ಬ್ರೇಕಿಂಗ್ ನ್ಯೂಸ್
04-06-25 05:05 pm HK News Desk ದೇಶ - ವಿದೇಶ
ಚೆನ್ನೈ, ಜೂ.4 : ಹಾವಿನಂತೆ ಕಾಣಿಸುವ ಅಪರೂಪದಲ್ಲೇ ಅಪರೂಪ ಎನ್ನಲಾದ ಜಲಚರವನ್ನು ತಮಿಳುನಾಡಿನ ಮೀನುಗಾರರು ಬೇಟೆಯಾಡಿದ್ದು ಈ ಮಾದರಿಯ ಮೀನನ್ನು ನೋಡಿ ಮೀನುಗಾರರೇ ಬೆಚ್ಚಿಬಿದ್ದಿದ್ದಾರೆ. ಬೆಳ್ಳಿಯಂತೆ ಮಿನುಗುವ ಬಣ್ಣದ ಈ ಮೀನು 30 ಅಡಿ ಉದ್ದ ಹೊಂದಿದ್ದು ಆಳ ಸಮುದ್ರದಲ್ಲಿ ಮಾತ್ರ ಕಾಣಸಿಗಬಲ್ಲ ಮೀನು ಬಲೆಗೆ ಸಿಲುಕಿ ದಡಕ್ಕೆ ಬಂದಿದ್ದು ಸೋಜಿಗ ಮೂಡಿಸಿದೆ.
ಇಂಗ್ಲಿಷ್ ನಲ್ಲಿ oarfish ಎಂದು ಕರೆಯಲ್ಪಡುವ ಇದನ್ನು ಜಪಾನ್ ನಲ್ಲಿ ಪ್ರಳಯ ಮೀನು ಎಂದೂ ಕರೆಯುತ್ತಾರಂತೆ. ಸಮುದ್ರ ಮೇಲ್ಮೈನಲ್ಲಿ ಈ ಮೀನು ಕಾಣಿಸಿಕೊಳ್ಳುವುದು ಅತ್ಯಂತ ವಿರಳ. ಕಾಣಿಸಿಕೊಂಡರೆ ಜಗತ್ತಿಗೆ ಏನೋ ಗಂಡಾಂತರ ಕಾದಿದೆ ಅನ್ನೋ ಮುನ್ಸೂಚನೆಯಂತೆ. ಇದೇ ಕಾರಣಕ್ಕೆ ಈ ಮೀನನ್ನು ಡೂಮ್ಸ್ ಡೇ (ಪ್ರಳಯ ದಿನ) ಮೀನು ಎಂದೂ ಕರೆಯುತ್ತಾರೆ. ಜಪಾನ್, ಫಿಲಿಪೈನ್ಸ್ ಜನರ ನಂಬಿಕೆಯ ಪ್ರಕಾರ, ಈ ಮೀನು ಕಾಣಿಸಿಕೊಂಡರೆ ಭಾರೀ ದೊಡ್ಡ ಪ್ರಾಕೃತಿಕ ವಿಕೋಪ ಸಂಭವಿಸುತ್ತದಂತೆ. ಹೀಗಾಗಿ ಈ ಮೀನಿಗೆ 'ಡೂಮ್ಸ್ ಡೇ' ಎಂಬ ಹೆಸರು ಬಂದಿದ್ದು ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಮೀನು ಸಿಕ್ಕಿತು ಎಂದರೆ ಪ್ರಪಂಚದಲ್ಲಿ ಎಲ್ಲಾದರೂ ಪ್ರಳಯ, ಭೂಕಂಪ ಮಾದರಿಯ ಪ್ರಕೃತಿ ವಿಕೋಪ ಸಂಭವಿಸುತ್ತದೆ ಎಂಬ ಸೂಚನೆ ಎಂಬ ನಂಬಿಕೆಯಿದೆ. ಜಪಾನ್ ಜನರು, ದೇವರೇ ಮೀನಿನ ರೂಪದಲ್ಲಿ ಬಂದು ನಮಗೆ ಎಚ್ಚರಿಕೆ ನೀಡುತ್ತಾನೆ ಎಂದು ನಂಬಿದ್ದಾರೆ. ಹೊಳೆಯುವ ಮೀನಿನಂತೆ ಕಂಡರೂ ಉದ್ದಕ್ಕಿರುವುದರಿಂದ ಹಾವಿನಂತೆ ಕಾಣುತ್ತದೆ. ಜಪಾನ್ ದೇಶದ ಜನಪದ ಕತೆಗಳಲ್ಲಿ 'Ryugu No Sukai ' (ಸಮುದ್ರ ದೇವನ ದೂತ) ಎಂಬ ಅರ್ಥವಿದ್ದು ಮನುಷ್ಯನಿಗೆ ಎಚ್ಚರಿಕೆ ನೀಡುವುದಕ್ಕಾಗಿ ಕಾಣಿಸಿಕೊಳ್ಳುವುದಂತೆ. ತಮಿಳುನಾಡು ಕರಾವಳಿಯಲ್ಲಿ ಮೇ 30ರಂದು ಈ ಮೀನು ಪತ್ತೆಯಾಗಿದ್ದು, ಜಾಲತಾಣಗಳಲ್ಲಿ ವಿಡಿಯೋ ಹರಿದಾಡಿವೆ.
ಜಪಾನ್ ನಂಬಿಕೆಯಂತೆ, 2011ರಲ್ಲಿ ತೊಹೊಕು ಭೂಕಂಪಕ್ಕೂ ಮುನ್ನ 20 ಈ ರೀತಿಯ ಮೀನುಗಳು ಕಾಣಸಿಕ್ಕಿದೆಯಂತೆ. ಫಿಲಿಪೈನ್ಸ್ ನಲ್ಲಿ 2017 ರಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದಾಗಲೂ ಈ ಮೀನುಗಳು ಮೇಲೆ ಬಂದಿದ್ದುವಂತೆ. ಮೆಕ್ಸಿಕೋದಲ್ಲಿಯೂ ಭೂಕಂಪ, ಸುನಾಮಿ ಸಂಭವಿಸಿದಾಗ ಈ ಮೀನು ಕಾಣಸಿಕ್ಕಿದ್ದರಿಂದ ಇದು ಪ್ರಕೃತಿ ವಿಕೋಪದ ಮುನ್ಸೂಚನೆ ಎನ್ನುವ ನಂಬಿಕೆಯನ್ನು ಗಟ್ಟಿಗೊಳಿಸಿದೆ. ಆದರೆ 2019ರಲ್ಲಿ ಅಮೆರಿಕದ ಭೂಕಂಪ ತಜ್ಞರು ಈ ಬಗ್ಗೆ ಹಿಂದಿನೆಲ್ಲ ಪ್ರಾಕೃತಿಕ ವಿಕೋಪಗಳನ್ನು ವಿಶ್ಲೇಷಿಸಿ ಮಾಡಿದ ವರದಿಯಲ್ಲಿ ಓರ್ ಫಿಶ್ ಅನಾಹುತ ಮುನ್ಸೂಚಕ ಮೀನು ಎನ್ನುವ ವಾದವನ್ನು ನಿರಾಕರಿಸಿದ್ದಾರೆ.
ಓರ್ಫಿಶ್ ಸಾಮಾನ್ಯವಾಗಿ ಸಮುದ್ರದ ಆಳದಲ್ಲಿ ಅಂದರೆ, ಸುಮಾರು 700 ರಿಂದ 3,280 ಅಡಿಯಲ್ಲಿ ಜೀವಿಸುತ್ತವೆ. ಆದ್ದರಿಂದ, ಮೇಲ್ಮೈನಲ್ಲಿ ಈ ಜೀವಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಮೀನುಗಳ ಆರೋಗ್ಯ ಸ್ಥಿತಿ ಹದಗೆಟ್ಟಾಗ ಅಥವಾ ಏನಾದರೂ ಸಮಸ್ಯೆ ಆದಾಗ ಮಾತ್ರ ಹೊರಗಡೆ ಬರುತ್ತವೆ ಎಂದು ತಜ್ಞರು ಹೇಳುತ್ತಾರೆ. ಇದೇ ವೇಳೆ ಸಮುದ್ರದ ಅಡಿಯಲ್ಲಿ ಆಗುವಂತಹ ಬದಲಾವಣೆ, ಅದರಿಂದ ಉಂಟಾಗುವ ಒತ್ತಡಗಳಿಂದಾಗಿ ಈ ಮೀನುಗಳು ಮೇಲ್ಮೈಗೆ ಬರುತ್ತವೆ, ಸಮುದ್ರ ತಳದಲ್ಲಾಗುವ ಪರಿಚಲನೆಗಳು ಭೂಮಿಯಲ್ಲಾಗುವ ವಿಕೋಪಗಳಿಗೆ ಸಂಬಂಧವನ್ನು ಹೊಂದಿರುತ್ತವೆ, ಹೀಗಾಗಿ ಇದು ವಿಕೋಪ ಸೂಚಕ ಎನ್ನುವುದನ್ನು ನಿರಾಕರಿಸಲಾಗದು ಎಂಬ ವಾದವನ್ನೂ ಕೆಲವರು ಮುಂದಿಟ್ಟಿದ್ದಾರೆ.
A rare deep-sea fish, known as the ‘Pralaya fish‘ or Oarfish (Regalecus glesne), was recently caught in fishermen’s nets off the coast of Tamil Nadu. This silver-shining, ribbon-like fish, which can grow up to 30 feet long and has a red fin on its head, typically dwells at depths of 200 to 1,000 metres. Its appearance on the surface has sparked both curiosity and concern among local residents.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm