ಜ.20ರಂದು ಬಿಜೆಪಿಗೆ ನೂತ‌ನ ಅಧ್ಯಕ್ಷರ ಘೋಷಣೆ ; ಅತಿ ಕಿರಿಯ ಸಾರಥಿಯಾಗಿ ನಿತಿನ್ ನವೀನ್ ಆಯ್ಕೆ ಖಚಿತ, ನಾಮಪತ್ರ ಸಲ್ಲಿಕೆಗೆ ವೇಳಾಪಟ್ಟಿ ಪ್ರಕಟ

16-01-26 06:33 pm       HK News Desk   ದೇಶ - ವಿದೇಶ

ಬಿಜೆಪಿಗೆ ಆರು ವರ್ಷಗಳ ಬಳಿಕ ನೂತನ‌ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಇದಕ್ಕಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಗೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜನವರಿ 19 ರಂದು ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ. ಜ.20ರಂದು ಪಕ್ಷದ ಹೊಸ ಅಧ್ಯಕ್ಷರ ಹೆಸರು ಘೋಷಣೆಯಾಗಲಿದೆ.‌ 

ನವದೆಹಲಿ, ಜ.16 : ಬಿಜೆಪಿಗೆ ಆರು ವರ್ಷಗಳ ಬಳಿಕ ನೂತನ‌ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಇದಕ್ಕಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಗೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜನವರಿ 19 ರಂದು ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ. ಜ.20ರಂದು ಪಕ್ಷದ ಹೊಸ ಅಧ್ಯಕ್ಷರ ಹೆಸರು ಘೋಷಣೆಯಾಗಲಿದೆ.‌ 

ಬಿಜೆಪಿ ರಾಷ್ಟ್ರೀಯ ಚುನಾವಣಾಧಿಕಾರಿ ಕೆ. ಲಕ್ಷ್ಮಣ್ ಸಾಂಸ್ಥಿಕ ಚುನಾವಣಾ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಜನವರಿ 19ರಂದು ಮಧ್ಯಾಹ್ನ 2ರಿಂದ ಸಂಜೆ 4ರ ವರೆಗೆ ಪಕ್ಷದ ಅಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಬಹುದು. ಅದೇ ದಿನ ಸಂಜೆ 5ರಿಂದ 6ರ ವರೆಗೆ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆಯಲು ಅವಕಾಶ ಇದೆ. 

ಅದೇ ದಿನ ಸಂಜೆ 4 ರಿಂದ 5ರ ವರೆಗೆ ನಾಮಪತ್ರಗಳ ದಾಖಲೆಗಳ ಪರಿಶೀಲನೆ ನಡೆಯಲಿದೆ. ಜನವರಿ 20ರಂದು ಅಗತ್ಯವಿದ್ದರೆ ಮತದಾನ ನಡೆಯಲಿದೆ, ಅದೇ ದಿನ ಹೊಸ ಚುನಾಯಿತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಲಕ್ಷ್ಮಣ್ ತಿಳಿಸಿದ್ದಾರೆ. ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆಸಲಾಗುತ್ತದೆ. 

ಪಕ್ಷದ ಮೂಲಗಳ ಪ್ರಕಾರ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ನಿತಿನ್ ನಬಿನ್ ಅವರು ಪಕ್ಷದ ಹೊಸ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ನಾಮಪತ್ರ ಒಬ್ಬರಿಂದ ಮಾತ್ರ ಸಲ್ಲಿಕೆಯಾದರೆ ಚುನಾವಣೆ ನಡೆಯುವುದಿಲ್ಲ. ಬಹುತೇಕ ಬಿಹಾರ ಮೂಲದ ಐದು ಬಾರಿಯ ಶಾಸಕ ನಿತಿನ್ ನವಿನ್ ಮಾತ್ರ ನಾಮಪತ್ರ ಸಲ್ಲಿಸಲಿದ್ದು ಬಿಜೆಪಿಯ ಅತಿ ಕಿರಿಯ ಅಧ್ಯಕ್ಷರಾಗಿ ನೇಮಕಗೊಳ್ಳಲಿದ್ದಾರೆ.‌ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ಉನ್ನತ ನಾಯಕತ್ವವು ನಿತಿನ್ ಅವರ ಉಮೇದುವಾರಿಕೆಗೆ ಬೆಂಬಲ ಸೂಚಿಸಿದ್ದಾರೆ. 

ನಿತಿನ್ ನವೀನ್ ಆಯ್ಕೆ ಯಾಕೆ ? 

ರಾಜಕೀಯದಲ್ಲಿ ಯುವಕರನ್ನು ಸಕ್ರಿಯಗೊಳಿಸುವುದು ಮತ್ತು ಆಮೂಲಕ ಪಕ್ಷಕ್ಕೆ ಹೊಸ ಶಕ್ತಿ ನೀಡುವುದು ಬಿಜೆಪಿ ಯೋಜನೆ. ಇದಲ್ಲದೆ, ಮೋದಿ - ಅಮಿತ್ ಷಾ ಬಳಿಕ ಬಿಜೆಪಿಯಲ್ಲಿ ಯಾರು ಎಂಬ ಪ್ರಶ್ನೆಗೆ ಕೆಲವು ಆಯ್ಕೆಗಳು ಮುನ್ನೆಲೆಗೆ ಬಂದಿರುವಾಗಲೇ ಗುಜರಾತ್ ಜೋಡಿ, ಬಿಹಾರದ ಯುವ ನಾಯಕನನ್ನು ಮುನ್ನೆಲೆಗೆ ತಂದಿದೆ. ರಾಷ್ಟ್ರೀಯ ಮಟ್ಟದಲ್ಲಿ ಹೆಸರಿಲ್ಲದ ವ್ಯಕ್ತಿಯನ್ನು ಮುಂಚೂಣಿಗೆ ತಂದಿರುವುದು ಪಕ್ಷದ ಒಳಗಡೆ ಹುಬ್ಬೇರಿಸಿದರೂ, ಮೇಲ್ನೋಟಕ್ಕೆ ಯುವಕರನ್ನು ಉತ್ತೇಜಿಸಲು ಈ ತಂತ್ರಗಾರಿಕೆ ಎಂಬ ಅಂಶವನ್ನು ತೇಲಿ ಬಿಡಲಾಗಿದೆ.‌ ಇದಕ್ಕು ಮುನ್ನ ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ ಜೋಷಿ‌ ಅಥವಾ ಶಿವರಾಜ್ ಸಿಂಗ್ ಚೌಹಾಣ್ ಹೆಸರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವ ಬಗ್ಗೆ ಮಾತುಗಳಿದ್ದವು. ‌ಆದರೆ ಈ ರೀತಿ ಚಾಲ್ತಿಯಲ್ಲಿರುವ ಹೆಸರನ್ನು‌ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿದರೆ ಮೋದಿ ಬಳಿಕ ಯಾರು ಎಂಬ ಪ್ರಶ್ನೆಗೆ ಹಲವರ ಹೆಸರು ಕೇಳಿಬರುವ ಸಾಧ್ಯತೆಗಳಿದ್ದವು. ನಿತಿನ್ ನವಿನ್ ಹೊಸ ಮುಖ ಆಗಿರುವುದು ಮತ್ತು ಇವರನ್ನು ಆಯ್ಕೆ ಮಾಡಿದರೆ ಪೂರ್ತಿಯಾಗಿ ಪಕ್ಷದ ಹಿಡಿತ ಮೋದಿ-ಷಾ ಜೋಡಿಯ ಕೈಯಲ್ಲೇ ಉಳಿಸಿಕೊಂಡಂತೆ ಆಗುತ್ತದೆ ಎಂಬ ಲೆಕ್ಕಾಚಾರವೂ ಅಡಗಿದೆ.‌

The BJP has released the schedule for electing its new national president after six years, with nominations on January 19 and the announcement on January 20. Party sources indicate that Bihar MLA Nitin Navin is likely to be elected unopposed, making him the youngest BJP national president with backing from the top leadership.