Pak drone-missile attack; ಚೈನಾ ಮೇಡ್ ಲಾಹೋರ್ ಏರ್ ಡಿಫೆನ್ಸ್ ಸಿಸ್ಟಮನ್ನೇ ಉಡಾಯಿಸಿದ ರಷ್ಯಾ ನಿರ್ಮಿತ ‘ಸುದರ್ಶನ್ ಚಕ್ರ’ ಡ್ರೋಣ್ ಮಿಸೈಲ್ ; ಜಮ್ಮು ಕಾಶ್ಮೀರದ ಸೇನಾ ನೆಲೆಗಳನ್ನು ಗುರಿಯಾಗಿಸಿದ್ದ ಮಿಸೈಲ್ ನಿಷ್ಕ್ರಿಯ ! ಆಪರೇಷನ್ -2 

08-05-25 04:57 pm       HK News Desk   ದೇಶ - ವಿದೇಶ

ಭಾರತೀಯ ಸೇನೆ ನಡೆಸಿದ ಆಪರೇಶನ್ ಸಿಂಧೂರ ಕಾರ್ಯಾಚರಣೆಗೆ ಪ್ರತಿಯಾಗಿ ಪಾಕಿಸ್ತಾನಿ ಸೇನೆಯು ಜಮ್ಮು ಕಾಶ್ಮೀರದ ಸೇನಾ ನೆಲೆಗಳ ಮೇಲೆ ಬಾಂಬ್ ಹಾಕಲು ಮುಂದಾಗಿತ್ತು. ಆದರೆ ಅಷ್ಟರಲ್ಲಿಯೇ ವಾಯುಪಡೆಯ ಡ್ರೋಣ್ ಮೂಲಕ ಲಾಹೋರ್ ರಕ್ಷಣಾ ವ್ಯವಸ್ಥೆಯನ್ನೇ ಉಡಾಯಿಸಲಾಗಿದೆ. ಪಾಕಿಸ್ತಾನದ ಲಾಹೋರಿನಲ್ಲಿದ್ದ ಚೀನಾ ನಿರ್ಮಿತ HQ-9 ಮಿಸೈಲ್ ರಕ್ಷಣಾ ವ್ಯವಸ್ಥೆಯನ್ನು ಡ್ರೋಣ್ ದಾಳಿ ಮೂಲಕ ನಿಷ್ಕ್ರಿಯ ಮಾಡಲಾಗಿದೆ.

ನವದೆಹಲಿ, ಮೇ 8 : ಭಾರತೀಯ ಸೇನೆ ನಡೆಸಿದ ಆಪರೇಶನ್ ಸಿಂಧೂರ ಕಾರ್ಯಾಚರಣೆಗೆ ಪ್ರತಿಯಾಗಿ ಪಾಕಿಸ್ತಾನಿ ಸೇನೆಯು ಜಮ್ಮು ಕಾಶ್ಮೀರದ ಸೇನಾ ನೆಲೆಗಳ ಮೇಲೆ ಬಾಂಬ್ ಹಾಕಲು ಮುಂದಾಗಿತ್ತು. ಆದರೆ ಅಷ್ಟರಲ್ಲಿಯೇ ವಾಯುಪಡೆಯ ಡ್ರೋಣ್ ಮೂಲಕ ಲಾಹೋರ್ ರಕ್ಷಣಾ ವ್ಯವಸ್ಥೆಯನ್ನೇ ಉಡಾಯಿಸಲಾಗಿದೆ. ಪಾಕಿಸ್ತಾನದ ಲಾಹೋರಿನಲ್ಲಿದ್ದ ಚೀನಾ ನಿರ್ಮಿತ HQ-9 ಮಿಸೈಲ್ ರಕ್ಷಣಾ ವ್ಯವಸ್ಥೆಯನ್ನು ಡ್ರೋಣ್ ದಾಳಿ ಮೂಲಕ ನಿಷ್ಕ್ರಿಯ ಮಾಡಲಾಗಿದೆ. ಇದಲ್ಲದೆ, ಏಳು ಕಡೆ ನಿಯೋಜಿಸಲ್ಪಟ್ಟಿದ್ದ ಮಿಸೈಲ್ ಸಿಸ್ಟಮ್ ಅನ್ನು ಡ್ರೋಣ್ ದಾಳಿ ಮೂಲಕ ಖತಂ ಮಾಡಲಾಗಿದೆ.

ಈ ಬಗ್ಗೆ ಭಾರತ ಸರಕಾರ ಹೇಳಿಕೆಯಲ್ಲಿ ಡ್ರೋಣ್ ದಾಳಿ ಬಗ್ಗೆ ಮಾಹಿತಿ ನೀಡಿದೆ. ಮೇ 7-8ರ ರಾತ್ರಿ ಪಾಕಿಸ್ತಾನದ ಮಿಲಿಟರಿ ಜಮ್ಮು ಕಾಶ್ಮೀರದ ಆವಂತಿಪುರ, ಶ್ರೀನಗರ, ಜಮ್ಮು, ಪಠಾಣ್ ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲೂಧಿಯಾನ, ಆದಂಪುರ್, ಭಟಿಂಡಾ, ಚಂಡೀಗಢ್, ನಲ್ ಫಲೋಡಿ, ಉತ್ತರ್ ಲೈ, ಭುಜ್ ನಲ್ಲಿರುವ ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿಸಿ ಕೌಂಟರ್ ಅಟ್ಯಾಕ್ ಮಾಡಲು ಸಿದ್ಧತೆ ನಡೆಸಿತ್ತು. ಡ್ರೋಣ್ ಮತ್ತು ಕ್ಷಿಪಣಿ ದಾಳಿ ನಡೆಸುವುದಕ್ಕೆ ಪ್ಲಾನ್ ಆಗಿರುವುದನ್ನು ತಿಳಿದ ಭಾರತೀಯ ವಾಯುಪಡೆ ಕೌಂಟರ್ ಅಟ್ಯಾಕ್ ಮಾಡಿದೆ.

600 ಕಿಮೀ ವರೆಗೂ ಟ್ರ್ಯಾಕ್ ಮಾಡಬಲ್ಲ ಸುದರ್ಶನ ಚಕ್ರ ! 

ಭಾರತೀಯ ವಾಯುಪಡೆಯಲ್ಲಿರುವ ರಷ್ಯಾ ನಿರ್ಮಿತ ಎಸ್-400 ‘ಸುದರ್ಶನ್ ಚಕ್ರ’ ಹೆಸರಿನ ಏರ್ ಡಿಫೆನ್ಸ್ ಸಿಸ್ಟಮ್ ಮೂಲಕ ಕೌಂಟರ್ ಅಟ್ಯಾಕ್ ಮಾಡಿದ್ದು, ಲಾಹೋರಿನಲ್ಲಿ ನಿಯೋಜನೆಯಾಗಿದ್ದ ಚೀನಾ ನಿರ್ಮಿತ ಡಿಫೆನ್ಸ್ ವ್ಯವಸ್ಥೆಯನ್ನೇ ನಿಷ್ಕ್ರಿಯ ಮಾಡಿದೆ. ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ 600 ಕಿಮೀ ದೂರದ ವರೆಗೂ ವೈರಿ ಪಡೆಯ ಯಾವುದೇ ಫೈಟರ್ ಜೆಟ್, ಬ್ಯಾಲಿಸ್ಟಿಕ್ ಮಿಸೈಲ್, ಡ್ರೋಣ್ ಗಳನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯ ಹೊಂದಿದ್ದು ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಅತಿ ದೊಡ್ಡ ಅಸ್ತ್ರವಾಗಿದೆ.

ಭಾರತೀಯ ಸೇನೆಯು ಪಾಕಿಸ್ತಾನವು ಎಲ್ಲೆಲ್ಲಿ ಏರ್ ಡಿಫೆನ್ಸ್ ರಾಡಾರ್ ಮತ್ತು ಸಿಸ್ಟಮ್ ವ್ಯವಸ್ಥೆ ಮಾಡಿಟ್ಟಿದೆಯೋ ಅವೆಲ್ಲದರ ಮೇಲೂ ಕಣ್ಣಿಟ್ಟಿದೆ. ಭಾರತದ ದಾಳಿಯು ನಿಖರ ಮತ್ತು ಅಷ್ಟೇ ದೃಢವಾಗಿರುತ್ತದೆ. ಲಾಹೋರಿನಲ್ಲಿ ವ್ಯವಸ್ಥೆ ಮಾಡಿದ್ದ ಏರ್ ಡಿಫೆನ್ಸ್ ಸಿಸ್ಟಮ್ ನಿಷ್ಕ್ರಿಯ ಆಗಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಭಾರತ ಸರಕಾರ ಹೇಳಿಕೆಯಲ್ಲಿ ತಿಳಿಸಿದೆ. ಪಾಕಿಸ್ತಾನವು ಗಡಿಭಾಗದಲ್ಲಿ ಆರ್ಟಿಲ್ಲರಿ ಮತ್ತು ಮೋರ್ಟಾರ್ ಶೆಲ್ ದಾಳಿ ನಡೆಸುತ್ತಿದ್ದು, ಇದರಿಂದ ಮೂವರು ಮಹಿಳೆಯರು ಮತ್ತು ಐವರು ಮಕ್ಕಳು ಸೇರಿ 16 ಮಂದಿ ಸಾವಿಗೀಡಾಗಿದ್ದಾರೆ. ಇದೇ ಮಾದರಿಯಲ್ಲಿ ಭಾರತೀಯ ಸೇನೆಯೂ ಮೋರ್ಟಾರ್ ಮತ್ತು ಶೆಲ್ ದಾಳಿಯನ್ನು ನಡೆಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ದಾಳಿ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿದ್ದು, ನಮ್ಮ ತಾಳ್ಮೆ ಪರೀಕ್ಷಿಸಬೇಡಿ, ಪಾಕಿಸ್ತಾನವು ನಮ್ಮ ತಂಟೆಗೆ ಬಂದರೆ ಊಹಿಸದ ರೀತಿಯ ಪೆಟ್ಟು ನೀಡಲಿದ್ದೇವೆ. ನಾವು ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಹೊಂದಿದ್ದೇವೆ. ಭಾರತೀಯ ಸೇನೆಯ ಪರಿಶ್ರಮಕ್ಕೆ ಅಭಿನಂದನೆ ಹೇಳುತ್ತೇನೆ ಎಂದು ಹೇಳಿದ್ದಾರೆ.

ಲಾಹೋರಿನಲ್ಲಿ ನಿಗೂಢ ಸ್ಫೋಟ;

ಲಾಹೋರ್ ನಗರದ ವಾಲ್ಟನ್ ಏರ್ಪೋರ್ಟ್ ಬಳಿಯಲ್ಲಿ ಗುರುವಾರ ಬೆಳಗ್ಗೆ ನಿಗೂಢ ಸ್ಫೋಟ ನಡೆದಿದ್ದು, ಇದು ಹೇಗಾಗಿದೆ, ಯಾವ ರೀತಿ ಸ್ಫೋಟ ಆಗಿದೆ ಎನ್ನುವುದು ತಿಳಿದುಬಂದಿಲ್ಲ. ಆದರೆ ಸ್ಫೋಟ ಆಗುತ್ತಲೇ ಆಸುಪಾಸಿನ ಜನರು ಭಯಗೊಂಡು ಓಡುತ್ತಿರುವುದು ವಿಡಿಯೋಗಳು ಬಂದಿವೆ. ಇದರ ಬೆನ್ನಲ್ಲೇ ಲಾಹೋರ್, ಕರಾಚಿ, ಸಿಯಾಲ್ ಕೋಟ್ ಏರ್ಪೋರ್ಟ್ ಅನ್ನು ಬಂದ್ ಮಾಡಲಾಗಿದೆ. ಇದೇ ವೇಳೆ, ಪಾಕಿಸ್ತಾನವು ಲಾಹೋರಿನಲ್ಲಿ ಒಂದು ಡ್ರೋಣನ್ನು ಹೊಡೆದುರುಳಿಸಿದ್ದಾಗಿ ಹೇಳಿದ್ದು, ಇತರ 12 ಕಡೆ ಡ್ರೋಣ್ ದಾಳಿ ಆಗಿರುವುದನ್ನು ಖಚಿತಪಡಿಸಿದೆ. ಭಾರತವು ಲಾಹೋರ್ ಅಲ್ಲದೆ, ಭಾರತದ ಗಡಿಭಾಗದ ಗುಜರನ್ ವಾಲಾ, ಚಾಕ್ವಾಲ್, ಬಹವಾಲ್ಪುರ, ಮಿಯಾನೋ, ಕರಾಚಿ, ಛೋರ್, ರಾವಲ್ಪಿಂಡಿ ಮತ್ತು ಅಟ್ಟೋಕ್ ನಲ್ಲಿಯೂ ಮಿಸೈಲ್ ಸಿಸ್ಟಮ್ ಮೇಲೆ ಡ್ರೋಣ್ ದಾಳಿಯಾಗಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆದುರಾಗಿ ಭಾರತೀಯ ಸೇನೆಯು ಆಪರೇಶನ್ ಸಿಂಧೂರ ಹೆಸರಲ್ಲಿ ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಜೈಶ್ ಇ- ಮಹಮ್ಮದ್, ಲಷ್ಕರ್ ಇ- ತೊಯ್ಬಾ ಉಗ್ರರ ನೆಲೆಗಳನ್ನು ಉಡೀಸ್ ಮಾಡಲಾಗಿತ್ತು. ರಫೇಲ್ ಫೈಟರ್ ಜೆಟ್ ಮೂಲಕ 60-70 ಕಿಮೀ ದೂರದಿಂದ ಕ್ಷಿಪಣಿಗಳನ್ನು ತೂರುವ ಮೂಲಕ ಉಗ್ರರ ನೆಲೆಗಳನ್ನು ಧ್ವಂಸ ಮಾಡಲಾಗಿತ್ತು. ಘಟನೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದರು.

The armed forces targeted air defence radars at a number of locations in Pakistan and destroyed the system in Lahore on Thursday after Islamabad attempted to strike 15 military targets in India in response to Operation Sindoor. Sources said Pakistan's HQ-9 missile defence system units, developed by China, were hit by Israeli-made HAROP drones, effectively rendering the Pakistani army defenceless in Lahore