ಆಡಲು ಹೋಗಿದ್ದಾಗ ಮಳೆ ಬಂತೆಂದು ನಿಲ್ಲಿಸಿದ್ದ ಕಾರಿನ ಒಳಸೇರಿದ್ದ ಮಕ್ಕಳು ; ಕಾರು ತನ್ನಿಂತಾನೇ ಲಾಕ್ ಆಗಿ ಉಸಿರು ಕಟ್ಟಿ ಪ್ರಾಣ ಬಿಟ್ಟ ನಾಲ್ವರು ಪುಟಾಣಿಗಳು ! 

19-05-25 02:25 pm       HK News Desk   ದೇಶ - ವಿದೇಶ

ಮಕ್ಕಳು ಆಟವಾಡುತ್ತಿದ್ದಾಗ ಮಳೆ ಬಂತೆಂದು ಆಶ್ರಯಕ್ಕಾಗಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಒಳಗೆ ಹೋಗಿದ್ದು ಕೆಲವೇ ಕ್ಷಣಗಳಲ್ಲಿ ಕಾರು ಲಾಕ್ ಆಗಿದ್ದರಿಂದ ಯಾರಿಗೂ ತಿಳಿಯದೆ ನಾಲ್ವರು ಮಕ್ಕಳು ದುರಂತ ಸಾವಿಗೀಡಾದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ದ್ವಾರಮುಡಿ ಗ್ರಾಮದಲ್ಲಿ ನಡೆದಿದೆ.

ವಿಶಾಖಪಟ್ಟಣ, ಮೇ 19 : ಮಕ್ಕಳು ಆಟವಾಡುತ್ತಿದ್ದಾಗ ಮಳೆ ಬಂತೆಂದು ಆಶ್ರಯಕ್ಕಾಗಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಒಳಗೆ ಹೋಗಿದ್ದು ಕೆಲವೇ ಕ್ಷಣಗಳಲ್ಲಿ ಕಾರು ಲಾಕ್ ಆಗಿದ್ದರಿಂದ ಯಾರಿಗೂ ತಿಳಿಯದೆ ನಾಲ್ವರು ಮಕ್ಕಳು ದುರಂತ ಸಾವಿಗೀಡಾದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ದ್ವಾರಮುಡಿ ಗ್ರಾಮದಲ್ಲಿ ನಡೆದಿದೆ.

ಮಾಂಗಿ ಉದಯ್ (8), ಬುರ್ಲೆ ಚಾರುಮತಿ(8), ಬುರ್ಲೆ ಚರಿಷ್ಮಾ(6), ಮನಸ್ವಿನಿ(6) ಮೃತ ಮಕ್ಕಳು. ಈ ಪೈಕಿ ಚಾರುಮತಿ ಮತ್ತು ಚರಿಷ್ಮಾ ಸೋದರಿಯರಾಗಿದ್ದು, ಇನ್ನಿಬ್ವರು ಇವರ ಸ್ನೇಹಿತರಾಗಿದ್ದರು. ಭಾನುವಾರ ಮಧ್ಯಾಹ್ನ ಘಟನೆ ನಡೆದಿದ್ದು, ಮನೆಯಿಂದ ಹೊರಗಡೆ ಆಡಲು ಹೋಗಿದ್ದ ಮಕ್ಕಳು ತುಂಬ ಹೊತ್ತಾದರೂ ಬಂದಿರಲಿಲ್ಲ. ಆನಂತರ ನಾಲ್ವರು ಮಕ್ಕಳ ಮನೆಮಂದಿ, ಅಕ್ಕ ಪಕ್ಕದ ಮನೆಯವರೆಲ್ಲ ಹುಡುಕಾಟ ನಡೆಸಿದ್ದಾರೆ. ಮೂರು ಗಂಟೆ ಕಾಲ ಹುಡುಕಿದರೂ ಸಿಕ್ಕಿರಲಿಲ್ಲ. ಸಂಜೆ ಹೊತ್ತಿಗೆ ಪಕ್ಕದ ಮಹಿಳಾ ಮಂಡಳಿಯ ಕಚೇರಿ ಎದುರಲ್ಲಿ ನಿಲ್ಲಿಸಿದ್ದ ಕಾರಿನ ಒಳಗಡೆ ಮಕ್ಕಳಿರುವುದು ಪತ್ತೆಯಾಗಿತ್ತು.

ಕೂಡಲೇ ಕಾರಿನ ಗ್ಲಾಸ್ ಒಡೆದು ಅಸ್ವಸ್ಥ ಸ್ಥಿತಿಯಲ್ಲಿದ್ದ ಮಕ್ಕಳನ್ನು ಆಸ್ಪತ್ರೆಗೆ ಒಯ್ದಿದ್ದಾರೆ. ಅಷ್ಟರಲ್ಲಿ ಮಕ್ಕಳು ಉಸಿರಾಟ ಸಾಧ್ಯವಾಗದೆ ಮತ್ತು ಕಾರಿನ ಒಳಗಡೆಯ ಬಿಸಿಯಿಂದಾಗಿ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಮಕ್ಕಳು ಆಡಲು ಹೋಗಿದ್ದಾಗ ಮಳೆ ಬಂತೆಂದು ಅಲ್ಲಿಯೇ ಇದ್ದ ಕಾರಿನಲ್ಲಿ ಆಸರೆ ಪಡೆದಿದ್ದಾರೆ. ಆದರೆ ಕಾರು ತನ್ನಿಂತಾನೇ ಲಾಕ್ ಆಗಿದ್ದರಿಂದ ಒಳಗಡೆ ಸಿಲುಕಿದ್ದು ನಾಲ್ವರು ಕೂಡ ದುರಂತ ಸಾವಿಗೀಡಾಗಿದ್ದಾರೆ. ಎರಡು ದಿನಗಳ ಹಿಂದೆ ವ್ಯಕ್ತಿಯೊಬ್ಬರು ಕಾರನ್ನು ರಸ್ತೆ ಬದಿ ನಿಲ್ಲಿಸಿ ಹೋಗಿದ್ದು, ಲಾಕ್ ಆಗಿದ್ಯಾ ಎಂದು ಗಮನಿಸದೆ ಬಿಟ್ಟು ಹೋಗಿದ್ದರು. ಮಳೆ ಬರುತ್ತಿದ್ದಾಗ ಸೆನ್ಸಾರ್ ಆಗಿ ಅಕಸ್ಮಾತ್ ಓಪನ್ ಆಗಿದ್ದು, ಮಕ್ಕಳು ಒಳಗಡೆ ಹೋಗಿ ಸಿಕ್ಕಿಕೊಂಡು ಪ್ರಾಣ ತ್ಯಜಿಸಿದ್ದಾರೆ.

In a heart-wrenching tragedy, four children suffocated to death inside a locked car in Andhra Pradesh's Vijayanagaram district on Sunday. The tragedy struck Dwarapudi village under Vijayanagaram Cantonment.