ಬ್ರೇಕಿಂಗ್ ನ್ಯೂಸ್
07-05-25 06:14 pm HK News Desk ದೇಶ - ವಿದೇಶ
ನವದೆಹಲಿ, ಮೇ 7 : ಭಾರತೀಯ ಸೇನೆಯಿಂದ ಮಧ್ಯರಾತ್ರಿ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿರುವುದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸೈನಿಕರು ಗಡಿಭಾಗದಲ್ಲಿ ಗುಂಡಿನ ದಾಳಿ ನಡೆಸಿದ್ದು, ಜಮ್ಮು ಕಾಶ್ಮೀರದ ಏಳು ನಾಗರಿಕರು ಸಾವಿಗೀಡಾಗಿದ್ದಾರೆ. ಅಲ್ಲದೆ, 38 ಮಂದಿ ಗಾಯಗೊಂಡಿದ್ದಾರೆ. ಇದೇ ವೇಳೆ, ಪಾಕಿಸ್ತಾನ ಗಡಿಯುದ್ದಕ್ಕೂ ಸ್ಥಳೀಯ ಜನರನ್ನು ತೆರವು ಮಾಡಲು ಸೇನೆ ಕ್ರಮ ಕೈಗೊಂಡಿದೆ. ಅಲ್ಲದೆ, ದೇಶಾದ್ಯಂತ ಅಲರ್ಟ್ ಇರುವಂತೆ ಕೇಂದ್ರ ಗೃಹ ಸಚಿವಾಲಯವು ಸೂಚನೆ ನೀಡಿದೆ.
ಗೃಹ ಸಚಿವ ಅಮಿತ್ ಷಾ ಅವರು, ಪಾಕಿಸ್ತಾನ ಗಡಿ ಹಂಚಿಕೊಂಡಿರುವ ಜಮ್ಮು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಗುಜರಾತ್ ಮತ್ತು ನೇಪಾಳ ಗಡಿಯನ್ನು ಹೊಂದಿರುವ ಉತ್ತರಾಖಂಡ, ಬಾಂಗ್ಲಾ ಗಡಿಯಲ್ಲಿರುವ ಪಶ್ಚಿಮ ಬಂಗಾಳ, ಸಿಕ್ಕಿಂ ರಾಜ್ಯಗಳ ಡಿಜಿಪಿ ಮತ್ತು ಮುಖ್ಯ ಕಾರ್ಯದರ್ಶಿಗಳ ಜೊತೆಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಇತ್ತ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸದ್ಯದ ಪರಿಸ್ಥಿತಿ ಬಗ್ಗೆ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದಾರೆ.
ಇದೇ ವೇಳೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ವಿವಿಧ ರಾಷ್ಟ್ರಗಳ ಭದ್ರತಾ ಸಲಹೆಗಾರರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಪಾಕಿಸ್ತಾನಿ ಉಗ್ರರಿಗೆ ತಕ್ಕ ಉತ್ತರ ನೀಡಬೇಕಾಗಿತ್ತು. ಅದನ್ನು ಮಾಡಿದ್ದೇವೆ. ನಾವು ಉದ್ದೇಶಪೂರ್ವಕ ಪಾಕಿಸ್ತಾನದ ಮೇಲೆ ದಾಳಿ ನಡೆಸಿಲ್ಲ. ಇದಕ್ಕೆದುರಾಗಿ ಪಾಕಿಸ್ತಾನ ದಾಳಿಗೆ ಬಂದರೆ ಅದಕ್ಕೆ ಸೂಕ್ತ ಉತ್ತರ ನೀಡಲಿದ್ದೇವೆ ಎಂದು ಹೇಳಿದ್ದಾರೆ. ಅಮೆರಿಕದ ಎನ್ ಎಸ್ಎ ಮಾರ್ಕೋ ರೂಬಿ, ಯುಕೆಯ ಜೊನಾಥನ್ ಪೊವೆಲ್, ಜಪಾನ್ ದೇಶದ ಮಸಕಾಟ ಒಕಾನೊ, ಸೌದಿ ಅರೇಬಿಯಾದ ಮುಸೈದ್ ಅಲ್ ಐಬಾನ್, ಯುಎಇ ದೇಶದ ಎನ್ಎಸ್ಎ ಎಚ್.ಎಚ್ ಶೇಖ್ ತಹ್ನೂನ್, ರಷ್ಯಾದ ಭದ್ರತಾ ಸಲಹೆಗಾರ ಸರ್ಜಿ ಶೊಯಿಗು ಜೊತೆಗೆ ಅಜಿತ್ ಧೋವಲ್ ಮಾತುಕತೆ ನಡೆಸಿದ್ದಾರೆ.
ಭಾರತ- ಪಾಕಿಸ್ತಾನ ಸಂಘರ್ಷ ವಾತಾವರಣ ಇರುವುದರಿಂದ ದೇಶಾದ್ಯಂತ ಹೆಚ್ಚಿನ ಏರ್ಪೋರ್ಟ್ ಗಳಲ್ಲಿ ವಿಮಾನ ಸಂಚಾರ ವ್ಯತ್ಯಯ ಆಗಿದೆ. ಉತ್ತರ ಭಾರತದಲ್ಲಿ ಜಮ್ಮು ಕಾಶ್ಮೀರ, ಪಂಜಾಬ್ ಭಾಗದಲ್ಲಿ ವಿಮಾನ ಸಂಚಾರ ರದ್ದುಪಡಿಸಲಾಗಿದೆ. ಇದಲ್ಲದೆ, ದೆಹಲಿ ಇನ್ನಿತರ ಭಾಗದಿಂದಲೂ ಹೋಗುವುದು, ಬರುವ ವಿಮಾನಗಳ ಸಂಚಾರಕ್ಕೆ ತೊಡಕಾಗಿದೆ. ಇಂಡಿಗೋ ವಿಮಾನ ಸಂಸ್ಥೆಯು ಮೇ 10ರ ವರೆಗೆ ದೇಶದ ವಿವಿಧ ವಿಮಾನ ನಿಲ್ದಾಣಗಳಿಂದ ಹೊರಡಬೇಕಿದ್ದ 165 ವಿಮಾನಗಳ ಸಂಚಾರವನ್ನು ರದ್ದುಪಡಿಸಿರುವುದಾಗಿ ಪ್ರಕಟನೆಯಲ್ಲಿ ತಿಳಿಸಿದೆ. ಹೆಚ್ಚಿನ ವಿಮಾನ ಯಾನ ಸಂಸ್ಥೆಗಳು ಪ್ರಯಾಣಿಕರ ಕೊರತೆ ಮತ್ತು ವಿದೇಶ ಸಂಚಾರದ ಮಾರ್ಗದಲ್ಲಿ ತೊಂದರೆ ಇರುವುದರಿಂದ ಪ್ರಯಾಣವನ್ನು ರದ್ದುಪಡಿಸಿವೆ. ಸಮುದ್ರ ಮಾರ್ಗದಲ್ಲೂ ಎಲರ್ಟ್ ಘೋಷಣೆ ಮಾಡಿರುವುದರಿಂದ ವಿಮಾನಗಳನ್ನು ಹೊಡೆದುರುಳಿಸುವ ಭಯವೂ ಉಂಟಾಗಿದೆ.
ಪ್ರಧಾನಿ ಮೋದಿ ಮೇ 13ರಿಂದ 17ರ ವರೆಗೆ ನಿಗದಿಯಾಗಿದ್ದ ಯುರೋಪ್ ಪ್ರವಾಸವನ್ನು ಮುಂದೂಡಿದ್ದಾರೆ. ಕ್ರೊಯೇಷಿಯಾ, ನಾರ್ವೆ, ನೆದರ್ಲೇಂಡ್ ದೇಶಗಳಿಗೆ ಮೋದಿ ಪ್ರವಾಸ ನಿಗದಿಯಾಗಿತ್ತು. ಮೇ 8ರಂದು ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿದ್ದು, ತನಗೆ ಆಹ್ವಾನ ಬಂದಿರುವುದಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಿಳಿಸಿದ್ದಾರೆ.
Tensions flared along the Line of Control on Tuesday as heavy gunfire erupted at the border, leading to the tragic deaths of seven civilians in Jammu & Kashmir. The incident has triggered a nationwide security alert, with heightened military and intelligence coordination across the country. In response to the escalating situation, National Security Advisor Ajit Doval held urgent discussions with his counterparts from the United States, Russia, Saudi Arabia, and other strategic partners. The high-level talks focused on regional stability, intelligence sharing, and diplomatic support to prevent further escalation.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
04-09-25 11:07 pm
Mangalore Correspondent
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
Mangalore, Loudspeaker Ban: ರಾತ್ರಿ ವೇಳೆ ಧ್ವನಿ...
04-09-25 07:39 pm
KMC Attavar Performs Rare, Life-Saving Surger...
03-09-25 11:03 pm
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm