ಬ್ರೇಕಿಂಗ್ ನ್ಯೂಸ್
23-05-25 08:08 pm HK News Desk ದೇಶ - ವಿದೇಶ
ನವದೆಹಲಿ, ಮೇ 23 : ಡಿಎಂಕೆ ಸಂಸದೆ ಕನಿಮೋಳಿ ನೇತೃತ್ವದ ಸರ್ವಪಕ್ಷಗಳ ಸಂಸದರ ನಿಯೋಗವು ಶುಕ್ರವಾರ ಬೆಳಗ್ಗೆ ರಷ್ಯಾ ತಲುಪಿದೆ. ಆದರೆ ಭಯೋತ್ಪಾದನೆ ವಿಚಾರದಲ್ಲಿ ತೆರಳಿದ್ದ ಭಾರತದ ತಂಡಕ್ಕೆ ರಷ್ಯಾದಲ್ಲೂ ಭಯೋತ್ಪಾದನೆಯ ನೆರಳು ಕಾಡಿದೆ. ರಾಜಧಾನಿ ಮಾಸ್ಕೋ ಏರ್ಪೋರ್ಟ್ ನಲ್ಲಿ ಭಾರತದ ನಿಯೋಗ ಇದ್ದ ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲೇ ಡ್ರೋಣ್ ದಾಳಿಯಾಗಿದ್ದು 45 ನಿಮಿಷ ಕಾಲ ಆಗಸದಲ್ಲೇ ವಿಮಾನ ಹಾರಾಡುವ ಸ್ಥಿತಿಯಾಗಿತ್ತು.
ಶುಕ್ರವಾರ ಬೆಳಗ್ಗೆ ಭಾರತದ ಏಳು ಸಂಸದರು ಮತ್ತು ಅಧಿಕಾರಿಗಳಿದ್ದ ವಿಮಾನವು ಮಾಸ್ಕೋ ವಿಮಾನ ನಿಲ್ದಾಣಕ್ಕೆ ತಲುಪಿದೆ. ಆದರೆ ವಿಮಾನ ಇಳಿಯುವುದಕ್ಕೆ ಏರ್ಪೋರ್ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಯುಕ್ರೇನ್ ಕಡೆಯಿಂದ ಡ್ರೋಣ್ ದಾಳಿಯಾಗಿದ್ದರಿಂದ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಹೀಗಾಗಿ 45 ನಿಮಿಷ ಕಾಲ ಭಾರತದ ನಿಯೋಗ ಇದ್ದ ವಿಮಾನವು ಆಗಸದಲ್ಲಿಯೇ ಸುತ್ತು ಹಾಕುವಂತಾಗಿತ್ತು. ಆನಂತರ, ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಸಂಸದೆ ಕನಿಮೋಳಿ ನೇತೃತ್ವದ ತಂಡವಿದ್ದ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

ಕನಿಮೋಳಿ ನೇತೃತ್ವದ ತಂಡದಲ್ಲಿ ಮಾಜಿ ಹೈಕಮಿಷನ್ ಅಧಿಕಾರಿಗಳಾದ ಮಂಜೀವ್ ಸಿಂಗ್ ಪುರಿ ಮತ್ತು ಜಾವೇದ್ ಅಶ್ರಫ್ ಇದ್ದಾರೆ. ಇದಲ್ಲದೆ, ಈ ತಂಡದಲ್ಲಿ ಆಪ್ ಸಂಸದ ಅಶೋಕ್ ಕುಮಾರ್ ಮಿತ್ತಲ್, ಮಂಗಳೂರು ಮೂಲದ ಬಿಜೆಪಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಿಯಾನ್ ಅಲ್ತಾಫ್ ಅಹ್ಮದ್ (ಎನ್ ಸಿ), ರಾಜೀವ್ ರೇ (ಎಸ್ಪಿ) ಮತ್ತು ಪ್ರೇಮ್ ಚಂದ್ ಗುಪ್ತಾ(ಆರ್ ಜೆಡಿ) ತಂಡದಲ್ಲಿದ್ದಾರೆ. ಇವರ ತಂಡವು ಮೊದಲಿಗೆ ರಷ್ಯಾ ಭೇಟಿ ನೀಡಿದ್ದು, ಆನಂತರ ಸ್ಪೇನ್, ಸ್ಲೊವೇನಿಯಾ, ಲಾತ್ವಿಯಾ, ಗ್ರೀಸ್ ದೇಶಗಳಿಗೆ ತೆರಳಲಿದ್ದು, ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ಭಯೋತ್ಪಾದಕ ರಾಷ್ಟ್ರ ಎಂಬುದನ್ನು ಪ್ರಚಾರ ಪಡಿಸಲಿದೆ. ಭಾರತ- ಪಾಕಿಸ್ತಾನಕ್ಕೆ ಸಮಾನ ಆದ್ಯತೆ ನೀಡದಿರಿ ಮತ್ತು ಪಾಕಿಸ್ತಾನದ ಭಯೋತ್ಪಾದನೆಯಿಂದಾಗಿ ಬಹಳಷ್ಟು ಭಾರತೀಯರು ನೋವು ಪಟ್ಟಿದ್ದಾರೆ ಎಂಬುದನ್ನು ಸಾರಿ ಹೇಳಲಿದ್ದಾರೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಆಪರೇಶನ್ ಸಿಂಧೂರ ಕಾರ್ಯಾಚರಣೆ ಮತ್ತು ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳಿಗೆ ಪೋಷಿಸುತ್ತಿರುವುದನ್ನು ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸಲು ಮೋದಿ ನೇತೃತ್ವದ ಸರಕಾರ ರಾಜತಾಂತ್ರಿಕ ಕ್ರಮದ ಭಾಗವಾಗಿ ಭಾರತದಿಂದ ಏಳು ನಿಯೋಗಗಳನ್ನು 33 ದೇಶಗಳಿಗೆ ಕಳಿಸಿಕೊಟ್ಟಿದೆ. ಇದರಲ್ಲಿ ವಿವಿಧ ಪಕ್ಷಗಳ ನುರಿತ ಸಂಸದರು ಮತ್ತು ಅಧಿಕಾರಿಗಳನ್ನು ಒಳಗೊಂಡ 59 ಮಂದಿ ಇದ್ದಾರೆ.
Several flights were halted at Moscow airport following a drone attack, including the flight carrying DMK's Kanimozhi-led all-party delegation. Russia and Ukraine have deployed drones against one another regularly since Russia launched its military offensive on Ukraine over three years ago, but Moscow has rarely been targeted. Drone attacks have intensified in recent days.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 06:52 pm
HK News Staffer
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm