ಬ್ರೇಕಿಂಗ್ ನ್ಯೂಸ್
12-05-25 04:38 pm HK News Desk ದೇಶ - ವಿದೇಶ
ಇಸ್ಲಮಾಬಾದ್, ಮೇ 12 : ಪಾಕಿಸ್ತಾನದ ಮಿಲಿಟರಿ ಜನರಲ್ ಭಾರತಕ್ಕೆ ಕರೆ ಮಾಡಿ ಕದನ ವಿರಾಮಕ್ಕೆ ಗೋಗರೆದಿದ್ದರೆ, ಆರ್ಮಿ ಮುಖ್ಯಸ್ಥ ಜನರಲ್ ಸಯ್ಯದ್ ಆಮಿರ್ ಮುನೀರ್ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಇದು ಹಿಡಿಸಿಲ್ಲ. ಹೀಗಾಗಿ ಪಾಕ್ ಸರ್ಕಾರ ಮತ್ತು ಮಿಲಿಟರಿ ಒಳಗಡೆಯೇ ಬೇಗುದಿ ಶುರುವಾಗಿದ್ದು ಆಂತರಿಕ ದಂಗೆಯ ಸ್ಥಿತಿ ಏರ್ಪಟ್ಟಿದೆ. ಪಾಕಿಸ್ತಾನದ ರಾಜಕೀಯ ಮತ್ತು ಮಿಲಿಟರಿ ಇತಿಹಾಸವನ್ನು ನೋಡಿದರೆ, ಅಲ್ಲಿ ಸರ್ಕಾರಕ್ಕೂ ಮತ್ತು ಸೇನಾ ಪಡೆಗಳಿಗೂ ಸಂವಹನದ ಕೊರತೆಯೇ ದೊಡ್ಡ ಹಿನ್ನಡೆ. ಜನರಲ್ ಯಹ್ಯಾ ಖಾನ್ ನಿಂದ ಪರ್ವೇಜ್ ಮುಷರಫ್ ತನಕ ಒಳಗಿನ ಸಂಘರ್ಷ ನಡೆದೇ ಇತ್ತು. ಈಗಿನ ಮಿಲಿಟರಿ ಜನರಲ್ ಸಯ್ಯದ್ ಆಸಿಮ್ ಮುನೀರ್ ಕೂಡ ಸರ್ಕಾರವನ್ನು ಕಿತ್ತೊಗೆದು ಸೇನಾಡಳಿತ ತರುವುದಕ್ಕೆ ಮುಂದಾಗಿದ್ದಾರೆಯೇ ಎನ್ನುವ ಸುದ್ದಿ ಹಬ್ಬಿದೆ.
ಹಾಗೆ ನೋಡಿದರೆ, ಈ ಹಿಂದೆ ಐಎಸ್ಐ ಮುಖ್ಯಸ್ಥನಾಗಿದ್ದ ಆಸಿಮ್ ಮುನೀರ್ ಅನ್ನು ಸೇನಾ ಮುಖ್ಯಸ್ಥರ ಹುದ್ದೆಗೆ ಕೂರಿಸಿದ್ದೇ ಪಾಕಿಸ್ತಾನದ ಈಗಿನ ಪ್ರಧಾನಿ ಶೆಹಬಾಜ್ ಷರೀಫ್. ಈಗ, ಅವರ ಅಧಿಕಾರವನ್ನೇ ಕಿತ್ತುಕೊಳ್ಳಲು ಅಸೀಮ್ ಹೊರಟಿದ್ದಾರೆ. ಐಎಸ್ಐ ಕಾರಣದಿಂದ ಭಯೋತ್ಪಾದಕರ ಜೊತೆಗೆ ನೇರ ಸಂಬಂಧ ಹೊಂದಿರುವ ಅಸೀಮ್ ಮುನೀರ್ ಗೆ ಸರ್ಕಾರದ ಹೊಣೆ ಹೊತ್ತವರಿಂದ ಹೆಚ್ಚಿನ ಬೆಂಬಲವೂ ವ್ಯಕ್ತವಾಗುತ್ತಿದೆ. ಆದರೆ, ಸೇನೆಯಲ್ಲಿ ಕೆಳಹಂತದ ಅಧಿಕಾರಿಗಳು ಅಸೀಮ್ ಪರವಾಗಿಲ್ಲ. ಹೀಗಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಲು ಈತನೇ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತದ ಅವಿಭಾಜ್ಯ ಅಂಗವೆನಿಸಿರುವ ಕಾಶ್ಮೀರವನ್ನು ಪಾಕಿಸ್ತಾನದ ಶಿರದ ಭಾಗ ಎಂದು ಹೇಳುವ ಮೂಲಕ ಮುನೀರ್, ಭಾರತದ ವಿರುದ್ದ ಪಾಕ್ ಮತ್ತು ಕಾಶ್ಮೀರದ ಜನರನ್ನು ಪ್ರಚೋದಿಸಿ ಎತ್ತಿಕಟ್ಟುತ್ತಿದ್ದಾರೆ. ಆದರೆ ಇದೇ ವೇಳೆ, ಪಾಕಿಸ್ತಾನ ಪಾಲಿಗೆ ದೊಡ್ಡ ಬೆದರಿಕೆಯಾಗಿ ಬಲೂಚಿಸ್ಥಾನ ಲಿಬರೇಷನ್ ಪಡೆ ಎದ್ದು ನಿಲ್ಲುತ್ತಿದೆ. ರೈಲನ್ನು ಹೈಜ್ಯಾಕ್ ಮಾಡಿ, ಸುಮಾರು 200ಕ್ಕೂ ಹೆಚ್ಚು ಸೈನಿಕರನ್ನು ಹತ್ಯೆಗೈದಿರುವ ಲಿಬರೇಶನ್ ಆರ್ಮಿ ಪಾಕಿಸ್ತಾನ ವಿರುದ್ಧ ಜನರನ್ನು ದಂಗೆ ಏಳುವಂತೆ ಮಾಡುತ್ತಿದ್ದಾರೆ. ಇದನ್ನು ಹತ್ತಿಕ್ಕಲು ಸಾಧ್ಯವಾಗದಿರುವುದು ಸರ್ಕಾರ ಮತ್ತು ಸೇನೆಯ ಬಹುದೊಡ್ಡ ವೈಫಲ್ಯವಾಗಿದೆ. ಹೀಗಾಗಿ ಸೇನಾ ಮುಖ್ಯಸ್ಥ ಸ್ಥಾನದಿಂದ ಮುನೀರ್ ಅವರನ್ನು ಕಿತ್ತು ಹಾಕಲು, ಸರ್ಕಾರದ ಮಟ್ಟದಲ್ಲಿ ಮತ್ತು ಸೇನೆಯ ಒಳಗಡೆಯೇ ಪ್ರಯತ್ನಗಳಾಗುತ್ತಿವೆ.
ಆದರೆ ತನ್ನ ಆಂತರಿಕ ವೈಫಲ್ಯಗಳನ್ನು ಮುಚ್ಚಿಹಾಕಲು ಮತ್ತು ಜನರ ಆಕ್ರೋಶವನ್ನು ಬೇರಡೆಗೆ ಸೆಳೆಯಲು ಜನರಲ್ ಮುನೀರ್ ನಿರಂತರ ಭಾರತ ವಿರೋಧಿ ಪ್ರೊಪಗಾಂಡ ಬಳಸುತ್ತಿದ್ದಾರೆ. ಐಎಸ್ಐ, ಉಗ್ರರ ವಲಯದಲ್ಲೂ ಇವರಿಗೆ ಬೆಂಬಲ ಇರುವುದರಿಂದ ಸರ್ಕಾರಕ್ಕೆ ಇವರನ್ನು ಕೆಳಗಿಳಿಸಲು ಸಾಧ್ಯವಾಗುತ್ತಿಲ್ಲ. ಇದೇ ವೇಳೆ ಪ್ರಧಾನಿ ಶೆಹಬಾದ್ ಶರೀಫ್ ವಿರುದ್ಧ ಉಗ್ರರು ಮತ್ತು ಪಾಕಿಸ್ತಾನಿ ಜನರಲ್ಲಿ ವಿರೋಧಿ ಭಾವನೆ ಬೆಳೆಯುತ್ತಿದೆ. ಆಂತರಿಕ ದಂಗೆ, ಇಮ್ರಾನ್ ಖಾನ್ ಬಂಧನ ವಿರೋಧಿ ಅಲೆ, ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ ಮುಂತಾದ ಅಸಲಿ ಸಮಸ್ಯೆಗಳ ಬಿಸಿಯಿಂದಾಗಿ ಜನರು ಸರ್ಕಾರದ ವಿರೋಧಿ ಭಾವನೆ ಹೊಂದಿದ್ದಾರೆ. ಆರ್ಥಿಕ ಸ್ಥಿತಿ ತೀರಾ ಹದೆಗೆಟ್ಟು ಇತಿಹಾಸದಲ್ಲಿ ಕಂಡರಿಯದಷ್ಟು ಬಡತನ ಆವರಿಸಿಕೊಂಡಿದೆ. ಇಂತಹ ಹೊತ್ತಿನಲ್ಲಿ ಭಾರತದ ವಿರುದ್ದ ಯುದ್ಧವೂ ಬೇಕಾಗಿಲ್ಲ. ಇದನ್ನು, ಖುದ್ದು ವಿದೇಶಾಂಗ ಮತ್ತು ರಕ್ಷಣಾ ಸಚಿವರು ಬಾಯ್ಬಿಟ್ಟು ಹೇಳಿದ್ದಾರೆ. ಆದರೆ, ಇವರ ಮಾತನ್ನು ಜನರಲ್ ಆಸಿಫ್ ಮುನೀರ್ ಕೇಳುತ್ತಿಲ್ಲ. ಜೊತೆಗೆ, ಉಗ್ರರೂ ಕೇಳುವ ಸ್ಥಿತಿಯಲ್ಲಿ ಇಲ್ಲ. ಯುದ್ಧ ಬೇಡವೆಂಬ ಭಾವನೆ ಸರ್ಕಾರದ ಮಟ್ಟದಲ್ಲಿ ಇದ್ದರೂ, ಆಂತರಿಕ ಮತ್ತು ಬಾಹ್ಯ ಶಕ್ತಿಗಳು ಅವರ ಕೈಕಟ್ಟಿ ಹಾಕಿವೆ. ಹೀಗಾಗಿ ದಿನಕ್ಕೊಂದು ಸುಳ್ಳು ಹೆಣೆಯುತ್ತಾ ಉಗ್ರರನ್ನು ಮತ್ತು ತೀವ್ರವಾದಿ ಜನರನ್ನು ತೃಪ್ತಿ ಪಡಿಸುವ ಇರಾದೆಯಲ್ಲಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಸೇನಾ ಮುಖ್ಯಸ್ಥ ಜನರಲ್ ಮುನೀರ್, ಮುಷರಫ್ ರೀತಿ ಆಡಳಿತವನ್ನು ಕಿತ್ತುಕೊಂಡರೆ ಅಚ್ಚರಿ ಇಲ್ಲ.
ಭಾರತ ದಾಳಿಯಿಂದ ಮೃತಪಟ್ಟ ಉಗ್ರರು ಮತ್ತು ಸೈನಿಕರನ್ನು ಭಯೋತ್ಪಾದಕರ ಸಮ್ಮುಖದಲ್ಲಿಯೇ ಸರ್ಕಾರಿ ಗೌರವದೊಂದಿಗೆ ಮಣ್ಣು ಮಾಡಿರುವುದು ಅಲ್ಲಿನ ಜನರು ಮತ್ತು ಉಗ್ರರು ಜೊತೆ ಜೊತೆಗಿದ್ದಾರೆ ಎನ್ನುವುದನ್ನು ಸೂಚಿಸಿತ್ತು. ಜನರು ಮತ್ತು ಉಗ್ರರು ಸೇನೆಯ ಜೊತೆಗೆ ನಿಂತು ಮತ್ತೆ ಕ್ಷಿಪ್ರ ಕ್ರಾಂತಿ ಎಬ್ಬಿಸುತ್ತಾರಾ, ಬಲೂಚಿಗಳೇ ಪ್ರಬಲಗೊಂಡು ದೇಶವನ್ನು ವಿಭಜಿಸುತ್ತಾರೆಯೇ ಎನ್ನುವ ಕುತೂಹಲ ಇದೆ.
The Pakistan Army has once again reiterated its motto, asserting that "jihad is our policy." Addressing a press briefing, a spokesperson of the Pakistani Army claimed that even its top leadership aligns with this ideology, referring to General Asim Muneer as a "Jihadi General."
24-06-25 05:23 pm
Bangalore Correspondent
Lokayukta Raid, Karnataka: ಬೆಂಗಳೂರು, ಶಿವಮೊಗ್ಗ...
24-06-25 01:53 pm
Kodi Sri ; ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯ ವ...
22-06-25 07:52 pm
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
24-06-25 12:03 pm
HK News Desk
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೂಲಿನಿಂದ...
23-06-25 08:54 pm
Rapper Tommy Genesis, Controversy: ಹಿಂದು ದೇವತ...
23-06-25 04:37 pm
VP Jagdeep Dhankhar; ಜೂನ್ 25 ಸಂವಿಧಾನ ಹತ್ಯೆಗೈದ...
22-06-25 07:48 pm
24-06-25 01:36 pm
Mangalore Correspondent
Iran Qatar, War, Mangalore Flight: ಗಲ್ಫ್ ರಾಷ್...
24-06-25 11:19 am
Zakariya Jokatte, Mangalore: ಮಂಗಳೂರಿನಲ್ಲಿ ಸ್ಕ...
23-06-25 11:01 pm
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
Journalist Vijay Kotian, Brand Mangalore Awar...
23-06-25 09:48 pm
23-06-25 08:51 pm
HK News Desk
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am
Sandhya Pavithra Nagaraj Fraud; ಸೌಜನ್ಯಾ ಹೆಸರಿ...
21-06-25 08:58 pm
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm