Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ, ಸಹಾಯ ಮಾಡಿದ್ದೇನಷ್ಟೇ ; ಭಾರತ - ಪಾಕ್ ಕದನ ವಿರಾಮ ಬಗ್ಗೆ ಮೌನ ಮುರಿದ ಡೊನಾಲ್ಡ್ ಟ್ರಂಪ್ 

15-05-25 08:38 pm       HK News Desk   ದೇಶ - ವಿದೇಶ

ಭಾರತ ಮತ್ತು ಪಾಕಿಸ್ತಾನ ಮಧ್ಯೆ ಸಂಘರ್ಷ ಕೊನೆಗೊಳಿಸಲು ಮಧ್ಯಸ್ಥಿಕೆ ವಹಿಸಿದ್ದಾಗಿ ನೀಡಿದ್ದ ಹೇಳಿಕೆಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದೆ ಸರಿದಿದ್ದಾರೆ. 

ವಾಷಿಂಗ್ಟನ್, ಮೇ 15 : ಭಾರತ ಮತ್ತು ಪಾಕಿಸ್ತಾನ ಮಧ್ಯೆ ಸಂಘರ್ಷ ಕೊನೆಗೊಳಿಸಲು ಮಧ್ಯಸ್ಥಿಕೆ ವಹಿಸಿದ್ದಾಗಿ ನೀಡಿದ್ದ ಹೇಳಿಕೆಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದೆ ಸರಿದಿದ್ದಾರೆ. 

ಕತಾರ್‌ನ ಅಲ್- ಉನೈದ್ ವಾಯುನೆಲೆಯಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, "ನಾನೇನು ಮಧ್ಯಸ್ಥಿಕೆ ವಹಿಸಿರಲಿಲ್ಲ‌. ಆದರೆ ಭಾರತ- ಪಾಕ್ ನಡುವೆ ಕದನ ವಿರಾಮಕ್ಕೆ ಸಹಾಯ ಮಾಡಿದ್ದೇನೆ ಎಂದು ಹೇಳಿದ್ದಾರೆ. ಅಮೆರಿಕದ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಎರಡು ನೆರೆಯ ರಾಷ್ಟ್ರಗಳ ನಡುವಿನ ದ್ವೇಷ ಮುಗಿದಿದೆ. ಅದರ ಬಗ್ಗೆ ಅವರೂ ಸಂತೋಷ ಪಟ್ಟಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಸಂಘರ್ಷಗಳನ್ನು ಕೊನೆಗೊಳಿಸುವುದು ತಮ್ಮ ಆದ್ಯತೆಯೇ ವಿನಾ ಅವುಗಳನ್ನು ಪ್ರಾರಂಭಿಸುವುದಲ್ಲ ಎಂದು ಹೇಳಿದರು.

ಮೇ 10ರಂದು ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಸಂಘರ್ಷದ ಮಧ್ಯೆ, ಡೊನಾಲ್ಡ್ ಟ್ರಂಪ್ ತನ್ನ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ದೀರ್ಘ ಮಾತುಕತೆ ಬಳಿಕ ಎರಡೂ ದೇಶಗಳು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಿದ್ದರು. ಆದರೆ ಭಾರತದ ವಿದೇಶಾಂಗ ಸಚಿವಾಲಯ ಟ್ರಂಪ್ ಹೇಳಿಕೆಯನ್ನು ನಿರಾಕರಿಸಿದ್ದಲ್ಲದೆ, ಎರಡೂ ದೇಶಗಳ ಡಿಜಿಎಂಒ ಮಟ್ಟದ ಮಾತುಕತೆಯಿಂದ ಕದನ ವಿರಾಮ ನಿರ್ಧಾರಕ್ಕೆ ಬರಲಾಯಿತು. ಪಾಕಿಸ್ತಾನ ಕಡೆಯಿಂದ ಮನವಿ ಮಾಡಿದ ನಂತರ ಕದನ ವಿರಾಮ ನಡೆದಿದೆ ಎಂದು ಸ್ಪಷ್ಟಪಡಿಸಿತ್ತು. ಟ್ರಂಪ್ ಮಧ್ಯಸ್ಥಿಕೆ ಎನ್ನುವ ವಿಚಾರ ಭಾರೀ ಟೀಕೆಗೂ ಗುರಿಯಾಗಿತ್ತು.

US President Donald Trump has claimed that hostilities between India and Pakistan have been “settled,” crediting his administration’s efforts for brokering peace between the two nuclear-armed neighbours. Speaking to American troops at a military base in Qatar during a Gulf tour, Trump described the situation as having reached a dangerous point before the US intervened diplomatically.