ಬ್ರೇಕಿಂಗ್ ನ್ಯೂಸ್
04-04-25 09:29 pm HK News Desk ದೇಶ - ವಿದೇಶ
ಚೆನ್ನೈ, ಎ.4 : ನಿರೀಕ್ಷೆಯಂತೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆ. ಅಣ್ಣಾಮಲೈ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಅಣ್ಣಾಮಲೈ ಅವರ ಅವಧಿ ಈಗಾಗಲೇ ಮುಗಿದಿದ್ದು, ಶೀಘ್ರದಲ್ಲೇ ಹೊಸ ನಾಯಕನನ್ನು ಆಯ್ಕೆ ಮಾಡಲಾಗುವುದು ಮತ್ತು ನಾನು ಆ ಹುದ್ದೆಯ ರೇಸಿನಲ್ಲಿ ಇಲ್ಲ ಎಂದು ಸ್ವತಃ ಸ್ಪಷ್ಟನೆ ನೀಡಿದ್ದಾರೆ.
ಕೊಯಮತ್ತೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅಣ್ಣಾಮಲೈ, ತಮಿಳುನಾಡು ಬಿಜೆಪಿಯಲ್ಲಿ ಯಾವುದೇ ಸ್ಪರ್ಧೆ ಇಲ್ಲ. ನಾವು ಸರ್ವಾನುಮತದಿಂದ ನಾಯಕನನ್ನು ಆಯ್ಕೆ ಮಾಡುತ್ತೇವೆ. ರಾಜ್ಯ ಬಿಜೆಪಿ ನಾಯಕತ್ವದ ರೇಸ್‌ನಲ್ಲಿ ನಾನಿಲ್ಲ ಎಂದು ಹೇಳುವ ಮೂಲಕ ರಾಜ್ಯಾಧ್ಯಕ್ಷ ಸ್ಥಾನ ತ್ಯಜಿಸುವ ಸುಳಿವು ನೀಡಿದ್ದಾರೆ.
ಎಐಎಡಿಎಂಕೆ ಷರತ್ತಿಗೆ ಒಪ್ಪಿಗೆ
ಅಣ್ಣಾಮಲೈ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಎಐಎಡಿಎಂಕೆ ನಾಯಕರು ಬಿಜೆಪಿ ಹೈಕಮಾಂಡಿಗೆ ಷರತ್ತು ವಿಧಿಸಿದ್ದೇ ಕಾರಣವೆಂದು ಹೇಳಲಾಗುತ್ತಿದೆ. 2026ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿ ಆಗಬೇಕಿದ್ದರೆ ಅಣ್ಣಾಮಲೈ ಆ ಸ್ಥಾನದಲ್ಲಿ ಇರಬಾರದು ಎಂದು ಇತ್ತೀಚೆಗೆ, ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಷರತ್ತು ಹಾಕಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.
2021ರ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಕೂಟದಲ್ಲಿ ಸ್ಪರ್ಧಿಸಿದ್ದರಿಂದ ಬಿಜೆಪಿ ನಾಲ್ಕು ಸ್ಥಾನಗಳನ್ನು ಪಡೆದಿತ್ತು. ಆದರೆ, 2024ರ ಲೋಕಸಭಾ ಚುನಾವಣೆ ವೇಳೆಗೆ, ಅಣ್ಣಾಮಲೈ ತಮ್ಮ ಪಕ್ಷದ ನಾಯಕರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಎಐಎಡಿಎಂಕೆ ಮೈತ್ರಿಯನ್ನು ಮುರಿದಿತ್ತು. ಚುನಾವಣೆಯಲ್ಲಿ ಬಿಜೆಪಿ ಪೈಪೋಟಿ ನೀಡಿದರೂ ಒಂದು ಸ್ಥಾನವನ್ನು ಗೆಲ್ಲಲೂ ಸಾಧ್ಯವಾಗಿರಲಿಲ್ಲ. ಇತ್ತ ಎಐಎಡಿಎಂಕೆಯೂ ಏಕಾಂಗಿ ಸ್ಪರ್ಧೆಯಿಂದ ವೈಫಲ್ಯವನ್ನೇ ಕಂಡಿತ್ತು.
ಇದೀಗ ಮತ್ತೆ ಮೈತ್ರಿ ಮಾತುಕತೆ ನಡೆದಿದ್ದು ತಮಿಳುನಾಡಿನಲ್ಲಿ ಜನಪ್ರಿಯತೆ ಪಡೆಯುತ್ತಿರುವ ಅಣ್ಣಾಮಲೈ ಹೊರಗಿಡಲು ಎಐಎಡಿಎಂಕೆ ನಾಯಕರು ಒಳ ಸಂಚು ಹೂಡಿದ್ದಾರೆ. ಅಲ್ಪ ಸಮಯದಲ್ಲಿ ಅಣ್ಣಾಮಲೈ ಜನಪ್ರಿಯರಾಗಿದ್ದು ಮತ್ತು ಅವರ ಬಿರುಸಿನ ವೇಗಕ್ಕೆ ಜನಬೆಂಬಲವೂ ಸಿಗುತ್ತಿದೆ. ಆದರೆ ಬಿಜೆಪಿಗೂ ಮೈತ್ರಿ ಅನಿವಾರ್ಯ ಆಗಿರುವುದರಿಂದ ಅಣ್ಣಾಮಲೈ ಅವಧಿಯೂ ಮುಗಿದಿರುವುದರಿಂದ ಎರಡನೇ ಬಾರಿಗೆ ಮುಂದುವರಿಸದಿರಲು ನಿರ್ಧರಿಸಿದೆ.
ಪಳನಿಸ್ವಾಮಿ ಮತ್ತು ಅಣ್ಣಾಮಲೈ ಇಬ್ಬರೂ ಗೌಂಡರ್ ಜಾತಿಗೆ ಸೇರಿದವರಾಗಿದ್ದು ಅಣ್ಣಾಮಲೈ ಪೈಪೋಟಿ ತನ್ನ ಸ್ಥಾನಕ್ಕೆ ಕುಂದು ತರಬಹುದು ಎಂಬ ಲೆಕ್ಕಾಚಾರದಲ್ಲಿ ಪಳನಿಸ್ವಾಮಿ ಇದ್ದಾರೆ. ಇವರಿಬ್ಬರೂ ಪಶ್ಚಿಮ ತಮಿಳುನಾಡಿನ ಒಂದೇ ಪ್ರದೇಶದವರು. ಅಣ್ಣಾಮಲೈ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸುವುದಕ್ಕ ಇದೂ ಒಂದು ಕಾರಣ ಆಗಿರಬಹುದು. ಇದಲ್ಲದೆ, ಇಬ್ಬರೂ ಒಂದೇ ಜಾತಿಯವರು ಮುನ್ನೆಲೆಯಲ್ಲಿ ಬೇಡ. ಬೇರೆ ಜಾತಿಯ ನಾಯಕನನ್ನು ಬಿಜೆಪಿಗೆ ನೇಮಿಸುವುದರಿಂದ ಚುನಾವಣೆಯಲ್ಲಿ ಅನುಕೂಲ ಆಗಬಹುದು ಎಂಬ ಲೆಕ್ಕವನ್ನೂ ಬಿಜೆಪಿ ಮುಂದಿಡಲಾಗಿದೆ. ಪ್ರಸ್ತುತ, ಬಿಜೆಪಿ ಅಧ್ಯಕ್ಷ ಹುದ್ದೆಗೆ ತೇವರ್ ಜನಾಂಗದ ನಾಗೇಂದ್ರನ್ ನಾಯನಾರ್ , ದಲಿತ ನಾಯಕ ಮತ್ತು ಕೇಂದ್ರ ಸಚಿವ ಎಲ್. ಮುರುಗನ್ ಮತ್ತು ನಾದರ್ ಜಾತಿಯ ತಮಿಳಿಸೈ ಸೌಂದರರಾಜನ್ ಸೇರಿದಂತೆ ಹಲವರ ಹೆಸರು ಕೇಳಿಬರುತ್ತಿವೆ.
Tamil Nadu BJP President K Annamalai has said that he is not in the race to be the next state chief of the party. He said that there is no scope for a contest or competition in the party and the next president would be elected unanimously.
18-02-26 09:02 pm
HK Desk
ಮಹಾರಾಷ್ಟ್ರದಿಂದ ಬೈಕ್ ನಲ್ಲಿ ಬಾಗಲಕೋಟಗೆ ಬರುತ್ತಿದ...
18-02-26 06:03 pm
ಊಟಕ್ಕೆ ತೆರಳುತ್ತಿದ್ದಾಗ ಭೀಕರ ರಸ್ತೆ ಅಪಘಾತ ; ಬೈಕ್...
17-02-26 10:33 pm
Mohan Das Pai: ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾ...
17-02-26 09:12 pm
ಫೇಲಾದವರನ್ನು ಪಾಸು ಮಾಡುವುದೇ ತಪ್ಪು ; ಕೇರಳದಲ್ಲಿ ಶ...
17-02-26 08:56 pm
17-02-26 08:50 pm
HK Desk
ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು ಸಾವಿನ ಬೆನ್ನ...
16-02-26 12:53 pm
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ; ತಪ್ಪೊಪ್ಪಿಕೊಂಡ...
14-02-26 10:55 pm
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
18-02-26 11:24 pm
Mangaluru Staffer
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸ್ ಔಟ್ ಪೋಸ್ಟ್...
18-02-26 10:46 pm
MIR Group, Mangalore: ಮಂಗಳೂರಿನಲ್ಲಿ ಇಟಲಿಯ ಮೀರ್...
18-02-26 10:24 pm
CA Raghavendra Rao, Death: ಶ್ರೀನಿವಾಸ ಸಮೂಹ ಶಿಕ...
18-02-26 11:19 am
Parameshwara in Mangalore: ಶಾಸಕರು ವಿದೇಶಕ್ಕೆ ತ...
17-02-26 12:42 pm
18-02-26 09:16 pm
Mangaluru Staffer
Mangalore Shivabagh Suicide: ಕೈ ಕೊಯ್ದುಕೊಂಡು ರ...
18-02-26 07:42 pm
Hassan Murder: ಆಸ್ತಿ ವಿಚಾರಕ್ಕೆ ತಕರಾರು, ಕೋರ್ಟ್...
18-02-26 07:10 pm
ಪಾಕಿಸ್ತಾನಕ್ಕೆ ಭಾರತೀಯ ನೌಕಾಪಡೆ, ಹಡಗುಗಳ ರಹಸ್ಯ ಮಾ...
18-02-26 01:52 pm
ಬೆಚ್ಚಿಬೀಳಿಸಿದ ಎಂಬಿಎ ವಿದ್ಯಾರ್ಥಿನಿ ಹತ್ಯೆ ಪ್ರಕರಣ...
17-02-26 03:03 pm