Waqf land in India: ದೇಶದಲ್ಲಿ ಒಟ್ಟು ಎಷ್ಟು ವಕ್ಫ್ ಆಸ್ತಿಗಳಿವೆ ಗೊತ್ತಾ ? ವಕ್ಫ್ ಮಂಡಳಿ ಮಾಹಿತಿ ಕೇಳಿದರೆ ಬೆಚ್ಚಿ ಬೀಳ್ತೀರಾ..! ಒಟ್ಟು 38.16 ಲಕ್ಷ ಎಕರೆ ವಕ್ಫ್ ಭೂಮಿ ! ರಾಜ್ಯವಾರು ಪಟ್ಟಿ ಇಲ್ಲಿದೆ ಆಸ್ತಿ ಲೆಕ್ಕ ! 

06-04-25 06:39 pm       HK News Desk   ದೇಶ - ವಿದೇಶ

ಸಂಸತ್ತಿನ ಎರಡೂ ಸದನಗಳಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ಅನುಮೋದನೆ ಪಡೆದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಸೂದೆಗೆ ಅಂಕಿತ ಹಾಕಿದ್ದಾರೆ. ಇದರ ಬೆನ್ನಲ್ಲೇ ದೇಶದ ಹಲವು ಕಡೆಗಳಲ್ಲಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ. 

ನವದೆಹಲಿ, ಎ.6: ಸಂಸತ್ತಿನ ಎರಡೂ ಸದನಗಳಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ಅನುಮೋದನೆ ಪಡೆದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಸೂದೆಗೆ ಅಂಕಿತ ಹಾಕಿದ್ದಾರೆ. ಇದರ ಬೆನ್ನಲ್ಲೇ ದೇಶದ ಹಲವು ಕಡೆಗಳಲ್ಲಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ. 

ಇದೇ ವೇಳೆಗೆ, ದೇಶದಲ್ಲಿ ಒಟ್ಟು ಎಷ್ಟು ವಕ್ಫ್ ಹೆಸರಿನ‌ ಆಸ್ತಿಗಳಿವೆ, ಅವುಗಳ ವಿಸ್ತೀರ್ಣ ಎಷ್ಟು ಎನ್ನುವ ಚರ್ಚೆ ಆರಂಭಗೊಂಡಿದೆ. 2025ರ ಮಾರ್ಚ್‌ ವೇಳೆಗೆ ದೇಶಾದ್ಯಂತ 8.72 ಲಕ್ಷ ವಕ್ಫ್ ಆಸ್ತಿಗಳಿರುವುದಾಗಿ ವಕ್ಫ್ ಮಂಡಳಿಯೇ ಮಾಹಿತಿ ನೀಡಿದೆ. ಇದಲ್ಲದೆ, ಇವುಗಳ ಒಟ್ಟು ವಿಸ್ತೀರ್ಣ 38 ಲಕ್ಷ ಎಕರೆಗಿಂತಲೂ ಹೆಚ್ಚು ಎಂಬುದಾಗಿ ವಕ್ಫ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಆಫ್ ಇಂಡಿಯಾ (ಡಬ್ಲ್ಯೂಎಎಂಎಸ್‌ಐ) ಪೋರ್ಟಲ್‌ನಲ್ಲಿ ಈ ಮಾಹಿತಿ ನೀಡಲಾಗಿದೆ. 

ರಾಜ್ಯವಾರು ನೋಡಿದರೆ, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ವಕ್ಫ್‌ ಆಸ್ತಿಗಳಿವೆ. ದೇಶದ ಅತಿ ದೊಡ್ಡ ರಾಜ್ಯದಲ್ಲಿರುವ ಸುನ್ನಿ ವಕ್ಫ್‌ ಮಂಡಳಿ ಹೆಸರಿನಲ್ಲಿ 2.17 ಲಕ್ಷ ವಕ್ಫ್ ಆಸ್ತಿ ಇದೆ. ಆದರೆ ಇದರ ಒಟ್ಟು ವಿಸ್ತೀರ್ಣದ ಅಂಕಿ - ಅಂಶಗಳು ಲಭ್ಯವಿಲ್ಲ. ಪಶ್ಚಿಮ ಬಂಗಾಳದಲ್ಲಿ 80,480 ವಕ್ಫ್‌ ಆಸ್ತಿಗಳಿದ್ದರೆ, ಪಂಜಾಬ್‌ನಲ್ಲಿ 75,965, ತಮಿಳುನಾಡಿನಲ್ಲಿ 66,092 ಮತ್ತು ಕರ್ನಾಟಕದಲ್ಲಿ 62,830 ವಕ್ಫ್‌ ಆಸ್ತಿಗಳಿರುವುದಾಗಿ ಮಾಹಿತಿ ನೀಡಲಾಗಿದೆ. ಅತಿ ಹೆಚ್ಚು ಆಸ್ತಿಗಳ ಪೈಕಿ ನಮ್ಮ ರಾಜ್ಯ ಐದನೇ ಸ್ಥಾನದಲ್ಲಿವೆ. 

ರಾಜ್ಯವಾರು ಲಭ್ಯ ವಕ್ಫ್‌ ಆಸ್ತಿಗಳ ವಿಸ್ತೀರ್ಣ ನೋಡಿದರೆ, ಮಧ್ಯಪ್ರದೇಶದಲ್ಲಿ ಗರಿಷ್ಠ 6.79 ಲಕ್ಷ ಎಕರೆ ವಕ್ಫ್‌ ಭೂಮಿ ಇದೆ. ತಮಿಳುನಾಡಿನಲ್ಲಿ 6.55 ಲಕ್ಷ ಎಕರೆ ಇದ್ದು, ಮೂರನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 5.96 ಲಕ್ಷ ಎಕರೆ ವಕ್ಫ್‌ ಜಮೀನಿದೆ.  

  • ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯಲ್ಲಿ     62,830 ಆಸ್ತಿಗಳಿದ್ದು ಒಟ್ಟು 5,96,516.61 ಎಕರೆ ವಿಸ್ತೀರ್ಣದ ಭೂಮಿ ಇದೆ. 
  • ತಮಿಳುನಾಡು ವಕ್ಫ್ ಮಂಡಳಿಯಲ್ಲಿ    66,092     ಆಸ್ತಿಗಳಿದ್ದು ಅದರ ವಿಸ್ತೀರ್ಣ 6,55,003.2 ಎಕರೆ ಇದೆ. 
  • ಮಧ್ಯಪ್ರದೇಶ ವಕ್ಫ್ ಮಂಡಳಿಯಲ್ಲಿ    33,472 ಆಸ್ತಿಗಳಿದ್ದು ಒಟ್ಟು    6,79,072.39 ಎಕರೆ ವಿಸ್ತೀರ್ಣ ಇದೆ. 
  • ರಾಜಸ್ಥಾನ ಮುಸ್ಲಿಂ ವಕ್ಫ್‌ ಮಂಡಳಿ    30,895 ಆಸ್ತಿಗಳಿದ್ದು ಅದರ ವಿಸ್ತೀರ್ಣ    5,09,725.57 ಎಕರೆ ಇದೆ. 
  • ಜಮ್ಮು ಮತ್ತು ಕಾಶ್ಮೀರ ವಕ್ಫ್‌ ಮಂಡಳಿಯಲ್ಲಿ ಒಟ್ಟು    32,533     ಆಸ್ತಿಗಳಿದ್ದು ಅವುಗಳ ವಿಸ್ತೀರ್ಣ  3,50,300.75 ಎಕರೆ ಇದೆ. 
  • ಮಹಾರಾಷ್ಟ್ರ ವಕ್ಫ್‌ ಮಂಡಳಿಯಲ್ಲಿ     36,701 ಆಸ್ತಿಗಳಿದ್ದು     2,01,105.17 ಎಕರೆ ವಿಸ್ತೀರ್ಣ ಇದೆ. 
  • ಯು.ಪಿ. ಸುನ್ನಿ ಸೆಂಟ್ರಲ್ ವಕ್ಫ್‌ ಮಂಡಳಿಯಲ್ಲಿ ಒಟ್ಟು    2,17,161    ಆಸ್ತಿಗಳಿದ್ದು ಅವುಗಳ ವಿಸ್ತೀರ್ಣ ಬಗ್ಗೆ ಮಾಹಿತಿ ಲಭ್ಯವಿಲ್ಲ
  • ತೆಲಂಗಾಣ ರಾಜ್ಯ ವಕ್ಫ್ ಮಂಡಳಿಯಲ್ಲಿ    45,682 ಆಸ್ತಿಗಳಿದ್ದು ಅವುಗಳ ವಿಸ್ತೀರ್ಣ    1,43,305.89 ಎಕರೆಯಷ್ಟಿದೆ. 
  • ಬಿಹಾರ ರಾಜ್ಯ (ಸುನ್ನಿ) ವಕ್ಫ್ ಮಂಡಳಿಯಲ್ಲಿ    6,866 ಆಸ್ತಿಗಳಿದ್ದು    1,69,344.82 ಎಕರೆ ವ್ಯಾಪ್ತಿಯಲ್ಲಿದೆ. 
  • ಗುಜರಾತ್ ರಾಜ್ಯ ವಕ್ಫ್ ಮಂಡಳಿಯಲ್ಲಿ     39,940 ಆಸ್ತಿಗಳಿದ್ದು ಒಟ್ಟು     86,438.95 ಎಕರೆ ವಿಸ್ತೀರ್ಣ ಹೊಂದಿದೆ. 
  • ಪಶ್ಚಿಮ ಬಂಗಾಳ ವಕ್ಫ್‌ ಮಂಡಳಿಯಡಿ     80,480 ಆಸ್ತಿಗಳಿದ್ದು     82,011.84 ಎಕರೆ ವಿಸ್ತೀರ್ಣ ಇದೆ. 
  • ಆಂಧ್ರ ಪ್ರದೇಶ ರಾಜ್ಯ ವಕ್ಫ್ ಮಂಡಳಿಯಲ್ಲಿ    14,685 ಆಸ್ತಿಗಳಿದ್ದು    78,229.97 ಎಕರೆ ವಿಸ್ತೀರ್ಣ ಇದೆ. 
  • ಪಂಜಾಬ್ ವಕ್ಫ್ ಮಂಡಳಿಯಲ್ಲಿ    75,965 ಆಸ್ತಿಗಳಿದ್ದು    72,867.89 ಎಕರೆ ವಿಸ್ತೀರ್ಣ ಇದೆ. 
  • ಪುದುಚೇರಿ ರಾಜ್ಯ ವಕ್ಫ್ ಮಂಡಳಿ    693 ಆಸ್ತಿಗಳಿದ್ದು    352.67 ಎಕರೆ ವಿಸ್ತೀರ್ಣ ಇದೆ. 
  • ಕೇರಳ ರಾಜ್ಯ ವಕ್ಫ್ ಮಂಡಳಿಯಲ್ಲಿ    53,282 ಆಸ್ತಿಗಳಿದ್ದು ಒಟ್ಟು    36,167.21 ಎಕರೆ ವಿಸ್ತೀರ್ಣ ಇದೆ. 
  • ಹರಿಯಾಣ ವಕ್ಫ್ ಮಂಡಳಿಯಲ್ಲಿ     23,267 ಆಸ್ತಿಗಳಿದ್ದು    36,482.4 ಎಕರೆ ವಿಸ್ತೀರ್ಣ ಇದೆ. 
  • ಹಿಮಾಚಲ ಪ್ರದೇಶ ವಕ್ಫ್ ಮಂಡಳಿಯಲ್ಲಿ    5,343 ಆಸ್ತಿಗಳಿದ್ದು    8,727.6 ಎಕರೆ ವಿಸ್ತೀರ್ಣ ಹೊಂದಿದೆ. 
  • ಅಸ್ಸಾಂ ವಕ್ಫ್‌ ಮಂಡಳಿಯಲ್ಲಿ    2,654 ಆಸ್ತಿಗಳಿದ್ದು    6,618.14 ಎಕರೆ ವಿಸ್ತೀರ್ಣ ಹೊಂದಿದೆ. 
  • ಛತ್ತೀಸ್‌ಗಢ ರಾಜ್ಯ ವಕ್ಫ್ ಮಂಡಳಿಯಲ್ಲಿ    4,230 ಆಸ್ತಿಗಳಿದ್ದು    12,347.1 ಎಕರೆ ಇದೆ. 
  • ಯು.ಪಿ. ಶಿಯಾ ಸೆಂಟ್ರಲ್ ವಕ್ಫ್‌ ಮಂಡಳಿಯಲ್ಲಿ    15,386     ಆಸ್ತಿಗಳಿದ್ದು  20,483 ಎಕರೆ ವಿಸ್ತೀರ್ಣ ಹೊಂದಿದೆ. 
  • ಒಡಿಶಾ ವಕ್ಫ್‌ ಮಂಡಳಿಯಲ್ಲಿ    10,314 ಆಸ್ತಿಗಳಿದ್ದು    28,714.65 ಎಕರೆ ವಿಸ್ತೀರ್ಣ ಇದೆ. 
  • ಬಿಹಾರ ರಾಜ್ಯ (ಶಿಯಾ) ವಕ್ಫ್ ಮಂಡಳಿಯಲ್ಲಿ    1,750 ಆಸ್ತಿಗಳಿದ್ದು    29,009.52 ಎಕರೆ ಇದೆ. 
  • ಮಣಿಪುರ ರಾಜ್ಯ ವಕ್ಫ್ ಮಂಡಳಿಯಲ್ಲಿ    991 ಆಸ್ತಿಗಳಿದ್ದು    10,077.44 ಎಕರೆ ಇದೆ. 
  • ಮೇಘಾಲಯ ವಕ್ಫ್‌ ಮಂಡಳಿಯಲ್ಲಿ    58     ಆಸ್ತಿಗಳಿದ್ದು 889.07 ಎಕರೆ ಇದೆ. 
  • ಜಾರ್ಖಂಡ್ ರಾಜ್ಯ (ಸುನ್ನಿ) ವಕ್ಫ್ ಮಂಡಳಿ-    698 ಆಸ್ತಿಗಳಿದ್ದು     1,084.76 ಎಕರೆ ಇದೆ. 
  • ತ್ರಿಪುರ ವಕ್ಫ್‌ ಮಂಡಳಿ-     2,814 ಆಸ್ತಿಗಳಿದ್ದು    1,015.73 ಎಕರೆ ಹೊಂದಿದೆ. 
  • ಲಕ್ಷದ್ವೀಪ ರಾಜ್ಯ ವಕ್ಫ್ ಮಂಡಳಿಯಲ್ಲಿ    896 ಆಸ್ತಿಗಳಿದ್ದು    143.81 ಎಕರೆ ಇದೆ. 
  • ಅಂಡಮಾನ್ ಮತ್ತು ನಿಕೋಬಾರ್ ವಕ್ಫ್ ಮಂಡಳಿ-     151    ಆಸ್ತಿಗಳಿದ್ದು 178.09 ಎಕರೆ ಇದೆ.
  • ದೆಹಲಿ ವಕ್ಫ್ ಮಂಡಳಿ    1,047    ಆಸ್ತಿಗಳಿದ್ದು 28.09 ಎಕರೆ ಇದೆ. 
  • ಉತ್ತರಾಖಂಡ್ ವಕ್ಫ್ ಮಂಡಳಿ    - 5,388 ಆಸ್ತಿಗಳಿದ್ದು     21.8 ಎಕರೆ ಇದೆ. 
  • ಚಂಡೀಗಢ ವಕ್ಫ್ ಮಂಡಳಿಯಲ್ಲಿ    34     ಆಸ್ತಿಗಳಿದ್ದು 23.26 ಎಕರೆ ವ್ಯಾಪ್ತಿ ಇದೆ. 
  • ದಾದ್ರಾ ಮತ್ತು ನಗರ್ ಹವೇಲಿ ವಕ್ಫ್ ಮಂಡಳಿಯಲ್ಲಿ    30     ಆಸ್ತಿಯಿದ್ದು 4.41 ಎಕರೆ ಇದೆ. 

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸೇರಿ ಒಟ್ಟು 8,72,328 ಆಸ್ತಿಗಳಿದ್ದು     ಅವುಗಳ ಒಟ್ಟು ವಿಸ್ತೀರ್ಣ 38,16,291.788 (38.16 ಲಕ್ಷ ) ಎಕರೆ ವ್ಯಾಪ್ತಿಯನ್ನು ಹೊಂದಿದೆ.

After two days of intense debate totalling over 25 hours in both House, Parliament early Friday cleared the Waqf Amendment Bill. It will now go to President Droupadi Murmu for her nod before it becomes an Act.