ಬ್ರೇಕಿಂಗ್ ನ್ಯೂಸ್
18-05-25 08:23 pm HK News Desk ದೇಶ - ವಿದೇಶ
ನವದೆಹಲಿ, ಮೇ 18 : ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ನಡೆಸಿದ ಆಪರೇಶನ್ ಸಿಂಧೂರ್ ಕಾರ್ಯಾಚರಣೆ ಮತ್ತು ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯನ್ನು ವಿಶ್ವ ಮಟ್ಟದಲ್ಲಿ ಪ್ರಚುರಪಡಿಸಲು ವಿವಿಧ ದೇಶಗಳಿಗೆ ತೆರಳುವುದಕ್ಕಾಗಿ ಕೇಂದ್ರ ಸರಕಾರ ಸರ್ವಪಕ್ಷಗಳ ಸಂಸದರನ್ನು ಒಳಗೊಂಡ ಏಳು ಕಮಿಟಿಗಳನ್ನು ಮಾಡಿದ್ದು, ಇದರ ನೇತೃತ್ವವನ್ನು ತಿರುವನಂತಪುರ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ನೀಡಿದೆ. ಪ್ರತಿ ತಂಡದಲ್ಲಿ ಏಳು ಮಂದಿ ಸಂಸದರು ಮತ್ತು ಇನ್ನಿತರ ಪ್ರಮುಖರನ್ನು ಸೇರ್ಪಡೆ ಮಾಡಲಾಗಿದ್ದು, ನಿಯೋಗದಲ್ಲಿ ಕರ್ನಾಟಕದಿಂದ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಮತ್ತು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಸ್ಥಾನ ಪಡೆದಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ನಿಯೋಗವು ಅಮೆರಿಕ, ಪನಾಮ, ಗಯಾನ, ಬ್ರೆಝಿಲ್, ಕೊಲಂಬಿಯಾ ದೇಶಗಳಿಗೆ ಭೇಟಿ ನೀಡಲಿದೆ. ಇವರ ತಂಡದಲ್ಲಿ ಶಾಂಭವಿ (ಎಲ್ ಜೆಪಿ-ಪಾಸ್ವಾನ್), ಸರ್ಫರಾಜ್ ಅಹ್ಮದ್ (ಜೆಎಂಎಂ), ಜಿಎಂ ಹರೀಶ್ ಬಾಲಯೋಗಿ(ಟಿಡಿಪಿ), ಶಶಾಂಕ್ ಮಣಿ ತ್ರಿಪಾಠಿ (ಬಿಜೆಪಿ), ಭುಬನೇಶ್ವರ್ ಕಾಲಿಟಾ(ಬಿಜೆಪಿ), ಮಿಲಿಂದ್ ಮುರುಳಿ ದೇವುರಾ(ಶಿವಸೇನಾ), ತರಣ್ ಜಿತ್ ಸಿಂಗ್ ಸಂಧು, ತೇಜಸ್ವಿ ಸೂರ್ಯ (ಬಿಜೆಪಿ) ಇರಲಿದ್ದಾರೆ.
ಡಿಎಂಕೆ ಸಂಸದೆ ಕನಿಮೋಳಿ ಕರುಣಾನಿಧಿ ನೇತೃತ್ವದ ನಿಯೋಗವು ಸ್ಪೈನ್, ಗ್ರೀಸ್, ಸ್ಲೊವೇನಿಯಾ, ಲಾತ್ವಿಯಾ, ರಶ್ಯಾ ದೇಶಗಳಿಗೆ ಭೇಟಿ ನೀಡಲಿದೆ. ಇವರ ತಂಡದಲ್ಲಿ ರಾಜೀವ್ ರೇ (ಎಸ್ಪಿ), ಮಿಯಾನ್ ಅಲ್ತಾಫ್ ಅಹ್ಮದ್(ಎನ್ ಸಿ), ಕ್ಯಾಪ್ಟನ್ ಬ್ರಿಜೇಶ್ ಚೌಟ(ಬಿಜೆಪಿ), ಪ್ರೇಮ್ ಚಂದ್ ಗುಪ್ತಾ (ಆರ್ ಜೆಡಿ), ಅಶೋಕ್ ಕುಮಾರ್ ಮಿತ್ತಲ್ (ಎಎಪಿ), ಮಂಜೀವ್ ಎಸ್ ಪುರಿ, ಜಾವೇದ್ ಅಶ್ರಫ್ ಇರಲಿದ್ದಾರೆ.
ಬಿಜೆಪಿ ಸಂಸದ ಬೈಯಜಂತ್ ಪಾಂಡಾ ನೇತೃತ್ವದ ಸಮಿತಿಯಲ್ಲಿ ನಿಶಿಕಾಂತ್ ದುಬೆ(ಬಿಜೆಪಿ), ಫಾಂಗ್ನೊನ್ ಕೊನ್ಯಾಕ್(ಬಿಜೆಪಿ), ರೇಖಾ ಶರ್ಮಾ(ಬಿಜೆಪಿ), ಅಸಾದುದ್ದೀನ್ ಓವೈಸಿ(ಎಐಎಂಐಎಂ) ಮತ್ತು ಸತ್ನಂ ಸಿಂಗ್ ಸಂಧು, ಗುಲಾಮ್ ನಬಿ ಆಜಾದ್, ಹರ್ಷ್ ಶೃಂಗ್ಲಾ ಅವರಿದ್ದಾರೆ. ಇವರ ನಿಯೋಗವು ಸೌದಿ ಅರೇಬಿಯಾ, ಕುವೈಟ್, ಬಹ್ರೈನ್, ಅಲ್ಜೀರಿಯಾ ದೇಶಗಳಿಗೆ ಭೇಟಿ ನೀಡಿ ಭಾರತೀಯ ಸೇನೆಯ ದಾಳಿ ಮತ್ತು ಪಾಕ್ ಪ್ರೇರಿತ ಭಯೋತ್ಪಾದನೆ ಹಾಗೂ ಪಹಲ್ಗಾಮ್ ದಾಳಿಯ ಕುರಿತಾಗಿ ಮಾಹಿತಿ ನೀಡಲಿದೆ.
ಬಿಜೆಪಿ ಸಂಸದ ರವಿಶಂಕರ ಪ್ರಸಾದ್ ನೇತೃತ್ವದಲ್ಲಿ ನಿಯೋಗವು ಫ್ರಾನ್ಸ್, ಜರ್ಮನಿ, ಯುರೋಪ್, ಇಟಲಿ, ಡೆನ್ಮಾರ್ಕ್ ದೇಶಗಳಿಗೆ ಭೇಟಿ ನೀಡಲಿದೆ. ಇವರ ತಂಡದಲ್ಲಿ ದಗ್ಗುಬಾಟಿ ಪುರಂದೇಶ್ವರಿ(ಬಿಜೆಪಿ), ಪ್ರಿಯಾಂಕ ಚತುರ್ವೇದಿ (ಶಿವಸೇನಾ- ಠಾಕ್ರೆ ಬಣ), ಗುಲಾಮ್ ಅಲಿ ಕಟಾನಾ ಮತ್ತು ಅಮರ್ ಸಿಂಗ್(ಕಾಂಗ್ರೆಸ್), ಸಮಿಕ್ ಭಟ್ಟಾಚಾರ್ಯ(ಬಿಜೆಪಿ), ಎಂ.ಜೆ. ಅಕ್ಬರ್, ಪಂಕಜ್ ಸರಣ್ ಅವರಿದ್ದಾರೆ.
ಜೆಡಿಯು ಸಂಸದ ಸಂಜಯ ಕುಮಾರ್ ಝಾ ನೇತೃತ್ವದ ನಿಯೋಗ ಇಂಡೋನೇಶ್ಯಾ, ಮಲೇಶ್ಯಾ, ರಿಪಬ್ಲಿಕ್ ಆಫ್ ಕೊರಿಯಾ, ಜಪಾನ್, ಸಿಂಗಾಪುರ ದೇಶಗಳಿಗೆ ತೆರಳಲಿದೆ. ಇವರ ತಂಡದಲ್ಲಿ ಅಪರಾಜಿತ ಸಾರಂಗಿ(ಬಿಜೆಪಿ), ಯೂಸುಫ್ ಪಠಾಣ್ (ತೃಣಮೂಲ ಕಾಂಗ್ರೆಸ್), ಬ್ರಿಜ್ ಲಾಲ್ (ಬಿಜೆಪಿ), ಜಾನ್ ಬ್ರಿಟ್ಟಾಸ್(ಸಿಪಿಐಎಂ), ಪ್ರಧಾನ್ ಬರುವಾ(ಬಿಜೆಪಿ), ಹೇಮಾಂಗ್ ಜೋಷಿ(ಬಿಜೆಪಿ), ಸಲ್ಮಾನ್ ಖುರ್ಷಿದ್, ಮೋಹನ್ ಕುಮಾರ್ ಅವರಿದ್ದಾರೆ.
ಶಿವಸೇನಾ ಸಂಸದ ಶ್ರೀಕಾಂತ್ ಏಕನಾಥ್ ಶಿಂಧೆ ನೇತೃತ್ವದ ನಿಯೋಗವು ಯುಎಇ, ಲೈಬೀರಿಯಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಸಿಯೆರಾ ಲಿಯೋನ್ ದೇಶಗಳಿಗೆ ಭೇಟಿ ನೀಡಲಿದೆ. ಇವರ ತಂಡದಲ್ಲಿ ಬಾನ್ಸುರಿ ಸ್ವರಾಜ್ (ಬಿಜೆ), ಇ.ಟಿ ಮಹಮ್ಮದ್ ಬಶೀರ್ (ಐಯುಎಂಎಲ್), ಅತುಲ್ ಗರ್ಗ್ (ಬಿಜೆಪಿ), ಸಸ್ಮಿತ್ ಪಾತ್ರ(ಬಿಜೆಡಿ), ಮನನ್ ಕುಮಾರ್ ಮಿಶ್ರಾ (ಬಿಜೆಪಿ), ಎಸ್.ಎಸ್ ಅಹ್ಲುವಾಲಿಯಾ, ಸುಜನ್ ಚಿನಾಯ್ ಅವರಿದ್ದಾರೆ.
ಎನ್ ಸಿಪಿ ಸಂಸದೆ ಸುಪ್ರಿಯಾ ಸುಳೆ ನೇತೃತ್ವದ ನಿಯೋಗವು ಈಜಿಪ್ಟ್, ಕತಾರ್, ಇತಿಯೋಪಿಯಾ, ಸೌತ್ ಆಫ್ರಿಕಾ ದೇಶಗಳಿಗೆ ತೆರಳಲಿದೆ. ಇವರ ತಂಡದಲ್ಲಿ ರಾಜೀವ್ ಪ್ರತಾಪ್ ರೂಡಿ(ಬಿಜೆಪಿ), ವಿಕ್ರಂಜಿತ್ ಸಿಂಗ್ ಸಾಹ್ನಿ(ಎಎಪಿ), ಮನೀಶ್ ತಿವಾರಿ(ಕಾಂಗ್ರೆಸ್), ಅನುರಾಗ್ ಸಿಂಗ್ ಠಾಕೂರ್ (ಬಿಜೆಪಿ), ಲಾವು ಶ್ರೀಕೃಷ್ಣ ದೇವರಾಯಲು (ಟಿಡಿಪಿ), ಆನಂದ್ ಶರ್ಮಾ, ವಿ. ಮರಲೀಧರನ್, ಸಯ್ಯದ್ ಅಕ್ಬರುದ್ದೀನ್ ಅವರೂ ಇರಲಿದ್ದಾರೆ. ಎಲ್ಲ ಏಳು ತಂಡದಲ್ಲೂ ಸಂಸದರು ಮಾತ್ರವಲ್ಲದೆ ಮಾಜಿ ಹೈಕಮಿಷನ್ ಅಧಿಕಾರಿಗಳು, ಹಿರಿಯ ಪತ್ರಕರ್ತರು, ಹಿರಿಯ ವಕೀಲರನ್ನೂ ನಿಯೋಗದಲ್ಲಿ ಸದಸ್ಯರನ್ನಾಗಿ ಮಾಡಲಾಗಿದೆ.
ಹಿರಿಯ ಸಂಸದ ಶಶಿ ತರೂರ್ ಅವರಿಗೆ ಸರ್ವಪಕ್ಷದ ಸಂಸದರನ್ನು ಒಳಗೊಂಡ ಕಮಿಟಿಯ ನೇತೃತ್ವ ನೀಡಿರುವುದು ಕಾಂಗ್ರೆಸಿಗೆ ಇರಿಸು ಮುರಿಸಾಗಿದ್ದು ಕೇರಳ ಕಾಂಗ್ರೆಸ್, ಬಿಜೆಪಿಯಲ್ಲಿ ಟ್ಯಾಲೆಂಟ್ ಇರುವಂತವರ ಕೊರತೆ ಇರುವುದರಿಂದ ಕಾಂಗ್ರೆಸ್ ಸಂಸದರಿಗೆ ಈ ಸ್ಥಾನ ಕೊಟ್ಟಿದೆ. ಶಶಿ ತರೂರ್ ಅವರು ತಮ್ಮ ಕೆಲಸವನ್ನು ವಿಶ್ವ ಮಟ್ಟದಲ್ಲಿ ಚಾಕಚಕ್ಯತೆಯಿಂದ ನಿರ್ವಹಿಸಲಿದ್ದಾರೆಂಬ ವಿಶ್ವಾಸ ಇದೆಯೆಂದು ಟಾಂಗ್ ಕೊಟ್ಟಿದೆ.
Karnataka BJP MPs Tejaswi Surya and Brijesh Chowta were on Saturday chosen by the Modi government to be part of multi-party delegations being sent to various countries to explain India’s stance on terrorism emanating from Pakistan.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm