India - Pak War update: ಪಾಕಿಸ್ತಾನದ ಎಫ್ -16, ಎಫ್-17 ಫೈಟರ್ ಜೆಟ್ ಹೊಡೆದು ಹಾಕಿದ ಭಾರತೀಯ ಸೇನಾ ಪಡೆ, ಜಮ್ಮು ಕಾಶ್ಮೀರದ ಸೇನಾ ನೆಲೆ ಗುರಿಯಾಗಿಸಿ ಪಾಕ್ ಕ್ಷಿಪಣಿ ದಾಳಿ ಯತ್ನ 

09-05-25 12:00 am       HK News Desk   ದೇಶ - ವಿದೇಶ

ಜಮ್ಮು ಕಾಶ್ಮೀರದ ಸೇನಾ ನೆಲೆಗಳನ್ನು ಗುರಿಯಾಗಿಸಿ ಪಾಕ್ ಕ್ಷಿಪಣಿ ದಾಳಿ ನಡೆಸಿದ್ದು ಭಾರತೀಯ ಸೇನೆಯು ಅವುಗಳನ್ನು ಅರ್ಧ ದಾರಿಯಲ್ಲೇ ಹೊಡೆದುರುಳಿಸಿದೆ. ಜಮ್ಮು ವಾಯುನೆಲೆ, ಜೈಸಲ್ಮೇರ್‌, ಅಖ್ನೂರ್‌, ರಾಜೌರಿ, ಪೂಂಚ್‌ ಸೇರಿದಂತೆ ಗಡಿಭಾಗದ ಸೇನಾ ನೆಲೆಗಳ ಮೇಲೆ ಪಾಕಿಸ್ತಾನ ಡ್ರೋನ್‌ ದಾಳಿಗೆ ಯತ್ನಿಸಿದೆ.  

ನವದೆಹಲಿ, ಮೇ 8: ಜಮ್ಮು ಕಾಶ್ಮೀರದ ಸೇನಾ ನೆಲೆಗಳನ್ನು ಗುರಿಯಾಗಿಸಿ ಪಾಕ್ ಕ್ಷಿಪಣಿ ದಾಳಿ ನಡೆಸಿದ್ದು ಭಾರತೀಯ ಸೇನೆಯು ಅವುಗಳನ್ನು ಅರ್ಧ ದಾರಿಯಲ್ಲೇ ಹೊಡೆದುರುಳಿಸಿದೆ. ಜಮ್ಮು ವಾಯುನೆಲೆ, ಜೈಸಲ್ಮೇರ್‌, ಅಖ್ನೂರ್‌, ರಾಜೌರಿ, ಪೂಂಚ್‌ ಸೇರಿದಂತೆ ಗಡಿಭಾಗದ ಸೇನಾ ನೆಲೆಗಳ ಮೇಲೆ ಪಾಕಿಸ್ತಾನ ಡ್ರೋನ್‌ ದಾಳಿಗೆ ಯತ್ನಿಸಿದೆ.  

ಇದೇ ವೇಳೆ, ಪಾಕಿಸ್ತಾನದ​ ಫೈಟರ್​ ಜೆಟ್​ ಎಫ್‌-16 ಮತ್ತು ಎಫ್ - 17 ಅನ್ನು ಭಾರತೀಯ ಸೇನಾಪಡೆ ಹೊಡೆದು ಹಾಕಿದೆ. ಜಮ್ಮು ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಲು ಪಾಕಿಸ್ತಾನ ವಿಫಲ ಪ್ರಯತ್ನ ನಡೆಸಿದ್ದು, ರಷ್ಯಾ ನಿರ್ಮಿತ ಎಸ್ -400 ಕ್ಷಿಪಣಿ ನಿರೋಧಕ ವ್ಯವಸ್ಥೆ ಅವೆಲ್ಲವನ್ನೂ ಹೊಡೆದುರುಳಿಸಿದೆ. ಹೀಗಾಗಿ ಜಮ್ಮು ಭಾಗದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. 

ಶ್ರೀನಗರದ ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಅಲ್ಲಿಂದಲೇ ಏರ್‌ ಡಿಫೆನ್ಸ್‌ ಸಿಸ್ಟಮ್‌ ಆ್ಯಕ್ಟೀವ್​ ಮಾಡಲಾಗಿದೆ. ಗಡಿಯಿಂದ ವಾಯು ಪ್ರದೇಶದ ಮೂಲಕ ತೂರಿಬರುವ ಡ್ರೋಣ್, ಮಿಸೈಲ್ ಗಳನ್ನು ಏರ್ ಡಿಫೆನ್ಸ್ ಸಿಸ್ಟಮ್ ಅಟೊಮೆಟಿಕ್ ಆಗಿಯೇ ಹೊಡೆದುರುಳಿಸುತ್ತದೆ. ಪಾಕಿಸ್ತಾನ ಗಡಿಭಾಗದ ರಾಜ್ಯಗಳ 30ಕ್ಕೂ ಹೆಚ್ಚು ಏರ್ಪೋರ್ಟ್ ಗಳಲ್ಲಿ ವಿಮಾನ ಸಂಚಾರ ರದ್ದುಪಡಿಸಲಾಗಿದೆ. 

ಚೀನಾ ಮತ್ತು ಫ್ರಾನ್ಸ್ ನಿರ್ಮಿತ ಎಫ್ 16 ಸೂಪರ್ ಸಾನಿಕ್ ಫೈಟರ್ ಜೆಟ್ ಅನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಗೋಧಾ ವಾಯು ನೆಲೆಯಿಂದ ಭಾರತದ ಗಡಿಯತ್ತ ಹಾರಿ ಬಿಡಲಾಗಿತ್ತು. ಆದರೆ ಸರ್ಗೋಧಾ ವಾಯು ನೆಲೆ ಬಳಿಯಲ್ಲೇ ಆ ಫೈಟರ್ ಜೆಟ್ ಅನ್ನು ಭಾರತದ ಕ್ಷಿಪಣಿ ಮೂಲಕ ಹೊಡೆದು ಹಾಕಲಾಗಿದೆ.

India's air defence system shot down Pakistan's F-16 and two JF-17 aircraft after Islamabad launched attacks at multiple locations in Jammu and Punjab, government sources said.