ಬ್ರೇಕಿಂಗ್ ನ್ಯೂಸ್
30-04-25 06:59 pm HK News Desk ದೇಶ - ವಿದೇಶ
ನವದೆಹಲಿ, ಎ.30 : ಭಾರತದ ವಿಮಾನಗಳಿಗೆ ಪಾಕಿಸ್ತಾನದ ಮೂಲಕ ಹಾರಾಟಕ್ಕೆ ನಿಷೇಧ ವಿಧಿಸಿರುವುದರಿಂದ ಅಂತಾರಾಷ್ಟ್ರೀಯ ವಿಮಾನಗಳಿಗೆ ತೊಂದರೆಯಾಗಿದೆ. ದೆಹಲಿಯಿಂದ ಯುರೋಪ್, ಉತ್ತರ ಅಮೆರಿಕ ದೇಶಗಳಿಗೆ ತೆರಳುತ್ತಿದ್ದ ವಿಮಾನಗಳು ಪಾಕಿಸ್ತಾನದ ಮೂಲಕ ತೆರಳುತ್ತಿದ್ದವು. ಅವು ಈಗ ಸುತ್ತುಬಳಸಿ ಹಾರಾಟ ಮಾಡುತ್ತಿದ್ದು, ಸಹಜವಾಗಿಯೇ ದೂರ ಹೆಚ್ಚುವುದರಿಂದ ಪ್ರಯಾಣಿಕರ ದರವನ್ನೂ ಹೆಚ್ಚಳ ಮಾಡಲಾಗಿದೆ.
ದೆಹಲಿಯಿಂದ ತೆರಳುವ ಮತ್ತು ಬರುವ ವಿಮಾನಗಳು ಹೆಚ್ಚು ತೊಂದರೆ ಅನುಭವಿಸಿದ್ದು, ಪಾಕಿಸ್ತಾನ ಬದಲು ನೈರುತ್ಯಕ್ಕೆ ಚಲಿಸಿ ಒಮಾನ್, ದುಬೈ ಮೂಲಕ ತೆರಳುವಂತಾಗಿದೆ. ಯುರೋಪ್, ಅಮೆರಿಕಕ್ಕೆ ತೆರಳುವ ವಿಮಾನಗಳು ಉತ್ತರಕ್ಕೆ ಹೋಗಿ ತುರ್ಕಮೆನಿಸ್ತಾನ, ಉಜ್ಬೆಕಿಸ್ತಾನದಂತಹ ಮಧ್ಯ ಏಶ್ಯಾ ರಾಷ್ಟ್ರಗಳ ಮೂಲಕ ಮುಂದಕ್ಕೆ ತೆರಳುತ್ತಿವೆ. ಇದರಿಂದ ದೆಹಲಿಯಿಂದ ಚಿಕಾಗೋ, ಲಂಡನ್ ತಲುಪುವ ವಿಮಾನಗಳ ಸಂಚಾರಕ್ಕೆ ಸಮಯ ವ್ಯತ್ಯಯ ಆಗುತ್ತಿದ್ದು, ಮಧ್ಯೆ ಯುರೋಪಿನಲ್ಲಿ ಗಂಟೆಗಳ ಕಾಲ ನಿಂತು ಇಂಧನ ತುಂಬಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿವೆ. ಇದರಿಂದ ವಿಮಾನ ಕಂಪನಿಗಳ ಆದಾಯಕ್ಕೂ ಕತ್ತರಿ ಬಿದ್ದಿದೆ.
ಪ್ರಮುಖವಾಗಿ ಉತ್ತರ ಭಾರತದ ಯಾವುದೇ ನಿಲ್ದಾಣದಿಂದ ಹೊರಡುವ ವಿಮಾನಗಳು ಅಮೆರಿಕ ತಲುಪಲು ನಾಲ್ಕು ಗಂಟೆ ಹೆಚ್ಚುವರಿ ಸಮಯ ತೆಗೆದುಕೊಳ್ಳುತ್ತಿವೆ. ಭಾರತದಿಂದ ಉತ್ತರ ಅಮೆರಿಕಕ್ಕೆ ತೆರಳುವ ವಿಮಾನಗಳು ಯುರೋಪಿನ ವಿಯೆನ್ನಾದಲ್ಲಿ ಒಂದೂವರೆ ಗಂಟೆ ಕಾಲ ನಿಂತು ಇಂಧನ ತುಂಬಿಸಿಕೊಂಡು ಮುಂದಕ್ಕೆ ಪ್ರಯಾಣ ಮಾಡುತ್ತವೆ. ಇದರಿಂದಾಗಿ ಪ್ರಯಾಣ ದೂರ ಆಗುತ್ತಿರುವುದರಿಂದ ಕೆಲವು ಬಜೆಟ್ ಕ್ಯಾರಿಯರ್ ವಿಮಾನಗಳು ತಾಷ್ಕೆಂಟ್, ಉಜ್ಬೆಕಿಸ್ತಾನ್, ಕಜಕಿಸ್ತಾನಕ್ಕೆ ಸಂಚಾರವನ್ನು ತಾತ್ಕಾಲಿಕ ನೆಲೆಯಲ್ಲಿ ಕಡಿತಗೊಳಿಸಿವೆ. ಭಾನುವಾರದ ದೆಹಲಿಯಿಂದ ಚಿಕಾಗೋ ತೆರಳುವ ವಿಮಾನ ಎಂಟು ಗಂಟೆ ಪ್ರಯಾಣದಲ್ಲಿ ವಿಯೆನ್ನಾ ತಲುಪಿದರೆ ಅಲ್ಲಿ ಒಂದೂವರೆ ಗಂಟೆ ನಿಲ್ಲಿಸಿ, ಮತ್ತೆ 9 ಗಂಟೆ ಕಾಲ ಪ್ರಯಾಣಿಸಿ ಅಮೆರಿಕ ತಲುಪುತ್ತದೆ. ನ್ಯೂಯಾರ್ಕ್ ತೆರಳುವ ವಿಮಾನವೂ ಇದೇ ರೀತಿ ವಿಳಂಬವಾಗಿ ಗಮ್ಯ ತಲುಪುತ್ತದೆ.
ಪಾಕಿಸ್ತಾನ ವಾಯುಪ್ರದೇಶ ಕಡಿತ ಆಗಿರುವುದರಿಂದ ಸಾಮಾನ್ಯವಾಗಿ 14-15 ಗಂಟೆ ಬೇಕಾಗುತ್ತಿದ್ದ ಅಮೆರಿಕದ ವಿಮಾನ ಪ್ರಯಾಣ ಈಗ 18 ಗಂಟೆ ತೆಗೆದುಕೊಳ್ಳುತ್ತದೆ. ಸ್ಯಾನ್ ಫ್ರಾನ್ಸಿಸ್ಕೋ- ಮುಂಬೈ ವಿಮಾನವೂ ಈ ಹಿಂದೆ 17 ಗಂಟೆಯಲ್ಲಿ ತಲುಪುತ್ತಿದ್ದರೆ, ಈಗ 20 ಗಂಟೆ ಬೇಕಾಗುತ್ತದಂತೆ. ಟೊರಾಂಟೋ- ದೆಹಲಿ ನಾನ್ ಸ್ಟಾಪ್ ವಿಮಾನಗಳು ಹಿಂದೆ 13 ಗಂಟೆಯಲ್ಲಿ ತಲುಪುತ್ತಿದ್ದರೆ, ಈಗ 15 ಗಂಟೆ ಬೇಕಾಗುತ್ತದೆ. ಸ್ಪೈಸ್ ಜೆಟ್ ಮತ್ತು ಇಂಡಿಗೋ ವಿಮಾನಗಳ ಸಂಚಾರದಲ್ಲಿ 50ರಷ್ಟು ವಿಮಾನಗಳ ಪ್ರಯಾಣದಲ್ಲಿ ವ್ಯತ್ಯಯ ಆಗಿದೆ.
ಪಾಕಿಸ್ತಾನಕ್ಕೂ ಇದರಿಂದ ನಷ್ಟ
ಯಾವುದೇ ವಿಮಾನವು ಒಂದು ದೇಶದ ವಾಯುಪ್ರದೇಶದ ಮೇಲೆ ಹೋದರೆ ಆ ದೇಶಕ್ಕೆ ಓವರ್ ಫ್ಲೈಟ್ ಫೀ ಅಥವಾ ನ್ಯಾವಿಗೇಶನ್ ಚಾರ್ಜ್ ಅನ್ನು ನೀಡಬೇಕಾಗುತ್ತದೆ. ಆಯಾ ಪ್ರದೇಶದ ಫ್ಲೈಟ್ ಟ್ರಾಫಿಕ್ ನಿರ್ವಹಣೆಗೆ ಆಗುವ ವೆಚ್ಚವನ್ನು ಭರಿಸಲು ಈ ಶುಲ್ಕವನ್ನು ಪಡೆಯಬೇಕಾಗುತ್ತದೆ. ಭಾರತದಿಂದ ನಿತ್ಯವೂ ಪಾಕಿಸ್ತಾನದ ಮೂಲಕ ನೂರಾರು ವಿಮಾನಗಳು ಸಂಚರಿಸುತ್ತಿದ್ದುದರಿಂದ ದಿನವೂ ಕೆಲವು ಕೋಟಿಗಳಷ್ಟು ಹಣವನ್ನು ಆ ದೇಶಕ್ಕೆ ನೀಡಬೇಕಾಗಿತ್ತು. 2019ರಲ್ಲಿ ಬಾಲಾಕೋಟ್ ದಾಳಿಯಾದ ಬಳಿಕ ಪಾಕಿಸ್ತಾನವು ತನ್ನ ದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂಧ ವಿಧಿಸಿತ್ತು. ಇದರಿಂದ ಐದು ತಿಂಗಳಲ್ಲಿ ಪಾಕಿಸ್ತಾನಕ್ಕೆ ನೂರು ಮಿಲಿಯನ್ ಡಾಲರ್ ಮೊತ್ತದ ಆದಾಯ ಕೈತಪ್ಪಿತ್ತು. ಅಂದರೆ, ದಿನದಲ್ಲಿ 6.50 ಲಕ್ಷ ಡಾಲರ್ ಆದಾಯ ಪಾಕಿಸ್ತಾನ ಕಳೆದುಕೊಂಡಿತ್ತು.
Pakistan shut its airspace to Indian flights after the Pahalgam terror attack, hoping to hurt the aviation sector of its neighbouring country. But instead of causing major trouble for India, it looks like Pakistan has shot itself in the foot.
06-09-25 08:28 pm
HK News Desk
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am