ಬ್ರೇಕಿಂಗ್ ನ್ಯೂಸ್
05-08-25 10:58 pm HK News Desk ದೇಶ - ವಿದೇಶ
ನವದೆಹಲಿ, ಆ.5 : ಭಾರತ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ವಿರೋಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿ, ಅದೇ ನೆಪದಲ್ಲಿ ಸರಕು ಮೇಲೆ ಹೆಚ್ಚುವರಿ ಬಡ್ಡಿ ವಿಧಿಸುವ ವಿಚಾರಕ್ಕೆ ಭಾರತೀಯ ಸೇನೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ಭಾರತೀಯ ಸೇನೆ ಮಂಗಳವಾರ ಆಗಸ್ಟ್ 1971ರ ಪತ್ರಿಕೆಯ ಸುದ್ದಿ ಕ್ಲಿಪ್ ಒಂದನ್ನು ಪೋಸ್ಟ್ ಮಾಡಿದ್ದು, "ಇದು 1954 ರಿಂದ ಪಾಕಿಸ್ತಾನವನ್ನು ಶಸ್ತ್ರಸಜ್ಜಿತಗೊಳಿಸುವಲ್ಲಿ ಅಮೆರಿಕ ವಹಿಸಿದ ಪಾತ್ರವನ್ನು ಎತ್ತಿ ತೋರಿಸುತ್ತದೆ" ಎಂದು ಹೇಳಿದೆ.
ಈ ಸುದ್ದಿ ಕ್ಲಿಪ್ ನ್ನು ಪೂರ್ವ ಕಮಾಂಡ್ ಪೋಸ್ಟ್ ಮಾಡಲಾಗಿದೆ. "1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯದ ಯುಎಸ್ ಶಸ್ತ್ರಾಸ್ತ್ರಗಳನ್ನು ರವಾನಿಸಲಾಗಿದೆ" ಎಂದು ಭಾರತೀಯ ಸೇನೆ ಹೇಳಿದೆ. ಬಾಂಗ್ಲಾದೇಶದ ರಚನೆಗೆ ಕಾರಣವಾದ 1971 ರ ಇಂಡೋ-ಪಾಕ್ ಯುದ್ಧಕ್ಕೆ ಕೆಲವು ತಿಂಗಳು ಮೊದಲು ಪ್ರಕಟವಾದ ಸುದ್ದಿ, ಹಿಂದಿನ ಎರಡು ದಶಕಗಳಲ್ಲಿ ಪಾಕಿಸ್ತಾನವನ್ನು ಶಸ್ತ್ರಸಜ್ಜಿತಗೊಳಿಸುವಲ್ಲಿ ಅಮೆರಿಕ ವಹಿಸಿದ ಪಾತ್ರದ ಬಗ್ಗೆ ಮಾತನಾಡುತ್ತದೆ. 1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯದ ಯುಎಸ್ ಶಸ್ತ್ರಾಸ್ತ್ರಗಳನ್ನು ರವಾನಿಸಲಾಗಿದೆ" ಎಂದು ಶೀರ್ಷಿಕೆ ಹೇಳುತ್ತದೆ. ಆ ಅವಧಿಗೆ ಸರಬರಾಜು ಮಾಡಲಾದ ಶಸ್ತ್ರಾಸ್ತ್ರಗಳ ಅಂದಾಜು ಮೌಲ್ಯಮಾಪನದ ಬಗ್ಗೆ ರಾಜ್ಯಸಭೆಗೆ ತಿಳಿಸಿದ್ದ ಆಗಿನ ರಕ್ಷಣಾ ಉತ್ಪಾದನಾ ಸಚಿವ ವಿ.ಸಿ ಶುಕ್ಲಾ ಅವರನ್ನು ವರದಿ ಉಲ್ಲೇಖಿಸಿದೆ.
"ರಷ್ಯಾದಿಂದ ತೈಲ ಖರೀದಿಸುವ ಮೂಲಕ ಭಾರತವು ಅವರ ಯುದ್ಧ ದಾಹಕ್ಕೆ ಹಣಕಾಸು ಒದಗಿಸುವುದನ್ನು ಮುಂದುವರಿಸುವುದು ಒಪ್ಪುವುದಿಲ್ಲ" ಎಂದು ಅಮೆರಿಕ ಹೇಳಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನಕ್ಕೆ ಸಹಾಯ ಮಾಡಿದ್ದನ್ನು ಉಲ್ಲೇಖಿಸಿ ಅಮೆರಿಕಾಗೆ ತಿವಿದಿದೆ.
In a sharp response to U.S. criticism over India’s continued import of crude oil from Russia, the Indian Army has highlighted America's long-standing military support to Pakistan, posting a historical newspaper clipping from August 1971.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 10:58 pm
HK News Desk
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
05-08-25 10:34 pm
Mangalore Correspondent
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
05-08-25 10:39 pm
Bangalore Correspondent
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm