ಕೊರೊನಾದಿಂದ ವ್ಯಕ್ತಿ ಸಾವು - 51 ಸಾವಿರ ಕೊಡಿ ದೇಹ ನೋಡಿ ಎಂದ ಖಾಸಗಿ ಆಸ್ಪತ್ರೆ

10-08-20 03:08 pm       Headline Karnataka News Network   ದೇಶ - ವಿದೇಶ

ಕೊರೊನಾದಿಂದ ಸಾವನ್ನಪ್ಪಿದವರ ದೇಹವನ್ನು ನೋಡಲು ಖಾಸಗಿ ಆಸ್ಪತ್ರೆ 51 ಸಾವಿರ ರೂ. ನೀಡಲುವಂತೆ ಬೇಡಿಕೆ ಇಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕೋಲ್ಕತ್ತಾ , ಆಗಸ್ಟ್‌ 10: ಕೊರೊನಾದಿಂದ ಸಾವನ್ನಪ್ಪಿದವರ ದೇಹವನ್ನು ನೋಡಲು ಖಾಸಗಿ ಆಸ್ಪತ್ರೆ 51 ಸಾವಿರ ರೂ. ನೀಡಲುವಂತೆ ಬೇಡಿಕೆ ಇಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕೊರೊನಾ ಸೋಂಕಿನಿಂದಾಗಿ ನಮ್ಮ ತಂದೆ ಹರಿ ಗುಪ್ತಾ ಶನಿವಾರ ಮಧ್ಯರಾತ್ರಿ ಸಾವನ್ನಪ್ಪಿದ್ದು, ಈ ಕುರಿತು ಖಾಸಗಿ ಆಸ್ಪತ್ರೆಯವರು ಕುಟುಂಬಸ್ಥರಿಗೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೆ ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಸಾಗರ್ ಗುಪ್ತಾ ತಿಳಿಸಿದ್ದಾರೆ.

ಭಾನುವಾರ ಮಧ್ಯಾಹ್ನ ಆಸ್ಪತ್ರೆಯವರು ಕರೆ ಮಾಡಿ ಶನಿವಾರ ಮಧ್ಯರಾತ್ರಿ ನಮ್ಮ ತಮದೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ರಾತ್ರಿಯೇ ಏಕೆ ನಮಗೆ ಹೇಳಲಿಲ್ಲ ಎಂದು ಆಸ್ಪತ್ರೆಯವನ್ನು ಪ್ರಶ್ನಿಸಿದರೆ, ಸಂಪರ್ಕದ ಮಾಹಿತಿ ಇರಲಿಲ್ಲ ಎಂದು ಹೇಳಿದರು ಎಂದು ಸಾಗರ್ ಆರೋಪಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಆಸ್ಪತ್ರೆಗೆ ತೆರಳಿದ್ದು, ಆಗ ದೇಹವನ್ನು ಅಂತ್ಯಸಂಸ್ಕಾರಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ನಂತರ ಕುಟುಂಬಸ್ಥರು ಶಿಬ್‍ಪುರ್ ಸ್ಮಶಾಣಕ್ಕೆ ತೆರಳಿದ್ದು, ಈ ವೇಳೆ ಸಿಬ್ಬಂದಿ ದೇಹವನ್ನು ನೋಡಲು 51 ಸಾವಿರ ರೂ. ಪಾವತಿಸುವಂತೆ ತಿಳಿಸಿದರು. ನಂತರ ಕುಟುಂಬಸ್ಥರು ಮಾತನಾಡಿ ಈ ಹಣವನ್ನು 31 ಸಾವಿರಕ್ಕೆ ಇಳಿಸಿದ್ದಾರೆ. ಆದರೆ ಈ ಹಣವನ್ನು ಕುಟುಂಬಸ್ಥರಿಗೆ ಪಾವತಿಸಲು ಸಾಧ್ಯವಾಗಿಲ್ಲ. ಹೀಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಪೊಲೀಸ್ ಅಧಿಕಾರಿಯೊಬ್ಬರು ಸ್ಥಳಕ್ಕಾಗಮಿಸಿದ್ದು, ಈ ವೇಳೆ ಪೊಲೀಸರು ಸಹ ಮನವಿ ಮಾಡಿಕೊಂಡಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಇದಾವುದನ್ನೂ ಕೇಳದೆ ಮೇಲಾಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಈ ವೇಳೆ ಕುಟುಂಬಸ್ಥರು ಘಟನೆಯನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಇದನ್ನು ಕಂಡ ಆಸ್ಪತ್ರೆ ಸಿಬ್ಬಂದಿ ಕುಟುಂಬಸ್ಥರ ಮೊಬೈಲ್ ಕಸಿದುಕೊಂಡಿದ್ದಾರೆ.

ಅಂತಿಮವಾಗಿ ಕುಟುಂಬಸ್ಥರಿಗೆ ಮೃತ ದೇಹವನ್ನು ನೋಡಲು ಬಿಡದೆ ಅಂತ್ಯಸಂಸ್ಕಾರ ಮಾಡಿದ್ದಾರೆ. ಈಗಲೂ ಆಸ್ಪತ್ರೆ ಸಿಬ್ಬಂದಿ ಸುಳ್ಳು ಹೇಳಿದ್ದು, ಯಾವುದೇ ಕುಟುಂಬ ಸದಸ್ಯರು ಸಂಪರ್ಕಕ್ಕೆ ಬಾರದ ಕಾರಣ ನಾವೇ ಅಂತ್ಯಸಂಸ್ಕಾರ ಮಾಡಿದ್ದೇವೆ ಎಂದು ವಾದಿಸಿದ್ದಾರೆ. ಇದೀಗ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಲು ಯೋಚಿಸಿದ್ದಾರೆ.