ಬ್ರೇಕಿಂಗ್ ನ್ಯೂಸ್
27-06-25 01:44 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 27 : ಆಕ್ಸಿಯಂ -4 ಮಿಷನ್ ಭಾಗವಾಗಿ ಬಾಹ್ಯಾಕಾಶ ಯಾತ್ರೆ ಕೈಗೊಂಡಿರುವ ಭಾರತದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನ ಯಾತ್ರಿಗಳು ಯಶಸ್ವಿಯಾಗಿ ನಾಸಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ್ದಾರೆ. ರಾಕೇಶ್ ಶರ್ಮಾ ನಂತರ ಅಂತರಿಕ್ಷ ಯಾನ ಕೈಗೊಂಡ ಎರಡನೇ ಭಾರತೀಯ ಹಾಗೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಶುಭಾಂಶು ಶುಕ್ಲಾ ಪಾಲಾಗಿದೆ.
ಶುಕ್ಲಾ ಅವರೊಂದಿಗೆ ಅಮೆರಿಕದ ಪೆಗ್ಗಿ ವಿಟ್ಸನ್, ಹಂಗೇರಿಯ ಟರ್ಬೊ ಕಾಪು, ಪೋಲೆಂಡಿನ ಸ್ಲಾವೋಸ್ ಉಜ್ನಾನ್ ಸ್ಕಿ ವಿಶ್ನಿವುಫ್ ಸ್ಕಿ ಅವರನ್ನು ಹೊತ್ತು ಸಾಗಿದ ಫಾಲ್ಕನ್ 9 ಗಗನ ನೌಕೆ ಯಶಸ್ವಿಯಾಗಿ ಬಾಹ್ಯಾಕಾಶ ನಿಲ್ದಾಣ ತಲುಪಿದೆ. ಈ ನೌಕೆಯನ್ನು ಜೂನ್ 25ರಂದು ಅಮೆರಿಕದ ಫ್ಲೋರಿಡಾದಲ್ಲಿರುವ ಜಾನ್ ಎಫ್ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು. 28 ಗಂಟೆಗಳ ಪಯಣದ ಬಳಿಕ ಭಾರತೀಯ ಕಾಲಮಾನ ಗುರುವಾರ ಸಂಜೆ 4.30ಕ್ಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕಿಂಗ್ ಮಾಡಲಾಯಿತು.
ಬಾಹ್ಯಾಕಾಶದಲ್ಲಿ 14 ದಿನಗಳ ಕಾಲ ಉಳಿಯಲಿರುವ ಈ ಗಗನಯಾನಿಗಳು 60 ವಿಷಯಗಳಲ್ಲಿ ಪ್ರಯೋಗ ನಡೆಸಲಿದ್ದಾರೆ. ಭಾರತದ ಶುಭಾಂಶು ಶುಕ್ಲಾ ಅವರು ಇಸ್ರೋ ಸೂಚಿಸಿದ ಏಳು ವಿಷಯಗಳ ಕುರಿತಾಗಿ ಸಂಶೋಧನೆ ನಡೆಸಲಿದ್ದಾರೆ. ನೀರಿನ ಸೆಲೆ, ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆಗೆ ಹೇಗೆ ಹೊಂದಿಕೊಳ್ಳುವುದು, ಗಗನಯಾನ ಸಮಯದಲ್ಲಿ ಯಾತ್ರಿಗಳ ಜೈವಿಕ ತ್ಯಾಜ್ಯ ನಿರ್ವಹಣೆ ಕುರಿತು ಅಧ್ಯಯನ ನಡೆಸಲಿದ್ದಾರೆ. ಬಾಹ್ಯಾಕಾಶ ನಿಲ್ದಾಣ ತಲುಪಿದ ಬೆನ್ನಲ್ಲೇ ಭಾರತೀಯರನ್ನು ಉದ್ದೇಶಿಸಿ ಸಂದೇಶ ಕಳುಹಿಸಿರುವ ಶುಕ್ಲಾ, ನಮಸ್ಕಾರ, 140 ಕೋಟಿ ಭಾರತೀಯರ ಕನಸನ್ನು ಹೊತ್ತುಕೊಂಡು ಬಂದಿದ್ದೇನೆ. ನನ್ನ ಸಾಧನೆಗೆ ಕಾರಣವಾದ ಎಲ್ಲರಿಗೂ ಅಭಿನಂದನೆ ತಿಳಿಸುತ್ತೇನೆ. ಸೂಕ್ಷ್ಮ ಗುರುತ್ವಾಕರ್ಷಣೆ ಪರಿಸ್ಥಿತಿಯಲ್ಲಿ ಮಗುವಿನಂತೆ ತೇಲುತ್ತ ಬದುಕಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ
ಭೂಮಿಯಿಂದ 400 ಕಿಮೀ ಎತ್ತರದಲ್ಲಿ ಸ್ಥಾಪಿಸಲಾಗಿರುವ ಬಾಹ್ಯಾಕಾಶ ನಿಲ್ದಾಣ ತಲುಪಿದ ನಾಲ್ವರು ಗಗನಯಾನಿಗಳನ್ನು ಇದಕ್ಕೂ ಮೊದಲೇ ಅಲ್ಲಿ ಉಳಿದುಕೊಂಡಿರುವ 7 ಗಗನಯಾನಿಗಳು ಅಪ್ಪುಗೆಯ ಮೂಲಕ ಸ್ವಾಗತಿಸಿದ್ದು, ವೆಲ್ಕಮ್ ಡ್ರಿಂಕ್ ನೀಡಿ ಸ್ವಾಗತಿಸಿದರು. ಅಂದಹಾಗೆ, ಐಎಸ್ಎಸ್ ನಿಲ್ದಾಣ ತಲುಪಿದ ಮೊದಲ ಭಾರತೀಯ ಶುಭಾಂಶು ಶುಕ್ಲಾ ಆಗಿದ್ದು, ಇವರಿಗೆ ಸ್ಪೇಸ್ ಸ್ಟೇಶನ್ ನಲ್ಲಿ 634 ಪಿನ್ ನಂಬರ್ ನೀಡಲಾಗಿದೆ. ಇದಕ್ಕೂ ಮುನ್ನ ಭಾರತದ ವಾಯುಪಡೆ ಅಧಿಕಾರಿ ರಾಕೇಶ್ ಶರ್ಮಾ 1984ರಲ್ಲಿ ರಷ್ಯಾ ಕೈಗೊಂಡಿದ್ದ ಬಾಹ್ಯಾಕಾಶ ಯಾನದಲ್ಲಿ ಗಗನ ಯಾತ್ರೆ ಕೈಗೊಂಡು ಎಂಟು ದಿನಗಳ ಕಾಲ ಉಳಿದುಕೊಂಡಿದ್ದರು. ಶುಕ್ಲಾ ಎರಡನೇ ಬಾರಿಗೆ ಗಗನಯಾತ್ರೆ ಕೈಗೊಂಡಿದ್ದು, ಭಾರತದ ಇಸ್ರೋ 2027ರಲ್ಲಿ ಮಾನವ ಸಹಿತ ಗಗನಯಾತ್ರೆಗೆ ನಡೆಸುತ್ತಿರುವ ಸಿದ್ಧತೆಗೆ ದೊಡ್ಡ ಮಟ್ಟದಲ್ಲಿ ನೆರವಿಗೆ ಬರಲಿದೆ.
ಲಕ್ನೋ ಮೂಲ, ಬೆಂಗಳೂರಿನಲ್ಲಿ ಶಿಕ್ಷಣ
ಈ ಹಿಂದೆ ಮೇ 29ರಂದು ನಿಗದಿಯಾಗಿದ್ದ ಆಕ್ಸಿಯಂ -4 ಮಿಷನ್ ತಾಂತ್ರಿಕ ಸಮಸ್ಯೆಯಿಂದ ಹಲವು ಬಾರಿ ಮುಂದೂಡಲ್ಪಟ್ಟಿತ್ತು. ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿರುವ ಶುಭಾಂಶು ಅವರು ನಾಸಾದ ಈ ಯೋಜನೆ ಕಾರಣಕ್ಕೆ ರಷ್ಯಾದ ಗಗಾರಿನ್ ಕಾಸ್ಮೋನಾಟ್ ಟ್ರೇನಿಂಗ್ ಸೆಂಟರ್ ಮತ್ತು ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದರು. ಲಕ್ನೋ ಮೂಲದ ಶುಕ್ಲಾ ಅವರು 1965 ಅಕ್ಟೋಬರ್ 10ರಂದು ಜನಿಸಿದ್ದು, ರಾಕೇಶ್ ಶರ್ಮಾ ಅವರನ್ನು ತನ್ನ ಮಾಡೆಲ್ ಆಗಿ ಇರಿಸಿಕೊಂಡಿದ್ದರು. ಲಕ್ನೋ ಮಾಂಟೆಸ್ಸರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ನ್ಯಾಶನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ತರಬೇತಿ, ಬೆಂಗಳೂರಿನ ಐಐಎಸ್ಸಿಯಲ್ಲಿ ಏರೋ ಸ್ಪೇಸ್ ಇಂಜಿನಿಯರಿಂಗ್ ನಲ್ಲಿ ಎಂಟೆಕ್ ಪದವಿ ಗಳಿಸಿದ್ದರು. 2006ರಲ್ಲಿ ವಾಯುಪಡೆಗೆ ಸೇರಿದ್ದ ಶುಕ್ಲಾ ಗ್ರೂಪ್ ಕ್ಯಾಪ್ಟನ್ ಆಗಿ ಭಡ್ತಿ ಪಡೆದಿದ್ದರು. ಸುಕೋಯ್ 30 ಎಂಕೆಐ, ಮಿಗ್ 21, ಜಾಗ್ವಾರ್ ಏರ್ ಕ್ರಾಫ್ಟ್ ಗಳ ಹಾರಾಟ ಸೇರಿ ಒಟ್ಟು 2000 ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ.
ಭಾರತದ ಗಗನಯಾತ್ರೆಗೆ ಬಲ
2024ರ ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮಾನವ ಸಹಿತ ಗಗನಯಾತ್ರೆ ಯೋಜನೆಗೆ ಹಸಿರು ನಿಶಾನೆ ನೀಡಿದ್ದು, ಅದೇ ವೇಳೆಗೆ ಗಗನಯಾತ್ರೆ ಯೋಜನೆಗೆ ಆಯ್ಕೆಯಾಗಿದ್ದ ಗ್ರೂಪ್ ಕ್ಯಾಪ್ಟನ್ ಪಿ.ಬಾಲಕೃಷ್ಣನ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರಿಗೆ ಆಸ್ಟ್ರೋನಾಟ್ ವಿಂಗ್ಸ್ ಬ್ಯಾಡ್ಜ್ ನೀಡಿದ್ದರು. ಇವರಲ್ಲಿ ಶುಭಾಂಶು ಶುಕ್ಲಾ ನಾಸಾ ಕೈಗೊಂಡಿರುವ ಆಕ್ಸಿಯಂ -4 ಮಿಷನ್ ಮೂಲಕ ಗಗನಯಾನ ಕೈಗೊಂಡಿದ್ದು, ಭಾರತದ ಗಗನಯಾತ್ರೆಗೆ ಬಲ ತುಂಬಿದ್ದಾರೆ.
Twenty-eight hours after launching from Nasa's Kennedy Space Centre in Florida, Group Captain Shubhanshu Shukla created history, becoming the first Indian astronaut to reach the International Space Station (ISS) as the Axiom-4 (Ax-4) mission successfully docked with the orbiting laboratory on Thursday.
30-07-25 11:40 am
Bangalore Correspondent
Durgaamba Bus Accident, Shivamogga: ಮಂಗಳೂರಿನಿ...
30-07-25 10:33 am
Kerala Nurse Nimisha Priya: ಕೇರಳ ನರ್ಸ್ ನಿಮಿಷ...
29-07-25 01:31 pm
Nikhil Kumaraswamy: ಸಿಎಂ ಮತ್ತು ಡಿಸಿಎಂ ಮ್ಯೂಸಿಕ...
28-07-25 11:07 am
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
30-07-25 09:06 am
HK News Desk
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
30-07-25 03:00 pm
Mangalore Correspondent
Shirur Landslide, Malayalam Film: ಶಿರೂರು ಗುಡ್...
30-07-25 09:04 am
No Evidence, Dharmasthala Burial, SIT: ಹೆಣ ಹೂ...
29-07-25 09:56 pm
Dharmasthala case, SIT Begins Excavation, Upd...
29-07-25 02:20 pm
Dharmasthala Burial Case, 13 Suspected Grave...
28-07-25 10:41 pm
30-07-25 11:37 am
HK News Desk
ಮಕ್ಕಳಾಗಿಲ್ಲ ಅಂತ ಗಂಡನ ಮೇಲೆ ಸಿಟ್ಟು ; ಪ್ರಿಯಕರನಿಂ...
29-07-25 08:54 pm
Honor Killing in Chitradurga: ತಮ್ಮನಿಗೆ ಎಚ್ಐವ...
29-07-25 07:17 pm
ಕೌನ್ ಬನೇಗಾ ಕರೋಡ್ ಪತಿ ಸ್ಪರ್ಧೆಯಲ್ಲಿ 8 ಲಕ್ಷ ಗೆಲು...
28-07-25 11:20 pm
Mangalore Roshan Saldanha; Fraud Case, High c...
27-07-25 08:39 pm