ಬ್ರೇಕಿಂಗ್ ನ್ಯೂಸ್
20-01-26 07:04 pm HK News Desk ದೇಶ - ವಿದೇಶ
ಕಾಸರಗೋಡು, ಜ.20: ಕುಂಬಳೆಯಲ್ಲಿ ಟೋಲ್ ವಸೂಲಿ ಆರಂಭಿಸಿರುವುದರಿಂದ ಕಾಸರಗೋಡು - ಮಂಗಳೂರು ಮಧ್ಯೆ ಸಂಚರಿಸುವ ಕರ್ನಾಟಕ ಕೆಎಸ್ಸಾರ್ಟಿಸಿ ಬಸ್ ಗಳಲ್ಲಿ ಟಿಕೆಟ್ ದರ ಏರಿಸಲಾಗಿದೆ. ಟೋಲ್ ದರದ ನೆಪದಲ್ಲಿ ಕರ್ನಾಟಕ ಕೆಎಸ್ಸಾರ್ಟಿಸಿ ಜ.20ರಿಂದಲೇ ಟಿಕೆಟ್ ದರವನ್ನು ಏರಿಸಿದೆ. ಕೇರಳ ಕೆಎಸ್ಸಾರ್ಟಿಸಿ ಬಸ್ ಗಳಲ್ಲಿ ಟಿಕೆಟ್ ದರ ಹೆಚ್ಚಳಗೊಂಡಿಲ್ಲ.
ಕುಂಬಳೆಯಿಂದ ಮಂಗಳೂರಿಗೆ 67 ರೂ. ಇದ್ದ ಟಿಕೆಟ್ ದರವನ್ನು 75 ರೂ.ಗೆ ಏರಿಸಲಾಗಿದೆ. ರಾಜಹಂಸ ಬಸ್ಸಿನ ದರವನ್ನು 10 ರೂ. ಏರಿಸಿ 90 ರೂ. ಮಾಡಲಾಗಿದೆ. ಕರ್ನಾಟಕ ಸಾರಿಗೆ ಬಸ್ ಗಳು ಮಾತ್ರ ಟಿಕೆಟ್ ದರ ಹೆಚ್ಚಿಸಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾಸರಗೋಡು- ಮಂಗಳೂರು ನಡುವೆ, ಹೊಸ ಹೆದ್ದಾರಿ ರಚನೆಯಾಗಿದ್ದರೂ ಸಾರಿಗೆ ಬಸ್ ಗಳು ಮಾತ್ರ ಸರ್ವೀಸ್ ರೂಟಿನಲ್ಲೇ ಸಂಚರಿಸುತ್ತವೆ. ಎಲ್ಲ ಕಡೆ ಸ್ಟಾಪ್ ನೀಡುವುದರಿಂದ ಸಾರಿಗೆ ಬಸ್ಗಳು ಎಲ್ಲಿಯೂ ಹೆದ್ದಾರಿ ಬಳಸುತ್ತಿಲ್ಲ. ಕೇವಲ ಕುಂಬಳೆ ಟೋಲ್ ಗೇಟಿನಲ್ಲಷ್ಟೇ ಹೆದ್ದಾರಿ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟೋಲ್ ವಿನಾಯಿತಿ ನೀಡಬೇಕೆಂದು ಸಾರಿಗೆ ಬಸ್ಸುಗಳ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ವಿನಾಯಿತಿ ನೀಡದಿದ್ದರೆ ಹೆಚ್ಚುವರಿ ಹೊರೆಯನ್ನು ನಾವು ಟಿಕೆಟ್ ಮೂಲಕ ಪ್ರಯಾಣಿಕರಿಗೆ ಹೇರಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಕರ್ನಾಟಕ ಕೆಎಸ್ಸಾರ್ಟಿಸಿ ಉಲ್ಲೇಖಿಸಿದೆ.
ಕರ್ನಾಟಕ ಕೆಎಸ್ಸಾರ್ಟಿಸಿಯಿಂದ ಸುಮಾರು 35 ಬಸ್ ಗಳು ಕಾಸರಗೋಡು - ಮಂಗಳೂರು ನಡುವೆ ಸಂಚರಿಸುತ್ತಿವೆ. ಇದಕ್ಕೆ ದಿನವೊಂದಕ್ಕೆ 48 ಸಾವಿರ ರೂ. ಟೋಲ್ ಪಾವತಿಗೆ ಬೇಕಾಗುತ್ತದೆ. ಟೋಲ್ ಶುಲ್ಕವನ್ನು ಹೆದ್ದಾರಿ ಬಳಸದಿದ್ದರೂ ಪಾವತಿಸಬೇಕಾದರೆ ಟಿಕೆಟ್ ದರ ಏರಿಕೆ ಅನಿವಾರ್ಯ ಎಂದು ಸಾರಿಗೆ ಇಲಾಖೆಯ ಮಂಗಳೂರು ಡಿಪೋ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಹೆದ್ದಾರಿಯಲ್ಲಿ ಕೇರಳ ಕೆಎಸ್ಸಾರ್ಟಿಸಿ ಬಸ್ ಗಳು ಚಲಿಸುತ್ತಿದ್ದರೂ ಟೋಲ್ ನೆಪದಲ್ಲಿ ಟಿಕೆಟ್ ದರ ಹೆಚ್ಚಿಸಿಲ್ಲ. ಟಿಕೆಟ್ ದರ ಹೆಚ್ಚಳವಾಗಬೇಕಿದ್ದರೆ ಸಾರಿಗೆ ಸಚಿವರು ಇಲಾಖೆ ಸಭೆ ನಡೆಸಿ ನಿರ್ಣಯಿಸಿ ಬಳಿಕ ಆದೇಶವಾಗಬೇಕು ಎಂದು ಕಾಸರಗೋಡು ಡಿಪೋ ಅಧಿಕಾರಿಗಳು ತಿಳಿಸಿದ್ದಾರೆ.
The Karnataka State Road Transport Corporation (KSRTC) has increased ticket fares on buses operating between Kasaragod and Mangaluru with effect from January 20, citing the start of toll collection at Kumbla. The ordinary bus fare has been raised from ₹67 to ₹75, while Rajahamsa service fares have gone up by ₹10 to ₹90. The hike has triggered strong backlash from passengers, especially as Kerala KSRTC buses operating on the same route have not increased fares. KSRTC officials said nearly 35 buses ply daily on this route, requiring about ₹48,000 per day towards toll payments, making the fare hike unavoidable unless toll exemption is granted.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
27-07-26 01:09 pm
HK News Staffer
ಸಮಾಜ ಸೇವೆಯ ಹೆಸರಲ್ಲಿ ಡ್ರಗ್ಸ್ ದಂಧೆ ; ಜಲೀಲ್ ಬಾಬಾ...
27-07-26 11:47 am
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm