ಬ್ರೇಕಿಂಗ್ ನ್ಯೂಸ್
28-12-20 05:02 pm Headline Karnataka News Network ದೇಶ - ವಿದೇಶ
ಜೈಪುರ, ಡಿ.28: ಮಹಿಳೆಯನ್ನು ಚುಡಾಯಿಸಿದ್ದಕ್ಕೆ ಏನು ಶಿಕ್ಷೆ ಅಂತೀರಾ.. ಪೊಲೀಸ್ ದೂರು ಕೊಟ್ಟರೆ ಒಂದೇ ರೀತಿಯ ಶಿಕ್ಷೆ. ಆದರೆ, ಕೆಲವು ಹಳ್ಳಿಗಳಲ್ಲಿ ಅಲ್ಲಿನ ಗ್ರಾಮಸ್ಥರೇ ಸೇರಿಕೊಂಡು ಶಿಕ್ಷೆ ಕೊಡುತ್ತಾರೆ. ರಾಜಸ್ಥಾನದ ಒಂದು ಹಳ್ಳಿಯಲ್ಲಿ ಮಹಿಳೆಯನ್ನು ಚುಡಾಯಿಸಿದ ವ್ಯಕ್ತಿಯನ್ನು ಹಿಡಿದು ಚಪ್ಪಲಿ ಹಾರ ಹಾಕಿ, ಬತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆ ನಡೆದಿದೆ.
ರಾಜಸ್ಥಾನದ ಜಾಲ್ವಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ತನ್ನನ್ನು ಬತ್ತಲೆ ಮೆರವಣಿಗೆ ಮಾಡಿದ ಬಗ್ಗೆ ರಾಕೇಶ್ ರಾಥೋರ್ ಪೊಲೀಸ್ ದೂರು ನೀಡಿದ್ದು, ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ. ಜೊತೆಗೆ ರಾಕೇಶ್ ರಾಥೋರ್ ನನ್ನೂ ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ಮನೆಗೆ ನುಗ್ಗಿ ಲೈಂಗಿಕ ಕಿರುಕುಳ ನೀಡಿದ ವಿಚಾರದಲ್ಲಿ ಆತನ ವಿರುದ್ಧ ಯುವತಿ ದೂರು ನೀಡಿದ್ದಳು.
ಆಗಿದ್ದಿಷ್ಟು. ಕಿರುಕುಳಕ್ಕೊಳಗಾದ ಯುವತಿ ನರೇಗಾ ಕೂಲಿ ಕೆಲಸಕ್ಕೆ ಹೋಗುವ ಕಾರ್ಮಿಕ ಮಹಿಳೆ. ರಾಕೇಶ್ ರಾಥೋರ್, ನರೇಗಾದ ಸುಪರ್ವೈಸರ್ ಆಗಿದ್ದ. ಮೊದಲೇ ಯುವತಿಯ ಜೊತೆಗೆ ಸಲುಗೆಯಿಂದಿದ್ದ ರಾಕೇಶ್, ಮೊನ್ನೆ ಆಕೆಯ ಮನೆಗೇ ತೆರಳಿದ್ದಾನೆ. ಈ ವೇಳೆ ಆಕೆಯ ಪತಿ ಬಂದಿದ್ದು, ನೋಡುತ್ತಲೇ ಕಿರುಚಾಡಿದ್ದಾನೆ. ಆಬಳಿಕ ಮರುದಿನ ಗೆಳೆಯರ ಜೊತೆ ಸೇರಿ ಆರೋಪಿ ರಾಕೇಶ್ ನನ್ನು ಹಿಡಿದು ಶರ್ಟ್, ಪ್ಯಾಂಟ್ ಬಿಚ್ಚಿಸಿ, ಚಪ್ಪಲಿ ಹಾರ ಹಾಕಿ ವಠಾರದಲ್ಲಿ ಮೆರವಣಿಗೆ ಮಾಡಿದ್ದಾರೆ. ಅಲ್ಲದೆ, ಮೊಬೈಲಿನಲ್ಲಿ ವಿಡಿಯೋ ಮಾಡಿ, ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಪ್ರಕರಣ ಸಂಬಂಧಿಸಿ, ಪ್ರಮುಖ ಆರೋಪಿ ಮಹಿಳೆಯ ಪತಿ ಪರಾರಿಯಾಗಿದ್ದಾನೆ.
A 28-year-old man was thrashed, garlanded with shoes and paraded naked in a village in Rajasthan's Jhalawar district for allegedly sexually harassing a woman, police said on Monday.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 11:50 am
HK News Desk
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
14-11-25 11:16 am
Mangalore Correspondent
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm