ಬ್ರೇಕಿಂಗ್ ನ್ಯೂಸ್
09-05-25 06:49 pm HK News Desk ದೇಶ - ವಿದೇಶ
ನವದೆಹಲಿ, ಮೇ 9 : ಭಾರತೀಯ ಸೇನೆಯು ಪಾಕಿಸ್ತಾನದ ಮೇಲೆ ಮುಗಿಬಿದ್ದಿರುವ ಬೆನ್ನಲ್ಲೇ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ ಬಿ) ಸದಸ್ಯರು ಸಮಸ್ಯೆಗೆ ಯುದ್ಧ ಪರಿಹಾರ ಅಲ್ಲ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ.
ಕಾನೂನು ಮಂಡಳಿಯ ಸದಸ್ಯರು ತುರ್ತಾಗಿ ಆನ್ಲೈನ್ ಮೀಟಿಂಗ್ ಮಾಡಿ ನಿರ್ಣಯ ಸ್ವೀಕರಿಸಿದ್ದು, ಅದರಲ್ಲಿ ಈ ಕುರಿತ ಸಲಹೆಯನ್ನು ಭಾರತ- ಪಾಕಿಸ್ತಾನ ಸರ್ಕಾರಗಳಿಗೆ ನೀಡಿದ್ದಾರೆ. ಸೇನೆ ಮತ್ತು ಜನಸಾಮಾನ್ಯರ ಕಾಳಜಿಯಿಂದ ದೇಶದ ಜನರು, ರಾಜಕೀಯ ಪಕ್ಷಗಳು, ಸೇನಾ ವಿಭಾಗಗಳು ಮತ್ತು ಸರ್ಕಾರ ಸದ್ಯಕ್ಕೆ ಎದುರಾಗಿರುವ ಸಮಸ್ಯೆ ಬಗ್ಗೆ ಪರಿಹಾರ ಹುಡುಕಬೇಕಾಗಿದೆ. ಉಗ್ರವಾದ ಮತ್ತು ಅಮಾಯಕರನ್ನು ಕೊಲ್ಲುವುದನ್ನು ನಾವು ಸಹಿಸುವುದಿಲ್ಲ. ಇಸ್ಲಾಮಿನಲ್ಲಿ ಯಾವುದೇ ರೀತಿಯ ಉಗ್ರವಾದಕ್ಕೂ ಜಾಗವಿಲ್ಲ.
ಮಾನವೀಯ ತತ್ವಗಳನ್ನು ಮಾತ್ರ ಇಸ್ಲಾಮ್ ಪಾಲಿಸುತ್ತದೆ. ಹೀಗಾಗಿ ಉಭಯ ದೇಶಗಳು ಎದುರಾಗಿರುವ ಸಮಸ್ಯೆ ಬಗ್ಗೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕಾಗಿದೆ. ಯಾವುದೇ ಸಮಸ್ಯೆಗೆ ಯುದ್ಧ ಪರಿಹಾರ ಆಗೋದಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು. ಉಭಯ ದೇಶಗಳಲ್ಲಿ ಪರಮಾಣು ಅಸ್ತ್ರ ಇರುವಾಗ ಯುದ್ಧ ಎನ್ನುವುದು ಸಾಮಾನ್ಯ ಮಾತಲ್ಲ. ಯುದ್ಧದ ಪರಿಣಾಮವನ್ನು ಎರಡೂ ದೇಶಗಳು ಮತ್ತು ಅಲ್ಲಿನ ಸಾಮಾನ್ಯ ಜನರು ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎರಡೂ ದೇಶಗಳು ಮಾತುಕತೆ ಮತ್ತು ರಾಜತಾಂತ್ರಿಕ ನಡೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಉತ್ತಮ.
ಇದರ ನಡುವೆಯೂ ಸೇವ್ ವಕ್ಫ್ ಎನ್ನುವ ಅಭಿಯಾನವನ್ನು ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಮುಂದುರಿಸಲಿದ್ದು, ಸದ್ಯಕ್ಕೆ ಬಹಿರಂಗ ಸಭೆ, ಸಮಾವೇಶಗಳನ್ನು ನಡೆಸದೆ ಮೇ 16ರ ವರೆಗೆ ತಾತ್ಕಾಲಿಕ ನೆಲೆಯಲ್ಲಿ ಮುಂದೂಡಲಾಗುತ್ತದೆ. ಒಳಾಂಗಣ ಸಭೆಗಳು, ಸುದ್ದಿಗೋಷ್ಟಿಗಳು, ಮಸೀದಿಯಲ್ಲಿ ಸಭೆ ನಡೆಸುವುದು, ಜಿಲ್ಲಾಧಿಕಾರಿಗೆ ದೂರು ಸಲ್ಲಿಸುವುದು ಇತ್ಯಾದಿ ಎಂದಿನಂತೆ ಮುಂದುವರಿಯಲಿದೆ. ಭಾರತ- ಪಾಕ್ ನಡುವಿನ ಉದ್ವಿಗ್ನ ಸ್ಥಿತಿ ಸದ್ಯದಲ್ಲೇ ಬಗೆಹರಿದು ಸಹಜ ಸ್ಥಿತಿ ಬರಲಿದೆ ಎನ್ನುವ ಆಶಾಭಾವನೆ ಇದೆ ಎಂದು ಮುಸ್ಲಿಂ ಕಾನೂನು ಮಂಡಳಿಯು ನಿರ್ಣಯದಲ್ಲಿ ಹೇಳಿದೆ.
The board has also said it will continue with its "Save Waqf Campaign" as usual but in light of the current situation, its public meetings and events are being postponed for the next one week, until May 16.The AIMPLB made the assertions in a resolution passed at a special online meeting of its office-bearers on Thursday.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 06:52 pm
HK News Staffer
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm