ಬ್ರೇಕಿಂಗ್ ನ್ಯೂಸ್
25-04-25 02:54 pm HK News Desk ದೇಶ - ವಿದೇಶ
ಶ್ರೀನಗರ, ಎ.25 : ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಲಷ್ಕರ್ ಉಗ್ರರಾದ ಆದಿಲ್ ತೋಕರ್ ಮತ್ತು ಆಸಿಫ್ ಶೇಖ್ ಅವರ ಮನೆಗಳನ್ನು ಭದ್ರತಾ ಪಡೆಗಳು ಸ್ಫೋಟಕ ಇಟ್ಟು ಉಡಾಯಿಸಿವೆ. ಅನಂತನಾಗ್ ಮತ್ತು ಆವಂತಿಪೋರಾದಲ್ಲಿ ಇವರ ಮನೆಗಳಿದ್ದವು. ಗುರುವಾರ ರಾತ್ರಿ ಸಣ್ಣ ಸ್ಫೋಟಕ ಇಟ್ಟು ಆ ಎರಡೂ ಮನೆಗಳನ್ನು ನೆಲಸಮ ಮಾಡಲಾಗಿದೆ.
ಭದ್ರತಾ ಪಡೆಗಳು ಸ್ಫೋಟಕ್ಕೂ ಮುನ್ನ ಮನೆಯೊಳಗೆ ಸರ್ಚ್ ಕಾರ್ಯಾಚರಣೆ ನಡೆಸಿದ್ದು, ಮನೆಯವರನ್ನು ಹೊರಕ್ಕೆ ಕಳಿಸಿ ಎರಡೂ ಮನೆಗಳನ್ನು ನೆಲಸಮ ಮಾಡಲಾಗಿದೆ. ಆದಿಲ್ ಹುಸೇನ್ ತೋಕರ್ ಮತ್ತು ಆಸಿಫ್ ಶೇಖ್ ಅವರ ಮನೆಗಳು ಸ್ಫೋಟದಿಂದ ಉರುಳಿ ಬೀಳುವ ದೃಶ್ಯಗಳನ್ನು ಸೇನಾಪಡೆ ಬಿಡುಗಡೆ ಮಾಡಿದೆ. ಆದಿಲ್ ಹುಸೇನ್ 2018ರಲ್ಲಿ ಅಟ್ಟಾರಿ – ವಾಗಾ ಗಡಿ ಮೂಲಕ ಪಾಕಿಸ್ತಾನಕ್ಕೆ ತೆರಳಿದ್ದು, ಐದು ವರ್ಷಗಳ ಕಾಲ ಉಗ್ರವಾದಿ ತರಬೇತಿ ಪಡೆದು ಕಳೆದ ವರ್ಷ ಜಮ್ಮು ಕಾಶ್ಮೀರಕ್ಕೆ ಮರಳಿದ್ದ. ಪಹಲ್ಗಾಮ್ ಭಯೋತ್ಪಾದಕ ಕೃತ್ಯದಲ್ಲಿ ಇತರರಿಗೆ ಗೈಡ್ ಮಾಡುವುದು ಮತ್ತು ಶಸ್ತ್ರಾಸ್ತ್ರ ಪೂರೈಕೆಯನ್ನು ಆದಿಲ್ ಮಾಡಿದ್ದ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಜಮ್ಮು ಕಾಶ್ಮೀರ ಪೊಲೀಸರು ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾದ ಆದಿಲ್ ತೋಕರ್, ಆಲಿ ಭಾಯ್ ಮತ್ತು ಹಾಶಿಮ್ ಮೂಸಾ ಎಂಬ ಉಗ್ರರ ಮಾಹಿತಿ ನೀಡಿದವರಿಗೆ ತಲಾ 20 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ಈ ಮೂವರೇ ಪಹಲ್ಗಾಮ್ ದಾಳಿಯನ್ನು ಸಂಘಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೋಡ್ ಹೆಸರಾದ ಮೂಸಾ, ಯೂನುಸ್ ಮತ್ತು ಆಸಿಫ್ ಹೆಸರಲ್ಲಿ ಇವರು ಪಹಲ್ಗಾಮ್ ಕೃತ್ಯವನ್ನು ನಡೆಸಿದ್ದಾರೆಂದು ಗುಪ್ತಚರ ಸಂಸ್ಥೆಗಳು ಹೇಳುತ್ತಿವೆ. ಆದರೆ ಸ್ಥಳೀಯರ ಪ್ರಕಾರ, ಘಟನೆಯಲ್ಲಿ ಆರು ಮಂದಿ ಉಗ್ರರು ಭಾರತೀಯ ಯೋಧರಂತೆ ಸಮವಸ್ತ್ರ ಧರಿಸಿದ್ದರು. ಪ್ರವಾಸಿಗರ ಧರ್ಮ ಕೇಳಿ ತಲೆಗೆ ಗುಂಡಿಕ್ಕಿದ್ದರು ಎನ್ನುವ ಮಾಹಿತಿ ಇದೆ.
ಎಪ್ರಿಲ್ 22ರಂದು ಮಧ್ಯಾಹ್ನ 1.30ರ ಸುಮಾರಿಗೆ ಪ್ರವಾಸಿಗರು ಮಂಜು ಬಿದ್ದ ಬೈಸಾರಣ್ ಪ್ರದೇಶದಲ್ಲಿ ಫೇಟೋ ತೆಗೆಯುತ್ತ ಎಂಜಾಯ್ ಮಾಡುತ್ತಿದ್ದಾಗಲೇ ಉಗ್ರರು ಅಲ್ಲಿಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಲ್ಲಿ ಭದ್ರತಾ ಪಡೆಗಳ ಚೆಕ್ ಪಾಯಿಂಟ್ ದಾಟಿಕೊಂಡು ಪ್ರವಾಸಿಗರು ಅಲ್ಲಿಗೆ ತಲುಪಿದ್ದರು. ಆದರೆ ಅಂತಹ ಜಾಗಕ್ಕೆ ಉಗ್ರರು ತಲುಪಿದ್ದು ಹೇಗೆ ಎನ್ನುವುದು ಹೇಗೆ ಎಂಬ ಪ್ರಶ್ನೆಗಳಿವೆ. ಕಾಡು ಮತ್ತು ಬೆಟ್ಟಗಳಿಂದ ಆವೃತವಾಗಿರುವ ಕಣಿವೆ ಪ್ರದೇಶದಲ್ಲಿ ಉಗ್ರರು ಮೊದಲೇ ತಮ್ಮ ಶಸ್ತ್ರಾಸ್ತ್ರಗಳ ಜೊತೆಗೆ ಅವಿತುಕೊಂಡಿದ್ದರೇ ಎನ್ನುವ ಅನುಮಾನಗಳಿವೆ.
In the meadows of Baisaran near Jammu and Kashmir's Pahalgam, two men named Adil found themselves on opposite sides of a tragedy. One picked up a gun and joined the ranks of the Lashkar-e-Taiba (LeT) terror group. The other, armed with nothing but abundant courage, died trying to protect tourists from terrorists' bullets.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
04-09-25 11:07 pm
Mangalore Correspondent
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
Mangalore, Loudspeaker Ban: ರಾತ್ರಿ ವೇಳೆ ಧ್ವನಿ...
04-09-25 07:39 pm
KMC Attavar Performs Rare, Life-Saving Surger...
03-09-25 11:03 pm
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm