ಬ್ರೇಕಿಂಗ್ ನ್ಯೂಸ್

Trump Vs Zelenskyy, Talk fight: ಶ್ವೇತ ಭವನದಲ್ಲಿ ಟ್ರಂಪ್ – ಉಕ್ರೇನ್ ಅಧ್ಯಕ್ಷರ ಟಾಕ್ ವಾರ್ ; ಜನರ ಜೀವದ ಜೊತೆ ಚೆಲ್ಲಾವಾಡುತ್ತಿದ್ದೀರಿ, 3ನೇ ಮಹಾಯುದ್ಧಕ್ಕೆ ಹಾತೊರೆಯುತ್ತಿದ್ದೀರಿ, ನಿಮಗೆ ಶಾಂತಿ ಬೇಕಿಲ್ಲ, ಅಮೆರಿಕ ನೆರವಿಲ್ಲದಿದ್ದರೆ ಎರಡೇ ವಾರಕ್ಕೆ ಯುದ್ಧ ಅಂತ್ಯ..!    |    Bike Robbery, Mangalore Police, Crime, TD Nagraj: ಜಾತ್ರೆ, ಕಂಬಳದಲ್ಲಿ ನಿಲ್ಲಿಸಿ ಹೋಗುತ್ತಿದ್ದ ಬೈಕ್ ಗಳೇ ಟಾರ್ಗೆಟ್ ; ಸ್ಪ್ಲೆಂಡರ್ ಕದ್ದು ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಪೊಲೀಸರು, ಮೂಡುಬಿದ್ರೆಯಲ್ಲಿ 20ಕ್ಕೂ ಹೆಚ್ಚು ಕದ್ದ ಬೈಕ್ ಪತ್ತೆ, ನಾಲ್ವರ ಸೆರೆ     |    Farangipete Protest, Diganth, Missing, Mangalore: ಪಿಯುಸಿ ವಿದ್ಯಾರ್ಥಿ ನಾಪತ್ತೆ ಪ್ರಕರಣ ; ಫರಂಗಿಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್, ಇನ್ನೆರಡು ದಿನದಲ್ಲಿ ಬಾಲಕ ಪತ್ತೆಯಾಗದಿದ್ದರೆ ತೀವ್ರ ಪ್ರತಿಭಟನೆ ಎಚ್ಚರಿಕೆ, ಪತ್ತೆಗೆ ಸರ್ವ ಪ್ರಯತ್ನ ಎಂದ ಎಸ್ಪಿ     |   

Trump Vs Zelenskyy, Talk fight: ಶ್ವೇತ ಭವನದಲ್ಲಿ ಟ್ರಂಪ್ – ಉಕ್ರೇನ್ ಅಧ್ಯಕ್ಷರ ಟಾಕ್ ವಾರ್ ; ಜನರ ಜೀವದ ಜೊತೆ ಚೆಲ್ಲಾವಾಡುತ್ತಿದ್ದೀರಿ, 3ನೇ ಮಹಾಯುದ್ಧಕ್ಕೆ ಹಾತೊರೆಯುತ್ತಿದ್ದೀರಿ, ನಿಮಗೆ ಶಾಂತಿ ಬೇಕಿಲ್ಲ, ಅಮೆರಿಕ ನೆರವಿಲ್ಲದಿದ್ದರೆ ಎರಡೇ ವಾರಕ್ಕೆ ಯುದ್ಧ ಅಂತ್ಯ..!  

01-03-25 05:35 pm       HK News Desk   ದೇಶ - ವಿದೇಶ

ಉಕ್ರೇನ್- ರಷ್ಯಾ ಯುದ್ಧದ ನಡುವಲ್ಲೇ ಅಮೆರಿಕದ ವರಸೆ ಬದಲಾಗಿದೆ. ಈವರೆಗೂ ಉಕ್ರೇನಿಗೆ ಸೇನಾ ನೆರವು ನೀಡಿದ್ದ ಅಮೆರಿಕವು ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೇರುತ್ತಿದ್ದಂತೆ ರಷ್ಯಾ ಪರ ನಿಂತಿದೆ. ಇತ್ತೀಚೆಗೆ ತನ್ನ ಬಗ್ಗೆ ಟೀಕಿಸಿದ್ದ ಡೊನಾಲ್ಡ್ ಟ್ರಂಪ್ ಎದುರಲ್ಲೇ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ ಸ್ಕಿ ಕುಳಿತು ವಾಗ್ವಾದ ನಡೆಸಿದ್ದಾರೆ. ಶ್ವೇತ ಭವನದಲ್ಲಿ ನಡೆದ ಇಬ್ಬರು ನಾಯಕರ ವಾಗ್ವಾದ ಈಗ ಜಗತ್ತಿನ ಗಮನ ಸೆಳೆದಿದೆ.

ವಾಷಿಂಗ್ಟನ್, ಮಾ.1: ಉಕ್ರೇನ್- ರಷ್ಯಾ ಯುದ್ಧದ ನಡುವಲ್ಲೇ ಅಮೆರಿಕದ ವರಸೆ ಬದಲಾಗಿದೆ. ಈವರೆಗೂ ಉಕ್ರೇನಿಗೆ ಸೇನಾ ನೆರವು ನೀಡಿದ್ದ ಅಮೆರಿಕವು ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೇರುತ್ತಿದ್ದಂತೆ ರಷ್ಯಾ ಪರ ನಿಂತಿದೆ. ಇತ್ತೀಚೆಗೆ ತನ್ನ ಬಗ್ಗೆ ಟೀಕಿಸಿದ್ದ ಡೊನಾಲ್ಡ್ ಟ್ರಂಪ್ ಎದುರಲ್ಲೇ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ ಸ್ಕಿ ಕುಳಿತು ವಾಗ್ವಾದ ನಡೆಸಿದ್ದಾರೆ. ಶ್ವೇತ ಭವನದಲ್ಲಿ ನಡೆದ ಇಬ್ಬರು ನಾಯಕರ ವಾಗ್ವಾದ ಈಗ ಜಗತ್ತಿನ ಗಮನ ಸೆಳೆದಿದೆ.

ಉಕ್ರೇನ್ ಅಧ್ಯಕ್ಷರನ್ನು ಉದ್ದೇಶಿಸಿ, ನೀವು ಜನರ ಜೀವದ ಜೊತೆಗೆ ಚೆಲ್ಲಾಟ ನಡೆಸುತ್ತಿದ್ದೀರಿ, ಜಗತನ್ನು ಮೂರನೇ ಮಹಾಯುದ್ಧಕ್ಕೆ ನೂಕುತ್ತಿದ್ದೀರಿ ಎಂದು ಟ್ರಂಪ್ ನೇರವಾಗಿ ಕೆಣಕಿದ್ದಾರೆ. ಆದರೆ ಟ್ರಂಪ್ ಮಾತಿಗೆ, ಝೆಲೆನ್ ಸ್ಕಿ ಅಷ್ಟೇ ಬಿರುಸಿನ ಮಾತುಗಳಿಂದ ತಿರುಗೇಟು ನೀಡಿದ್ದಾರೆ.

2014ರಲ್ಲಿ ಪುತಿನ್ ನಮ್ಮ ಮೇಲೆ ದಂಡೆತ್ತಿ ಬಂದು ಉತ್ತರ ಉಕ್ರೇನಿನ ಬಹುಭಾಗ ಮತ್ತು ಕ್ರಿಮಿಯಾವನ್ನು ವಶಕ್ಕೆ ಪಡೆದಿದ್ದರು. ನೀವು ಆವಾಗ ರಷ್ಯಾವನ್ನು ನಿಲ್ಲಿಸಲು ಮುಂದೆ ಬರಲಿಲ್ಲ. ಆಗ ಒಬಾಮಾ ಇದ್ದರು. ಆಮೇಲೆ ಟ್ರಂಪ್, ಬಿಡೆನ್ ಬಂದರು. ಮತ್ತೆ ಟ್ರಂಪ್ ಬಂದಿದ್ದಾರೆ. ಆತ ನಮ್ಮ ಜನರನ್ನು ಕೊಲ್ಲುತ್ತಿದ್ದಾನೆ. ಈಗ ನೀವು ಬಂದು ನಮ್ಮನ್ನು ಯುದ್ಧ ನಿಲ್ಲಿಸಲು ಹೇಳುತ್ತಿದ್ದೀರಿ. ಜರ್ಮನಿ, ಫ್ರಾನ್ಸ್ ನಾಯಕರ ಜೊತೆಗೆ ಒಮ್ಮೆ ಯುದ್ಧ ವಿರಾಮ ಹಾಕಿದ್ದೆವು. ಆದರೆ ಪುತಿನ್ ಮತ್ತೆ ಯುದ್ಧ ನೀತಿ ಉಲ್ಲಂಘನೆ ಮಾಡಿದ್ದಾರೆ. ನಮ್ಮ ಜನರನ್ನು ಜೈಲಿನಲ್ಲಿರಿಸಿದ್ದಾರೆ, ಬಿಡುಗಡೆ ಮಾಡುತ್ತಿಲ್ಲ. ನಮ್ಮ ಜನರನ್ನು ವಿನಾಕಾರಣ ಕೊಲ್ಲುತ್ತಿದ್ದಾರೆ. ನೀವು ನಮಗೆ ಉಪದೇಶ ಮಾಡುತ್ತೀರಾ ಎಂದು ಝೆಲೆನ್ ಸ್ಕಿ ಪ್ರಶ್ನೆ ಮಾಡಿದ್ದಾರೆ.

"ನಮ್ಮ ಸಮಸ್ಯೆಗಳನ್ನು ಅರಿಯಲು ನೀವು ಎಂದಾದರೂ ಉಕ್ರೇನ್‌ಗೆ ಭೇಟಿ ನೀಡಿದ್ದೀರಾ ಎಂದು ಝೆಲೆನ್ಸ್ಕಿ ಅವರು ಅಮೆರಿಕದ ಉಪಾಧ್ಯಕ್ಷ ವ್ಯಾನ್ಸ್ ರನ್ನು ಪ್ರಶ್ನಿಸಿದಾಗ ಸಂಭಾಷಣೆ ಬಿಸಿಯೇರಿತು. ಇದಕ್ಕೆ ವ್ಯಾನ್ಸ್ ಅವರು ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡಿದ್ದೇನೆ. ಆದರೆ ನೀವು ಜನರನ್ನು ಮುಂದಿಟ್ಟು ವಿನಾಶಕ್ಕೊಡ್ಡುವುದು ಯಾಕೆಂದು ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದರು. ನಿಮ್ಮಲ್ಲಿ ಪರಿಹಾರ ಅಂತ ಕಾಣಿಸಬಹುದು. ಆದರೆ ನೀವು ನಮ್ಮ ಸಮಸ್ಯೆಗಳನ್ನು ಅರಿತುಕೊಂಡಿಲ್ಲ. ಭವಿಷ್ಯದಲ್ಲಿ ನೀವು ಇದರ ಪರಿಣಾಮಗಳನ್ನು ಅನುಭವಿಸಲಿದ್ದೀರಿ ಎಂದು ಝೆಲೆನ್ ಸ್ಕಿ ಹೇಳಿದರು. 

ಇದರಿಂದ ಸಿಟ್ಟಿಗೆದ್ದ ಟ್ರಂಪ್ ಅವರು, ನಾವು ಏನನ್ನು ಅನುಭವಿಸುತ್ತೇವೆ ಎಂದು ನಮಗೆ ಹೇಳಬೇಡಿ. ನಾವು ಏನನ್ನು ಅನುಭವಿಸುತ್ತೇವೆ ಎಂದು ನಿರ್ದೇಶಿಸುವ ಸ್ಥಾನದಲ್ಲಿ ನೀವು ಇಲ್ಲ. ನಾವು ನಿಮ್ಮ ಸಮಸ್ಯೆಯನ್ನು ಪರಿಹಾರ ಮಾಡಲು ನೋಡುತ್ತಿದ್ದೇವೆ ಎಂದು ಹೇಳಿದರು. ಅದಕ್ಕುತ್ತರಿಸಿದ ಝೆಲೆನ್ಸ್ ಸ್ಕಿ ನಾವು ನಿಮಗೆ ಹೇಳುತ್ತಾ ಇಲ್ಲ, ನಿಮ್ಮ ಪ್ರಶ್ನೆಗೆ ಉತ್ತರವನ್ನಷ್ಟೇ ಕೊಡುತ್ತಿದ್ದೇವೆ ಎಂದರು.

"ನಾವು ತುಂಬಾ ಒಳ್ಳೆಯವರು ಮತ್ತು ಬಲಶಾಲಿಗಳು ಎಂದು ನಾವು ಭಾವಿಸುತ್ತೇವೆ" ಎಂದು ಹೇಳುವ ಮೂಲಕ ಝೆಲೆನ್ಸ್ಕಿಯನ್ನು ವ್ಯಂಗ್ಯ ಮಾಡಿದ ಟ್ರಂಪ್, ನಾವು ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿಯನ್ನು ಬಯಸುತ್ತೇವೆ ಎಂದು ಹೇಳಿದರು. ನೀವು ಮಿಲಿಯನ್ ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದ್ದೀರಿ. ಮೂರನೇ ಮಹಾಯುದ್ಧಕ್ಕಾಗಿ ಜೂಜಾಟ ಆಡುತ್ತಿದ್ದೀರಿ. ನೀವೇನು ಮಾಡುತ್ತಿದ್ದೀರೋ ತುಂಬ ಅಗೌರವಯುತ ನಡೆ ಎಂದು 78 ವರ್ಷದ ಟ್ರಂಪ್ ಖಾರವಾಗಿ ಉತ್ತರಿಸಿದರು.

ಅಮೆರಿಕ ಇಲ್ಲದಿದ್ದರೆ ನೀವು ಒಂಟಿ ! 

ಅಮೆರಿಕದ ನೆರವು ಇಲ್ಲದಿದ್ದರೆ ಉಕ್ರೇನ್ ಯುದ್ಧ ಎರಡು ವಾರಕ್ಕೆ ಕೊನೆಯಾಗಬಹುದು ಎಂದು ಟ್ರಂಪ್ ಹೇಳಿದಾಗ, ಬೇಡ ಮೂರೇ ದಿನಕ್ಕೆ ಅಂತ ಹೇಳಿ, ಪುತಿನ್ ಆ ರೀತಿ ಹೇಳಿದ್ದನ್ನು ಕೇಳಿಸಿಕೊಂಡಿದ್ದೇನೆ ಎಂದು ಝೆಲೆನ್ ಸ್ಕಿ ಕುಟುಕಿದರು. ನೀವು ಒಬ್ಬಂಟಿಯಾಗಿದ್ದೀರಿ, ನಿಮ್ಮ ಜನರು ಸಾಯುತ್ತಿದ್ದಾರೆ. ನಿಮ್ಮಲ್ಲಿ ಸೈನಿಕರ ಕೊರತೆ ಎದುರಾಗಿದೆ. ಆದರೂ ನಮ್ಮ ಮಾತು ಕೇಳುತ್ತಿಲ್ಲ. ನಾನು ಯಾರ ಪರವಾಗಿಯೂ ಇಲ್ಲ. ನೀವು ಯುದ್ಧ ವಿರಾಮ ಮಾಡಬೇಕೆಂದು ಹೇಳುತ್ತಿಲ್ಲ. ಆದರೆ ನೀವು ಗೌರವಯುತವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಹೇಳುತ್ತಿದ್ದೇನೆ ಎಂದು 40 ನಿಮಿಷಗಳ ಬಿಸಿಯೇರಿದ ಮಾತುಕತೆಗೆ ಟ್ರಂಪ್ ಅಂತ್ಯ ಹಾಡಿದರು. ಇದರ ನಂತರವೂ ಎಕ್ಸ್ ನಲ್ಲಿ ಟ್ರಂಪ್ ಮಾತುಕತೆ ಬಗ್ಗೆ ಬರೆದುಕೊಂಡಿದ್ದು, ಝೆಲೆನ್ ಸ್ಕಿ ಶಾಂತಿ ಬಯಸುತ್ತಿಲ್ಲ. ಮುಂದೆ ಶಾಂತಿ ಬೇಕೆನಿಸಿದಾಗ ನಮ್ಮಲ್ಲಿಗೆ ಬಂದೇ ಬರುತ್ತಾನೆ ಎಂದು ಕುಟುಕಿದ್ದಾರೆ. 

ಉಕ್ರೇನ್ ಗೆ ಯುರೋಪ್ ಬೆಂಬಲ

ಇತ್ತ ಶ್ವೇತ ಭವನದಲ್ಲಿ ಬಿಸಿಬಿಸಿ ವಾಗ್ವಾದ ಮುನ್ನೆಲೆಗೆ ಬರುತ್ತಲೇ ಅತ್ತ ಯುರೋಪಿಯನ್ ನಾಯಕರು ಝೆಲೆನ್ಸ್ಕಿ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.  ಜರ್ಮನಿ ಮತ್ತು ಯುರೋಪ್ ಅನ್ನು ಉಕ್ರೇನ್ ಅವಲಂಬಿಸಬಹುದು ಎಂದು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಭರವಸೆ ನೀಡಿದ್ದು, ಸ್ಪೇನ್ ಮತ್ತು ಪೋಲೆಂಡ್‌ನ ಪ್ರಧಾನ ಮಂತ್ರಿಗಳು ಸಹ ಝೆಲೆನ್ಸ್ಕಿಗೆ ಬೆಂಬಲ ವ್ಯಕ್ತಪಡಿಸಿ ‘ನೀವು ಒಬ್ಬಂಟಿಯಾಗಿಲ್ಲ, ನಾವೂ ನಿಮ್ಮೊಂದಿಗಿದ್ದೇವೆ’ ಎಂದು ಟ್ವೀಟ್ ಮಾಡಿದ್ದಾರೆ.

ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಪ್ರತಿಕ್ರಿಯಿ, ‘ಪ್ರೀತಿಯ ಅಧ್ಯಕ್ಷರೇ, ನೀವು ಎಂದಿಗೂ ಒಂಟಿಯಲ್ಲ. ನಿಮ್ಮ ಘನತೆ ಉಕ್ರೇನಿಯನ್ ಜನರ ಶೌರ್ಯವನ್ನು ಗೌರವಿಸುತ್ತದೆ. ಬಲಶಾಲಿಯಾಗಿರಿ, ಧೈರ್ಯಶಾಲಿಯಾಗಿರಿ, ನಿರ್ಭೀತರಾಗಿರಿ. ನ್ಯಾಯಯುತ ಮತ್ತು ಶಾಶ್ವತ ಶಾಂತಿಗಾಗಿ ನಾವು ನಿಮ್ಮೊಂದಿಗಿದ್ದೇವೆ  ಎಂದು ಟ್ವೀಟ್ ಮಾಡಿದ್ದಾರೆ.

President Donald Trump and Vice President JD Vance on Friday berated Ukrainian President Volodymyr Zelenskyy over the war in Ukraine, accusing him of not showing gratitude after he challenged Vance on the question of diplomacy with Russia’s Vladimir Putin.