ಬ್ರೇಕಿಂಗ್ ನ್ಯೂಸ್
05-06-25 07:54 pm HK News Desk ದೇಶ - ವಿದೇಶ
ತಿರುವನಂತಪುರಂ, ಜೂನ್.5: ತಂದೆ ಮುಸ್ಲಿಂ, ತಾಯಿ ಹಿಂದುವಾಗಿದ್ದು ಮಗನೂ ಮುಸ್ಲಿಂ ಹೆಸರಿನಲ್ಲೇ ಬೆಳೆದಿದ್ದ. ಆದರೆ, ಮಗ ತನಗೆ ಇಸ್ಲಾಂ ಧರ್ಮ ಇಷ್ಟವಿಲ್ಲವೆಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಘಟನೆ ಕೇರಳದಲ್ಲಿ ನಡೆದಿದೆ. ದಾಖಲೆ ಪತ್ರಗಳಲ್ಲಿ ತನ್ನ ಧರ್ಮವನ್ನು ಬದಲಾಯಿಸುವುದಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಲ್ಲದೆ, ಸಂವಿಧಾನ ಪ್ರಕಾರ ತನಗೆ ಯಾವುದೇ ಧರ್ಮ ಅನುಸರಿಸುವ ಹಕ್ಕಿದೆ ಎನ್ನುವ ವಾದವನ್ನು ಮಂಡಿಸಿ ಅನುಮತಿಯನ್ನೂ ಪಡೆದುಕೊಂಡಿದ್ದಾನೆ.
ಯಾವುದೇ ಒತ್ತಡ, ಆಮಿಷ ಇಲ್ಲದೆ ಸ್ವಇಚ್ಛೆಯಿಂದ ತನ್ನ ಧರ್ಮವನ್ನು ಬದಲಾಯಿಸುವುದಾದರೆ ಸಂವಿಧಾನದ 25ನೇ ವಿಧಿಯ ಪ್ರಕಾರ ಅವಕಾಶ ಇದೆ. ಅದರಂತೆ, ವ್ಯಕ್ತಿಯ ಶಾಲಾ ದಾಖಲೆ ಪತ್ರಗಳಲ್ಲಿಯೂ ತನ್ನ ಧಾರ್ಮಿಕ ಮತಾಂತರವನ್ನು ದಾಖಲಿಸುವ ಹಕ್ಕಿದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಸಂವಿಧಾನದ ಕಲಂ 25ನೇ ವಿಧಿಯಡಿ ನಾಗರಿಕರು ತಮ್ಮ ಅಧಿಕೃತ ದಾಖಲೆಗಳಲ್ಲಿ ಬದಲಾವಣೆಗಳನ್ನು ದಾಖಲಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ನ್ಯಾಯಮೂರ್ತಿ ಡಿಕೆ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ ಏನು ಹೇಳಿದೆ?
ಯಾವುದೇ ಒತ್ತಡ, ವಂಚನೆ, ಅನಗತ್ಯ ಪ್ರಭಾವವಿಲ್ಲದೆ ಯಾವುದೇ ವ್ಯಕ್ತಿ ತನ್ನ ಧರ್ಮವನ್ನು ಬದಲಾಯಿಸಿದರೆ, ಅವರು ಭಾರತದ ಸಂವಿಧಾನದ 25ನೇ ವಿಧಿಯಡಿಯಲ್ಲಿ ರಕ್ಷಣೆ ಪಡೆಯುತ್ತಾರೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ದೇಶದಲ್ಲಿ ಪ್ರತಿ ವ್ಯಕ್ತಿಯೂ ತನ್ನ ಆಯ್ಕೆಯ ಧಾರ್ಮಿಕ ನಂಬಿಕೆಯನ್ನು ಅನುಸರಿಸುವ ಮೂಲಭೂತ ಹಕ್ಕನ್ನು ಹೊಂದಿದ್ದಾನೆ. ಹಾಗೆಯೇ ಇತರರ ಧಾರ್ಮಿಕ ಹಕ್ಕುಗಳು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸದ ರೀತಿಯಲ್ಲಿ ತನ್ನ ನಂಬಿಕೆ ಮತ್ತು ವಿಶ್ವಾಸಗಳನ್ನು ಪ್ರದರ್ಶಿಸುವ ಹಕ್ಕನ್ನೂ ಹೊಂದಿರುತ್ತಾನೆ ಎಂದು ಕೋರ್ಟ್ ಹೇಳಿದೆ.
ಮೂಲತಃ ಮೊಹಮ್ಮದ್ ರಿಯಾಜುದ್ದೀನ್ ಎಂದು ಹೆಸರಿನಲ್ಲಿದ್ದ ವ್ಯಕ್ತಿಯೊಬ್ಬರು ತನ್ನ ಹೆಸರನ್ನು ಸುಧೀನ್ ಕೃಷ್ಣ ಎಂದು ಬದಲಿಸಿ ಎಲ್ಲ ದಾಖಲೆ ಪತ್ರಗಳಲ್ಲಿ ಹೆಸರು ಮತ್ತು ಧರ್ಮವನ್ನು ಬದಲಿಸಿಕೊಳ್ಳಲು ಅವಕಾಶ ನೀಡಬೇಕೆಂದು ಕೇರಳ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ತನ್ನ ತಂದೆ ಮುಸ್ಲಿಂ ಮತ್ತು ತಾಯಿ ಹಿಂದೂ ಎಂದೂ ನ್ಯಾಯಾಲಯಕ್ಕೆ ತಿಳಿಸಿದ್ದರು. ತಾಯಿ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಹಿಂದೂ ಪದ್ಧತಿಗಳ ಪ್ರಕಾರ ತನ್ನನ್ನು ಬೆಳೆಸಿದ್ದರು. ಶಾಲೆಯಲ್ಲಿ ತನ್ನ ಹೆಸರನ್ನು ಮೊಹಮ್ಮದ್ ರಿಯಾಜುದ್ದೀನ್ ಸಿಎಸ್ ಎಂದು ನೋಂದಾಯಿಸಲಾಗಿತ್ತು. ಆದರೆ ತನಗೆ ಇಸ್ಲಾಂನಲ್ಲಿ ನಂಬಿಕೆ ಹೊಂದಿಲ್ಲ ಮತ್ತು ಹಿಂದೂ ಧರ್ಮವನ್ನು ಅನುಸರಿಸಲು ಬಯಸಿದ್ದೇನೆ ಎಂದು ಅರ್ಜಿಯಲ್ಲಿ ಹೇಳಿಕೊಂಡಿದ್ದರು.
ಆರ್ಯ ಸಮಾಜದ ಮೂಲಕ ತಾನು ಹಿಂದು ಧರ್ಮಕ್ಕೆ ಮತಾಂತರ ಆಗಿದ್ದು ಮತ್ತು ತನ್ನ ಹೆಸರನ್ನು ಸುಧೀನ್ ಕೃಷ್ಣ ಸಿಎಸ್ ಬದಲಿಸಿದ್ದಾಗಿ ಹೇಳಿದ್ದರು. ತನ್ನ ಎಸ್ಎಸ್ಎಲ್ಸಿ ದಾಖಲೆಗಳಲ್ಲಿ ಹೆಸರು ಮತ್ತು ಧರ್ಮ ಬದಲಿಸಲು ಬಯಸಿದ್ದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದರು. ತಾನು ಕಲಿತ ಶಾಲೆಯಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಿದಾಗ, ದಾಖಲೆಗಳಲ್ಲಿ ಜಾತಿ ಮತ್ತು ಧರ್ಮವನ್ನು ಬದಲಾಯಿಸಲು ಕೇರಳ ಶಿಕ್ಷಣ ಕಾಯ್ದೆಗಳಲ್ಲಿ ಅವಕಾಶವಿಲ್ಲ ಎಂದು ಶಾಲಾಡಳಿತ ಮಂಡಳಿ ವಾದಿಸಿತ್ತು. ಹೀಗಾಗಿ ಸುಧೀನ್ ಕೃಷ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕೇರಳ ಶಿಕ್ಷಣ ಕಾಯ್ದೆ 3(1) ಪ್ರಕಾರ ದಾಖಲೆ ಪತ್ರಗಳನ್ನು ಸರಿಪಡಿಸಲು ಅವಕಾಶ ಇದೆ, ಶಾಲಾಡಳಿತವು ವ್ಯಕ್ತಿಯ ಕೋರಿಕೆಯನ್ನು ನಿರಾಕರಿಸಿದ್ದು ತಪ್ಪೆಂದು ಕೋರ್ಟ್ ಹೇಳಿದೆ. ಸರ್ಕಾರದ ಪರವಾಗಿ ಹಾಜರಿದ್ದ ವಕೀಲರು ಶಿಕ್ಷಣ ಕಾಯ್ದೆ ನಿಯಮ 3(1) ಪ್ರಕಾರ ಜಾತಿ / ಧರ್ಮದ ಕಲಂ ಬದಲಿಸುವ ಅಧಿಕಾರ ಶಿಕ್ಷಣ ಇಲಾಖೆಯಲ್ಲಿ ಯಾರಿಗಿರುತ್ತದೆ ಎಂದು ಸ್ಪಷ್ಟವಾಗಿಲ್ಲ ಎಂದು ವಾದಿಸಿದರು. ಸರ್ಕಾರದ ಆದೇಶ ಪ್ರಕಾರ, ಶಾಲಾ ದಾಖಲೆಗಳಲ್ಲಿ ಜನನ ದಿನಾಂಕವನ್ನು ಬದಲಿಸುವ ಅಧಿಕಾರ ಪರೀಕ್ಷಾ ಪ್ರಾಧಿಕಾರದ ಆಯುಕ್ತರಿಗೆ ಮಾತ್ರ ಇದೆಯೆಂದು ವಾದ ಮಂಡಿಸಿದರು. ಆದರೆ ಕೋರ್ಟ್ ಈ ವಾದವನ್ನು ನಿರಾಕರಿಸಿದ್ದು, ಪರೀಕ್ಷಾ ಪ್ರಾಧಿಕಾರವು ಶಾಲಾ ದಾಖಲೆ ಪತ್ರಗಳಲ್ಲಿರುವ ಜನನ ದಿನಾಂಕ, ಜಾತಿ, ಧರ್ಮದ ಕಲಂ ನಮೂದಿಸಿರುವುದನ್ನು ಬದಲಿಸುವ ಅಧಿಕಾರ ಹೊಂದಿದೆ, ಅದಕ್ಕಾಗಿ ಬೇರೆ ಬೇರೆ ಪ್ರಾಧಿಕಾರ ಮಾಡಬೇಕಾಗಿಲ್ಲ ಎಂದು ಹೇಳಿದ್ದಲ್ಲದೆ, ಅರ್ಜಿದಾರನ ಕೋರಿಕೆಯಂತೆ ದಾಖಲೆ ಪತ್ರ ಸರಿಪಡಿಸಿ ನೀಡುವಂತೆ ಆದೇಶ ಮಾಡಿದೆ.
The Kerala High Court recently held that a person who changes their religion voluntarily has a fundamental right under Article 25 of the Constitution to have the change reflected and recorded in official school documents.
24-06-25 05:23 pm
Bangalore Correspondent
Lokayukta Raid, Karnataka: ಬೆಂಗಳೂರು, ಶಿವಮೊಗ್ಗ...
24-06-25 01:53 pm
Kodi Sri ; ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯ ವ...
22-06-25 07:52 pm
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
24-06-25 12:03 pm
HK News Desk
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೂಲಿನಿಂದ...
23-06-25 08:54 pm
Rapper Tommy Genesis, Controversy: ಹಿಂದು ದೇವತ...
23-06-25 04:37 pm
VP Jagdeep Dhankhar; ಜೂನ್ 25 ಸಂವಿಧಾನ ಹತ್ಯೆಗೈದ...
22-06-25 07:48 pm
24-06-25 01:36 pm
Mangalore Correspondent
Iran Qatar, War, Mangalore Flight: ಗಲ್ಫ್ ರಾಷ್...
24-06-25 11:19 am
Zakariya Jokatte, Mangalore: ಮಂಗಳೂರಿನಲ್ಲಿ ಸ್ಕ...
23-06-25 11:01 pm
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
Journalist Vijay Kotian, Brand Mangalore Awar...
23-06-25 09:48 pm
23-06-25 08:51 pm
HK News Desk
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am
Sandhya Pavithra Nagaraj Fraud; ಸೌಜನ್ಯಾ ಹೆಸರಿ...
21-06-25 08:58 pm
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm