊಳ್ಳಲ್ಲ ;‌ ಸ್ಟಾಲಿನ್ ತಪ್ಪು ಹರಡುತ್ತಿದ್ದಾರೆ ಎಂದ ಅಮಿತ್ ಷಾ

26-02-25 05:11 pm       HK News Desk   ದೇಶ - ವಿದೇಶ

2026ರಲ್ಲಿ ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆ ನಂತರ ಜನಸಂಖ್ಯೆ ಲೆಕ್ಕದಲ್ಲಿ ತಮಿಳುನಾಡು ಲೋಕಸಭೆ ಕ್ಷೇತ್ರಗಳ ಸಂಖ್ಯೆ 39ರಿಂದ 31ಕ್ಕೆ ಇಳಿಕೆಯಾಗಲಿದೆ ಎಂದಿರುವ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರ ಹೇಳಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ತಳ್ಳಿಹಾಕಿದ್ದಾರೆ. ಕ್ಷೇತ್ರ ವಿಂಗಡಣೆ ಪ್ರಕ್ರಿಯೆ ಕುರಿತು ಸ್ಟಾಲಿನ್ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಹೇಳಿದ್ದಾರೆ.‌ 

ಕೊಯಮತ್ತೂರು, ಫೆ.26 : 2026ರಲ್ಲಿ ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆ ನಂತರ ಜನಸಂಖ್ಯೆ ಲೆಕ್ಕದಲ್ಲಿ ತಮಿಳುನಾಡು ಲೋಕಸಭೆ ಕ್ಷೇತ್ರಗಳ ಸಂಖ್ಯೆ 39ರಿಂದ 31ಕ್ಕೆ ಇಳಿಕೆಯಾಗಲಿದೆ ಎಂದಿರುವ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರ ಹೇಳಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ತಳ್ಳಿಹಾಕಿದ್ದಾರೆ. ಕ್ಷೇತ್ರ ವಿಂಗಡಣೆ ಪ್ರಕ್ರಿಯೆ ಕುರಿತು ಸ್ಟಾಲಿನ್ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಹೇಳಿದ್ದಾರೆ.‌ 

ನರೇಂದ್ರ ಮೋದಿ ಸರ್ಕಾರ 2014-24ರ ಅವಧಿಯಲ್ಲಿ ತಮಿಳುನಾಡಿಗೆ 5,08,337 ಕೋಟಿ ರೂ. ಅನುದಾನ ನೀಡಿದೆ ಎಂದು ಗೃಹ ಸಚಿವ ಅಮಿತ್ ಷಾ ಹೇಳಿದರು. 

ಕ್ಷೇತ್ರ ವಿಂಗಡಣೆ ಬಳಿಕ ತಮಿಳುನಾಡು ಸೇರಿದಂತೆ ಯಾವುದೇ ದಕ್ಷಿಣ ರಾಜ್ಯಗಳ ಸಂಸದರ ಸಂಖ್ಯೆ ಕಡಿಮೆಯಾಗುವುದಿಲ್ಲ. ಅಂತಹ ಭಯ ಬೇಡ ಎಂದು ಅಮಿತ್ ಶಾ ಹೇಳಿದ್ದಾರೆ. ಕೊಯಮತ್ತೂರಿನಲ್ಲಿ ಬಿಜೆಪಿ ಕಚೇರಿಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅಮಿತ್ ಶಾ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ 'ವೈಫಲ್ಯ'ದ ಬಗ್ಗೆ ಆಡಳಿತಾರೂಢ ಡಿಎಂಕೆ ಸರ್ಕಾರವನ್ನು ಟೀಕಿಸಿದರು. "ತಮಿಳುನಾಡಿನಲ್ಲಿ ರಾಷ್ಟ್ರ ವಿರೋಧಿ ಪ್ರವೃತ್ತಿ ಹೆಚ್ಚುತ್ತಿದ್ದು ಜನರು ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿಯಾಗಿದೆ" ಎಂದರು.

ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ, ಮಾದಕ ದ್ರವ್ಯಗಳ ಮಾರಾಟಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ಅಕ್ರಮ ಗಣಿ ಮಾಫಿಯಾಗಳು ರಾಜಕೀಯ, ರಾಜಕಾರಣಿಗಳನ್ನು ಭ್ರಷ್ಟಗೊಳಿಸುತ್ತಿದೆ ಎಂದು ಆರೋಪಿಸಿದರು. ಆಡಳಿತ ನಡೆಸುತ್ತಿರುವ ಡಿಎಂಕೆ ಪಕ್ಷದ ಎಲ್ಲಾ ನಾಯಕರು ಭ್ರಷ್ಟಾಚಾರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ" ಎಂದು ರಾಜ್ಯ ಸರ್ಕಾರದ ವಿರುದ್ಧ ಅಮಿತ್ ಶಾ ವಾಗ್ದಾಳಿ ನಡೆಸಿದರು. ‌

Union Home Minister Amit Shah on Wednesday launched a scathing attack on the ruling DMK government in Tamil Nadu, accusing its leaders of corruption and misgovernance.