ಬ್ರೇಕಿಂಗ್ ನ್ಯೂಸ್
09-03-25 10:49 pm HK News Desk ದೇಶ - ವಿದೇಶ
ದುಬೈ, ಮಾ.9 : ಐಸಿಸಿ ಚಾಂಪ್ಯನ್ಸ್ ಟ್ರೋಫಿ ಟೂರ್ನಮೆಂಟಿನ ರೋಚಕ ಹಣಾಹಣಿಯಲ್ಲಿ ಭಾರತ ಗೆಲುವಿನ ನಗೆ ಬೀರಿದೆ. ಫೈನಲ್ ಪಂದ್ಯಾಟದಲ್ಲಿ ನ್ಯೂಜಿಲಂಡ್ ವಿರುದ್ಧ 252 ರನ್ನುಗಳ ಬೆನ್ನತ್ತಿದ ರೋಹಿತ್ ಶರ್ಮಾ ಪಡೆ ಇನ್ನೂ ಒಂದು ಓವರ್ ಇರುವಾಗಲೇ ಗೆಲುವಿನ ಗೆರೆ ದಾಟುವ ಮೂಲಕ ಮೂರನೇ ಬಾರಿಗೆ ಚಾಂಪ್ಯನ್ಸ್ ಟ್ರೋಫಿ ಕಿರೀಟ ಮುಡಿಗೇರಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲಂಡ್ 50 ಓವರ್ ಗಳಲ್ಲಿ ಏಳು ವಿಕೆಟ್ ಕಳಕೊಂಡು 251 ರನ್ ಕಲೆಹಾಕಿತು. ಇದಕ್ಕುತ್ತರಿಸಿದ ಭಾರತೀಯ ಬಳಗದ ರೋಹಿತ್- ಶುಭಮನ್ ಗಿಲ್ ಆರಂಭವನ್ನು ಉತ್ತಮವಾಗಿ ಮಾಡಿದರೂ, ಸ್ಫೋಟಕ ಬ್ಯಾಟಿಂಗ್ ತಾರೆ ವಿರಾಟ್ ಕೊಹ್ಲಿ ಸ್ಪಿನ್ ಬೌಲಿಂಗ್ ಎದುರಲ್ಲಿ ಎಡವಿದರು. ಒಂದು ರನ್ ಗಳಿಸಿರುವಾಗಲೇ ಕೊಹ್ಲಿ ಅವರು ಮೈಕಲ್ ಬ್ರಾಸ್ವೆಲ್ ಎಸೆತಕ್ಕೆ ಎಲ್ ಬಿಡಬ್ಲ್ಯು ಆದರು. ಕೊಹ್ಲಿ ಆರಂಭದಲ್ಲಿಯೇ ವಿಕೆಟ್ ಕಳಕೊಂಡಿದ್ದು ಭಾರತಕ್ಕೆ ದೊಡ್ಡ ಆಘಾತವನ್ನುಂಟುಮಾಡಿತ್ತು.
ಆದರೆ ರೋಹಿತ್ ಶರ್ಮಾ ನಾಯಕನ ಆಟವಾಡುತ್ತ ತಂಡಕ್ಕೆ ಆಧಾರವಾದರು. ಆರಂಭಿಕ ಶುಭಮನ್ ಗಿಲ್ 31 ರನ್ನಿಗೆ ಔಟಾದರೆ ಕೊಹ್ಲಿ ಒಂದೇ ರನ್ನಿಗೆ ಪೆವಿಲಿಯನ್ ಮರಳಿದ್ದರು. ಆನಂತರ ಬಂದ ಶ್ರೇಯಸ್ ಅಯ್ಯರ್, ರೋಹಿತ್ ಜೊತೆಗೆ ಉತ್ತಮ ಜೊತೆಯಾಟ ನೀಡಿದರು. ರೋಹಿತ್ 83 ಎಸೆತಕ್ಕೆ ಏಳು ಬೌಂಡರಿ ಜೊತೆಗೆ 76 ರನ್ ಮಾಡಿದರೆ, ಶ್ರೇಯಸ್ 48 ರನ್ ಮಾಡಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಅಕ್ಸರ್ ಪಟೇಲ್ (29) ಉತ್ತಮ ಕೊಡುಗೆ ನೀಡಿದರು. ಆದರೆ ಈ ಹಂತದಲ್ಲಿ ತಂಡಕ್ಕೆ ಯಾರೂ ಆಧಾರವಾಗದೆ ಔಟಾಗಿದ್ದರಿಂದ ದಡ ಸೇರುವುದು ಕಷ್ಟ ಎನ್ನುವ ಸನ್ನಿವೇಶ ಎದುರಾಗಿತ್ತು. 203ಕ್ಕೆ ಭಾರತದ 5 ವಿಕೆಟ್ ಪತನವಾಗಿತ್ತು.
ಹೀಗಿರುವಾಗಲೇ ಮತ್ತೊಬ್ಬ ಸ್ಫೋಟಕ ಬ್ಯಾಟ್ಸ್ ಮನ್ ಕೆ.ಎಲ್ ರಾಹುಲ್ 6ನೇ ಕ್ರಮಾಂಕದಲ್ಲಿ ಬಂದು ನ್ಯೂಜಿಲಂಡಿಗರ ಸ್ಪಿನ್ ಬೌಲಿಂಗನ್ನು ಎದುರಿಸುತ್ತ ಸಾಗಿದರು. ಏನೇ ಕಸರತ್ತು ಮಾಡಿದರೂ ಇವರನ್ನು ನಿಯಂತ್ರಿಸುವುದು ನ್ಯೂಜಿಲಂಡ್ ಬೌಲರುಗಳಿಗೆ ಸಾಧ್ಯವಾಗಲೇ ಇಲ್ಲ. 33 ಎಸೆತಕ್ಕೆ 34 ರನ್ ಸಿಡಿಸಿದ ರಾಹುಲ್, ಪಾಂಡ್ಯಾ ಮತ್ತು ಜಡೇಜಾ ಅವರ ಜೊತೆಗೆ ಭಾರತವನ್ನು ಸುಲಭದಲ್ಲಿ ಗೆಲುವಿನ ಗೆರೆ ದಾಟಿಸಿದರು. ಭಾರತ ತಂಡವು 6 ವಿಕೆಟ್ ನಷ್ಟಕ್ಕೆ 254 ರನ್ ಕಲೆ ಹಾಕಿತ್ತು.
ಲೀಗ್ ಪಂದ್ಯಾಟದಲ್ಲಿ ನ್ಯೂಜಿಲಂಡ್ ತಂಡವು ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಸೋಲಿಸಿದ್ದರೂ, ಭಾರತ ವಿರುದ್ಧ ಸೋಲು ಕಂಡಿತ್ತು. ಸೆಮಿ ಫೈನಲ್ ನಲ್ಲಿ ಪ್ರಬಲ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ್ದು ಫೈನಲಿನಲ್ಲಿ ಭಾರತಕ್ಕೆ ಪೈಪೋಟಿ ಒಡ್ಡುವ ಭರವಸೆ ಮೂಡಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆ 251 ರನ್ ಉತ್ತಮ ಮೊತ್ತವನ್ನೇ ಪೇರಿಸಿದ್ದರು. ಡ್ಯಾರಿಲ್ ಮಿಚೆಲ್ 63 ರನ್ ಸೇರಿಸಿದ್ದು ಕಿವೀಸ್ ತಂಡದ ಪರ ಅತ್ಯಧಿಕ ವೈಯಕ್ತಿಕ ಮೊತ್ತವಾಗಿತ್ತು. ಆದರೆ, ನಾಯಕ ರೋಹಿತ್ ಶರ್ಮಾ ಮತ್ತು ಮಧ್ಯಮ ಕ್ರಮಾಂಕದಲ್ಲಿ ಬಂದ ರಾಹುಲ್, ಕೊಹ್ಲಿ ವೈಫಲ್ಯದ ಮಧ್ಯೆಯೂ ಭಾರತ ತಂಡಕ್ಕೆ ಗೆಲುವಿನ ಹಾದಿ ತೋರಿಸಿದರು. ಕೊನೆಯಲ್ಲಿ ರವೀಂದ್ರ ಜಡೇಜಾ ಎರಡು ರನ್ ಬೇಕಿರುವಾಗ ಬೌಂಡರಿ ಹೊಡೆದಿದ್ದರಿಂದ ಒಟ್ಟು ಮೊತ್ತ 254 ಆಗುವಂತಾಗಿತ್ತು.
India are the champions! The crowd erupts in jubilation as Ravindra Jadeja and KL Rahul bask in the glory of a stunning victory. Jadeja smashed the winning runs for India with a four, and raises his arm in celebration. Fireworks light up the sky as the Indian players rush onto the field to celebrate their heroes.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm