ಬ್ರೇಕಿಂಗ್ ನ್ಯೂಸ್
12-04-25 09:01 pm HK News Desk ದೇಶ - ವಿದೇಶ
ಕೊಲ್ಕತ್ತಾ, ಎ.12: ವಕ್ಫ್ ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಪ್ರತಿಭಟನೆ ಹಿಂಸಾರೂಪಕ್ಕಿಳಿದಿದ್ದು, ತಂದೆ- ಮಗ ಸೇರಿ ಮೂವರು ಉದ್ರಿಕ್ತರಿಂದ ಚೂರಿ ಇರಿತಕ್ಕೊಳಗಾಗಿ ಮತ್ತು ಪೊಲೀಸರ ಗುಂಡಿನೇಟಿಗೆ ಸಾವಿಗೀಡಾಗಿದ್ದಾರೆ. ಶನಿವಾರ ಬೆಳಗ್ಗಿನಿಂದಲೇ ಜನರು ಬೀದಿಗಿಳಿದು ಹಿಂಸೆಗೆ ಇಳಿದಿದ್ದು, ಪೊಲೀಸರು ಅಶ್ರುವಾಯು ಸಿಡಿಸಿ ಚದುರಿಸಲು ಯತ್ನಿಸಿದ್ದಾರೆ. ಅಲ್ಲದೆ, ಹಿಂಸಾನಿರತರನ್ನು ಪೊಲೀಸರು ಬಂಧಿಸಲು ಮುಂದಾಗಿದ್ದಾರೆ. ಘಟನೆ ಸಂಬಂಧಿಸಿ ಪೊಲೀಸರು ನೂರಾರು ಮಂದಿಯನ್ನು ಬಂಧಿಸಿದ್ದಾರೆ.
ಇದೇ ವೇಳೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿವ ಮಮತಾ ಬ್ಯಾನರ್ಜಿ ಯಾವುದೇ ಕಾರಣಕ್ಕೂ ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ವಕ್ಫ್ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇವರ ಹೇಳಿಕೆಯನ್ನು ಖಂಡಿಸಿ ರಾಜ್ಯದ ಕೆಲವು ಕಡೆಗಳಲ್ಲಿ ಬಿಜೆಪಿಯಿಂದಲೂ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆದಿದೆ. ಸಂಸೇರ್ ಗಂಜ್ ಬಳಿಯ ಜಾಫರಾಬಾದ್ ಪ್ರದೇಶದಲ್ಲಿ ಮನೆಯ ಎದುರಲ್ಲೇ ತಂದೆ- ಮಗನನ್ನು ಚೂರಿಯಿಂದ ಇರಿದು ಕೊಲ್ಲಲಾಗಿದೆ. ಇದೇ ಪ್ರದೇಶದ ಧುಲಿಯಾನ್ ಎಂಬಲ್ಲಿ ಪೊಲೀಸರಿಂದ ಪ್ರಯೋಗಿಸಲ್ಪಟ್ಟ ಗುಂಡಿನೇಟು ಪಡೆದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ಬಿಎಸ್ಎಫ್ ಯೋಧರನ್ನು ನಿಯೋಜನೆ ಮಾಡಲಾಗಿದ್ದು ಅಶ್ರುವಾಯು ಸಿಡಿಸಿ ಉದ್ರಿಕ್ತರನ್ನು ಹತೋಟಿಗೆ ತರುತ್ತಿದ್ದಾರೆ.
ಪೊಲೀಸರು 118 ಮಂದಿಯನ್ನು ಬಂಧಿಸಿದ್ದಾರೆ ಎನ್ನಲಾಗುತ್ತಿದ್ದು ಬಂಧಿತರ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆಯಿದೆ. ಜನರು ಸೋಶಿಯಲ್ ಮೀಡಿಯಾದಲ್ಲಿ ಬರುವ ಪ್ರಚೋದನೆಗಳಿಗೆ ಕಿವಿಗೊಡಬೇಡಿ. ಶಾಂತಿ ಕಾಪಾಡಿ ಎಂದು ಎಡಿಜಿಪಿ ಜಾವೇದ್ ಶಾಹೀಮ್ ಹೇಳಿಕೆ ನೀಡಿದ್ದಾರೆ. ಸಿಎಂ ಬ್ಯಾನರ್ಜಿ ಅವರೂ ಜನರಲ್ಲಿ ಶಾಂತಿ ಕಾಪಾಡಲು ಕರೆ ನೀಡಿದ್ದು ಹಿಂಸೆ ಮಾಡಬೇಡಿ, ನಾವು ಕಾನೂನು ಜಾರಿಗೆ ತರಲು ಬಿಡುವುದಿಲ್ಲ. ಧರ್ಮ, ರಾಜಕೀಯ ಕಾರಣಕ್ಕೆ ಜನರು ಬೀದಿಗೆ ಬರಬೇಡಿ. ಕಾನೂನನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದು, ಜನರ ವಿರೋಧಕ್ಕೆ ಅವರೇ ಉತ್ತರ ನೀಡಬೇಕು ಎಂದಿದ್ದಾರೆ.
ಶುಕ್ರವಾರ ಮುಸ್ಲಿಂ ಬಾಹುಳ್ಯದ ಜಿಲ್ಲೆಗಳಾದ ಮುರ್ಶಿದಾಬಾದ್, ಮಾಲ್ಡಾ, ಸೌತ್ 24 ಪರಗಣ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ವ್ಯಾಪಕ ಪ್ರತಿಭಟನೆ ಭುಗಿಲೆದ್ದಿತ್ತು. ಹಲವಾರು ವಾಹನಗಳು, ಪೊಲೀಸರ ಜೀಪು, ವ್ಯಾನ್ ಗಳಿಗೆ ಬೆಂಕಿ ಹಚ್ಚಲಾಗಿದ್ದು, ಪೊಲೀಸರ ಮೇಲೆ ಕಲ್ಲು ತೂರಲಾಗಿದೆ. ರಸ್ತೆ ತಡೆ ಮಾಡಿ ಭದ್ರತಾ ಸಿಬಂದಿಗಳ ಮೇಲೂ ದಾಳಿ ನಡೆಸಲಾಗಿದೆ. ಇದೇ ವೇಳೆ ಬಿಜೆಪಿ ರಾಜ್ಯದ ಆಡಳಿತ ನಡೆಸುತ್ತಿರುವ ತೃಣಮೂಲ ಕಾಂಗ್ರೆಸ್ ಸರಕಾರವನ್ನು ಟೀಕಿಸಿದೆ. ಪ್ರತಿಭಟನೆ ಹತ್ತಿಕ್ಕಲು ಸಾಧ್ಯವಾಗದಿದ್ದರೆ ಕೇಂದ್ರದ ಸಹಾಯ ಕೇಳಿ. ಜಿಹಾದಿಗಳು ಸರಕಾರ ಮತ್ತು ಆಡಳಿತವನ್ನು ಕೈಗೆ ತೆಗೆದುಕೊಂಡಿದ್ದು, ಕಾನೂನು ಸುವ್ಯವಸ್ಥೆ ಹದಗೆಡುವಂತೆ ಮಾಡಿದ್ದಾರೆ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.
ಹಿಂಸಾಗ್ರಸ್ತ ಘಟನೆಗೆ ಭಯೋತ್ಪಾದಕರ ಬೆಂಬಲವಿದ್ದು, ಈ ಬಗ್ಗೆ ಎನ್ಐಎ ತನಿಖೆ ನಡೆಸಬೇಕೆಂದು ಸುವೇಂದು ಅಧಿಕಾರಿ ಕೇಂದ್ರ ಮತ್ತು ಹೈಕೋರ್ಟಿಗೆ ದೂರು ನೀಡಿದ್ದಾರೆ. ಹೈಕೋರ್ಟ್ ಕೇಂದ್ರದ ಭದ್ರತಾ ಪಡೆಗಳನ್ನು ನಿಯೋಜಿಸಿ ಹಿಂಸೆಯನ್ನು ನಿಯಂತ್ರಣಕ್ಕೆ ತರುವಂತೆ ಸೂಚನೆ ನೀಡಿದೆ. ಇದೇ ವೇಳೆ, ಹಿಂಸಾಪೀಡಿತ ಜಿಲ್ಲೆಗಳಲ್ಲಿ ಇಂಟರ್ನೆಟ್ ನಿರ್ಬಂಧಿಸಲಾಗಿದ್ದು, ಅಲ್ಲಿ ಏನಾಗುತ್ತಿದೆ ಎನ್ನುವ ವಿಚಾರ ಹೊರಗೆ ಬರುತ್ತಿಲ್ಲ ಎಂದೂ ಬಿಜೆಪಿ ನಾಯಕರು ಟೀಕಿಸಿದ್ದಾರೆ.
Three deaths have been reported in Waqf-related violence at Samserganj in West Bengal's Murshidabad, news agency PTI quoted police as saying on Saturday, shortly after which the Calcutta high court ordered the deployment of the central forces in the clash-hit district.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm