ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತೂಗುಯ್ಯಾಲೆ ಬಳಿಕ ಬಂದೇ ಬಿಟ್ಟ ಗಗನಯಾತ್ರಿಗಳು, ಜಗತ್ತಿನೆಲ್ಲೆಡೆ ವಿಜ್ಞಾನಿಗಳ ಸಂಭ್ರಮ, ಗುಜರಾತಿನ ಪೂರ್ವಜರ ಊರಿನಲ್ಲು ಹರ್ಷಾಚರಣೆ  

19-03-25 02:10 pm       HK News Desk   ದೇಶ - ವಿದೇಶ

ಭಾರತ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಕೊನೆಗೂ ಸುರಕ್ಷಿತವಾಗಿ ಭೂಮಿಗೆ ಇಳಿದಿದ್ದಾರೆ. ಆಮೂಲಕ 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಹಿಂದಕ್ಕೆ ಬರಲಾಗುವುದಿಲ್ಲ ಎಂಬಷ್ಟರ ಮಟ್ಟಿಗೆ ಆತಂಕಕ್ಕೆ ಒಳಗಾಗಿದ್ದ ವಿದ್ಯಮಾನಕ್ಕೆ ಅಂತ್ಯ ಬಿದ್ದಿದೆ. ಇತ್ತ ಭಾರತ ಮತ್ತು ವಿದೇಶದಲ್ಲಿ ಸುನಿತಾ ವಿಲಿಯಮ್ಸ್ ಅಭಿಮಾನಿ ಬಳಗ ಸಂಭ್ರಮ ಪಟ್ಟಿದ್ದಾರೆ. 

ನವದೆಹಲಿ, ಮಾ.19 : ಭಾರತ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಕೊನೆಗೂ ಸುರಕ್ಷಿತವಾಗಿ ಭೂಮಿಗೆ ಇಳಿದಿದ್ದಾರೆ. ಆಮೂಲಕ 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಹಿಂದಕ್ಕೆ ಬರಲಾಗುವುದಿಲ್ಲ ಎಂಬಷ್ಟರ ಮಟ್ಟಿಗೆ ಆತಂಕಕ್ಕೆ ಒಳಗಾಗಿದ್ದ ವಿದ್ಯಮಾನಕ್ಕೆ ಅಂತ್ಯ ಬಿದ್ದಿದೆ. ಇತ್ತ ಭಾರತ ಮತ್ತು ವಿದೇಶದಲ್ಲಿ ಸುನಿತಾ ವಿಲಿಯಮ್ಸ್ ಅಭಿಮಾನಿ ಬಳಗ ಸಂಭ್ರಮ ಪಟ್ಟಿದ್ದಾರೆ. 

ನಾಸಾ ವಿಜ್ಞಾನಿ ಸುನಿತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ದೊಡ್ಡ ಸಂಷಕ್ಟಕ್ಕೆ ಸಿಲುಕಿದ್ದರು. 2024ರ ಜೂನ್ 5 ರಂದು ಬೋಯಿಂಗ್ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯಲ್ಲಿ ಗಗನಕ್ಕೆ ಹಾರಿದ್ದ ಇವರು ಎಂಟು ದಿನಗಳಲ್ಲಿ ಹಿಂದಕ್ಕೆ ಮರಳುವುದೆಂದು ನಿಗದಿಯಾಗಿತ್ತು. 8 ದಿನಗಳ ಕಾಲ ಅಲ್ಲಿ ಉಳಿದು, ಕಾರ್ಯಾಚರಣೆ ಆರಂಭಿಸಿ ಹಿಂತಿರುಗುವ ಪ್ಲಾನ್ ಮಾಡಲಾಗಿತ್ತು. 

Image

ISRO welcomes Sunita Williams, wishes to utilise NASA astronauts' expertise  in space exploration | Mint

Image

Image

ಆದರೆ ದಿಢೀರ್ ಆಗಿ ಎದುರಾಗಿದ್ದ ತಾಂತ್ರಿಕ ಸಮಸ್ಯೆಯಿಂದಾಗಿ ಗಗನಯಾತ್ರಿಗಳನ್ನ ಬಾಹ್ಯಾಕಾಶದಲ್ಲಿ ಬಿಟ್ಟು ಸ್ಟಾರ್‌ ಲೈನರ್‌ ಭೂಮಿಗೆ ಮರಳಿತ್ತು. ಹೀಗಾಗಿ 9 ತಿಂಗಳಿನಿಂದ ಅಲ್ಲಿ ಸಿಲುಕಿ ಒದ್ದಾಡುವ ಸ್ಥಿತಿಯಾಗಿತ್ತು. ನಾಸಾ ಜೊತೆಗೆ ಸ್ಪೇಸ್ ಎಕ್ಸ್ ಸಂಸ್ಥೆಯೂ ಸಾಥ್ ನೀಡಿ ಇದೀಗ ತಾಂತ್ರಿಕ ಸಮಸ್ಯೆ ಸರಿಪಡಿಸಿದೆ. ಅದರಂತೆ, ನಾಸಾ ವಿಜ್ಞಾನಿಗಳನ್ನ ಯಶಸ್ವಿಯಾಗಿ ಭೂಮಿಗೆ ಕರೆತರಲಾಗಿದೆ. 

ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಸುನಿತಾ ವಿಲಿಯಮ್ಸ್ ಮತ್ತು ಬುಚ್‌ವಿಲ್ಮೋರ್‌ ಹಾಗೂ ಅವರನ್ನು ಕರೆತರಲು ತೆರಳಿದ್ದ ನಾಸಾ ಗಗನಯಾತ್ರಿ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಅವರನ್ನೊಳಗೊಂಡ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭಾರತೀಯ ಕಾಲಮಾನ ಬುಧವಾರ ಬೆಳಗಿನ ಜಾವ 3:27 ಕ್ಕೆ ಅಮೆರಿಕದ ಫ್ಲೋರಿಡಾ ಕರಾವಳಿಯ ಸಮುದ್ರದಲ್ಲಿ  ಸುರಕ್ಷಿತವಾಗಿ ಲ್ಯಾಂಡ್ ಆಗುತ್ತಿದ್ದಂತೆ ನಾಸಾ ಮತ್ತು ಜಗತ್ತಿನಾದ್ಯಂತ ಬಾಹ್ಯಾಕಾಶ ವಿಜ್ಞಾನಿಗಳು ಸಂಭ್ರಮ ಪಟ್ಟಿದ್ದಾರೆ. 

ಸುನಿತಾ ಪೂರ್ವಜರ ಊರಲ್ಲಿ ಸಂಭ್ರಮಾಚರಣೆ 

ಸುನಿತಾ ವಿಲಿಯಮ್ಸ್ ಅವರ ಪೂರ್ವಜರು ಭಾರತದ ಗುಜರಾತ್ ಮೂಲದವರು. ಗುಜರಾತ್‌ ರಾಜ್ಯದ ಮೆಹ್ಸಾನಾ ಜಿಲ್ಲೆಯಲ್ಲಿ ಸುನೀತಾ ವಿಲಿಯಮ್ಸ್ ಅವರ ಪೂರ್ವಜರ ಹಳ್ಳಿಯ ನಿವಾಸಿಗಳು ಬುಧವಾರ ಬೆಳಗ್ಗೆಯಿಂದಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಸುನಿತಾ ಮತ್ತು ಅವರ ಸಹೋದ್ಯೋಗಿ ಬುಚ್ ವಿಲಿಯಮ್ಸ್ ಅವರನ್ನು ಹೊತ್ತೊಯ್ದ ಸ್ಪೇಸ್‌ಎಕ್ಸ್ ಕ್ಯಾಪ್ಸುಲ್ ಫ್ಲೋರಿಡಾ ಕರಾವಳಿಯಿಂದ ಕೆಳಗೆ ಇಳಿಯುತ್ತಿದ್ದಂತೆ ಕುಣಿದು ಕುಪ್ಪಳಿಸಿದ್ದಾರೆ. ನೇರಪ್ರಸಾರ ವೀಕ್ಷಿಸಲು ಗ್ರಾಮದ ದೇವಾಲಯದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸುನಿತಾ ಭೂಮಿಗೆ ಇಳಿದ ತಕ್ಷಣ ಅಲ್ಲಿನ ನಿವಾಸಿಗಳು ಪಟಾಕಿಗಳನ್ನು ಸಿಡಿಸಿ 'ಹರ್ ಹರ್ ಮಹಾದೇವ್' ಎಂದು ಕೂಗಿ ಸಂತಸ ವ್ಯಕ್ತಪಡಿಸಿದ್ದಾರೆ.

NASA astronauts Sunita Williams and Butch Wilmore’s space saga came to a dramatic end on March 19 when they landed back on Earth on a SpaceX Dragon spacecraft. They were “rescued” by another astronaut Nick Hague, and Russian cosmonaut Aleksandr Gorbunov.