ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮೆರಿಕ, ಈಜಿಪ್ಟಿನಿಂದ ವಿಶೇಷ ವಿಮಾನ ಆಗಮನ, ಬೋರಾನ್ ಲೋಹದಿಂದ ವಿಕಿರಣ ತಡೆಗೆ ಹರಸಾಹಸ ! 

13-05-25 06:46 pm       HK News Desk   ದೇಶ - ವಿದೇಶ

ಅಣ್ವಸ್ತ್ರ ಇದೆಯೆಂದು ಬೀಗುತ್ತಿದ್ದ ಪಾಕಿಸ್ತಾನದ ಅಣ್ವಸ್ತ್ರ ಸಂಗ್ರಹಾಗಾರಕ್ಕೇ ಮಿಸೈಲ್ ದಾಳಿ ಮಾಡಿ ಭಾರತೀಯ ಸೇನೆ ಮರ್ಮಾಘಾತ ಎಸಗಿರುವ ಶಂಕೆ ಬಲವಾಗುತ್ತಿದೆ. ಪಾಕಿಸ್ತಾನದ ಅಣ್ವಸ್ತ್ರ ಶೇಖರಣಾ ಕೇಂದ್ರಗಳ ಮೇಲೆ ಕ್ಷಿಪಣಿ ದಾಳಿ ಎಸಗಿರುವ ಪ್ರದೇಶದಲ್ಲಿ ವಿಕಿರಣ ಸೋರಿಕೆ ನಿಯಂತ್ರಣಕ್ಕೆ ಪಾಕಿಸ್ತಾನ ಹರಸಾಹಸ ಪಡುತ್ತಿರುವ ಶಂಕೆ ವ್ಯಕ್ತವಾಗಿದೆ. 

ನವದೆಹಲಿ, ಮೇ 13 : ಅಣ್ವಸ್ತ್ರ ಇದೆಯೆಂದು ಬೀಗುತ್ತಿದ್ದ ಪಾಕಿಸ್ತಾನದ ಅಣ್ವಸ್ತ್ರ ಸಂಗ್ರಹಾಗಾರಕ್ಕೇ ಮಿಸೈಲ್ ದಾಳಿ ಮಾಡಿ ಭಾರತೀಯ ಸೇನೆ ಮರ್ಮಾಘಾತ ಎಸಗಿರುವ ಶಂಕೆ ಬಲವಾಗುತ್ತಿದೆ. ಪಾಕಿಸ್ತಾನದ ಅಣ್ವಸ್ತ್ರ ಶೇಖರಣಾ ಕೇಂದ್ರಗಳ ಮೇಲೆ ಕ್ಷಿಪಣಿ ದಾಳಿ ಎಸಗಿರುವ ಪ್ರದೇಶದಲ್ಲಿ ವಿಕಿರಣ ಸೋರಿಕೆ ನಿಯಂತ್ರಣಕ್ಕೆ ಪಾಕಿಸ್ತಾನ ಹರಸಾಹಸ ಪಡುತ್ತಿರುವ ಶಂಕೆ ವ್ಯಕ್ತವಾಗಿದೆ. 

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಗೋಧಾ ವಾಯುನೆಲೆಯ ಮೇಲೆ ದಾಳಿ ನಡೆಸಿದ್ದನ್ನು ಭಾರತೀಯ ವಾಯುಪಡೆ ಖಚಿತಪಡಿಸಿದೆ. ಇದೇ ಪ್ರದೇಶದ ಬಳಿಯಿರುವ ಕಿರಾನಾ ಬೆಟ್ಟದಲ್ಲಿ ಪಾಕ್‌ ಅಣ್ವಸ್ತ್ರ ನೆಲೆ ಇದೆ ಎಂದು ಹೇಳಲಾಗುತ್ತಿದ್ದು ಪರ್ವತಗಳ ಮಧ್ಯೆ ಕಪ್ಪು ಹೊಗೆ ಬರುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಅಣ್ವಸ್ತ್ರ ನಿಷ್ಕ್ರಿಯ ಆಗಿದೆಯೇ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.‌

ಕಿರಾನಾ ಬೆಟ್ಟಗಳಲ್ಲಿ ಪಾಕಿಸ್ತಾನದ ಅಣ್ವಸ್ತ್ರ ನೆಲೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ಗುರಿ ಉಗ್ರನೆಲೆಗಳು ಮಾತ್ರ ಆಗಿತ್ತು. ಅವುಗಳನ್ನು ಹೊಡೆದುರುಳಿಸಿದ್ದೇವೆ. ಕಿರಾನಾ ಬೆಟ್ಟಗಳ ಮೇಲೆ ನಾವು ದಾಳಿ ಮಾಡಿಲ್ಲ ಎಂದು ಇದೇ ವೇಳೆ ಭಾರತೀಯ ಸೇನೆ ಮಾಹಿತಿ ನೀಡಿದೆ. 

ಆದರೆ ಪಾಕಿಸ್ತಾನದ ಅಣ್ವಸ್ತ್ರ ಗೋದಾಮು ಇದೆ ಎನ್ನಲಾಗುತ್ತಿರುವ ಕಿರಾನಾ ಬೆಟ್ಟದಲ್ಲಿ ವಿಕಿರಣ ಸೋರಿಕೆಯಾಗುತ್ತಿದೆ ಎಂಬ ವದಂತಿ ಹರಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅಮೆರಿಕ ಮತ್ತು ಈಜಿಪ್ಟ್ ನಿಂದ ಎರಡು ವಿಶೇಷ ವಿಮಾನಗಳು ಪಾಕಿಸ್ತಾನಕ್ಕೆ ಆಗಮಿಸಿದ್ದು ವಿಕಿರಣ ಸೋರಿಕೆ ನಿಯಂತ್ರಣಕ್ಕಾಗಿ ವಿಶೇಷ ವಿಮಾನ ತರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ಪಾಕಿಸ್ತಾನಕ್ಕೆ ಈಜಿಪ್ಟಿನಿಂದ ಅಪಾರ ಪ್ರಮಾಣದ ಬೋರಾನ್ ರಾಸಾಯನಿಕವನ್ನು ಆಮದು ಮಾಡಲಾಗಿದ್ದು, ವಿಕಿರಣ ಸೋರಿಕೆಯನ್ನು ತಟಸ್ಥಗೊಳಿಸಲು ಬೋರಾನ್ ಬಳಸಲಾಗುತ್ತಿದೆ ಎಂದು ಹೇಳಲಾಗಿದೆ. 

ಬೋರಾನ್ ಲೋಹವು ಯಾವುದೇ ವಿಕಿರಣವನ್ನು ಹೀರಿಕೊಳ್ಳುವ ಗುಣಗಳಿಗಾಗಿ ಪರಮಾಣು ಸಂಬಂಧಿತ ಕೈಗಾರಿಕೆಗಳಲ್ಲಿ ಬಳಕೆ ಮಾಡಲಾಗುತ್ತದೆ. ವಿಶೇಷವಾಗಿ ಐಸೊಟೋಪ್ ಬೋರಾನ್-10, ಪರಮಾಣು ವಿದ್ಯುತ್ ಸ್ಥಾವರಗಳ ಸುರಕ್ಷಿತ ಕಾರ್ಯಾಚರಣೆಗೆ ಅತ್ಯಗತ್ಯ. ಸಾಮಾನ್ಯವಾಗಿ ವಿಕಿರಣ ಸೋರಿಕೆಯಂತಹ ಕ್ಲಿಷ್ಠ ಪರಿಸ್ಥಿತಿಗಳಲ್ಲಿ ತಟಸ್ಥಗೊಳಿಸಲು ಇವನ್ನು ಬಳಸಲಾಗುತ್ತದೆ. 1986ರ ಚೆರ್ನೋಬಿಲ್ ದುರಂತ ಸಮಯದಲ್ಲಿ ವಿಕಿರಣಶೀಲ ಹೊರಸೂಸುವಿಕೆಯನ್ನು ನಿಗ್ರಹಿಸಲು ಮರಳು, ಬೋರಾನ್ ಮತ್ತು ಸೀಸದ ಮಿಶ್ರಣವನ್ನು ತೆರೆದ ರಿಯಾಕ್ಟರ್ ಮೇಲೆ ಬಿಡಲಾಗಿತ್ತು.

An Egyptian Air Force transport aircraft leaving a small airport in the Pakistan hill district of Muree has set off a wave of speculation about the purpose of the flight at the time of heightened tensions with India.