ಬ್ರೇಕಿಂಗ್ ನ್ಯೂಸ್
22-01-26 01:16 pm HK News Desk ದೇಶ - ವಿದೇಶ
ವಾಷಿಂಗ್ಟನ್, ಜ.22 : ಗ್ರೀನ್ ಲ್ಯಾಂಡ್ ವಶಕ್ಕೆ ಪಡೆಯುವ ವಿಚಾರದಲ್ಲಿ ಯುರೋಪಿನ ಎಂಟು ಮಿತ್ರ ದೇಶಗಳ ವಿರುದ್ಧವೇ ಸುಂಕ ಹೇರುವುದಾಗಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಲ್ಟಾ ಹೊಡೆದಿದ್ದಾರೆ. ಗ್ರೀನ್‌ಲ್ಯಾಂಡ್ ಮೇಲಿನ ಅಮೆರಿಕ ನಿಯಂತ್ರಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಯುರೋಪಿನ ಎಂಟು ರಾಷ್ಟ್ರಗಳ ಮೇಲೆ ಹೆಚ್ಚುವರಿ ಹತ್ತು ಶೇಕಡಾ ತೆರಿಗೆ ವಿಧಿಸುವುದಾಗಿ ಬೆದರಿಕೆ ಹಾಕಿದ್ದ ಟ್ರಂಪ್, ಇದೀಗ ತಮ್ಮ ನಿರ್ಧಾರವನ್ನು ಹಿಂದಕ್ಕೆ ಪಡೆದಿದ್ದಾರೆ.
ಈ ಮೂಲಕ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ನಡುವೆ ಉಂಟಾಗಿದ್ದ ದೊಡ್ಡ ಮಟ್ಟದ ವ್ಯಾಪಾರ ಸಮರಕ್ಕೆ ತಾತ್ಕಾಲಿಕ ತೆರೆಬಿದ್ದಿದೆ. ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಭೆಯಲ್ಲಿ ಟ್ರಂಪ್ ಯುರೋಪ್ ರಾಷ್ಟ್ರಗಳ ಮೇಲೆ ತೀವ್ರ ಕಿಡಿಕಾರಿದರೂ, ಆಬಳಿಕ ದಿಢೀರ್ ತಣ್ಣಗಾಗಿದ್ದಾರೆ.
ಗ್ರೀನ್‌ಲ್ಯಾಡ್ ವಿಷಯದಲ್ಲಿ ಮತ್ತು ನ್ಯಾಟೋ ಮಿತ್ರರಾಷ್ಟ್ರಗಳ ನಡುವಿನ ಸಂಬಂಧವನ್ನು ಕಾಪಾಡಲು ಎರಡೂ ಕಡೆಯವರು ಹೊಸ "ಫ್ರೇಮ್‌ವರ್ಕ್" ಅಡಿಯಲ್ಲಿ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಯುರೋಪಿಯನ್ ಮಿತ್ರರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿ, ಸುಂಕದ ನಿರ್ಧಾರವನ್ನು ಸದ್ಯಕ್ಕೆ ಜಾರಿಗೆ ತರದಂತೆ ಟ್ರಂಪ್ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಆರ್ಕ್ಟಿಕ್ ಪ್ರದೇಶದ ಭದ್ರತೆ ಕುರಿತಾಗಿ ನ್ಯಾಟೋ ಜೊತೆ ಮುಂದಿನ ಚರ್ಚೆಗಳು ನಡೆಯಲಿವೆ ಎಂದಿದ್ದಾರೆ. ಇದೇ ವೇಳೆ ಗ್ರೀನ್‌ಲ್ಯಾಂಡ್ ಸಂಬಂಧಿಸಿ ‘ಗೋಲ್ಡನ್ ಡೋಮ್’ ಕ್ಷಿಪಣಿ ರಕ್ಷಣಾ ಯೋಜನೆಯ ಕುರಿತು ಮಾತುಕತೆ ನಡೆಯುತ್ತಿದೆ ಎಂದೂ ತಿಳಿಸಿದ್ದಾರೆ.
ಇದಕ್ಕು ಮುನ್ನ ದಾವೋಸ್ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಟ್ರಂಪ್, ಗ್ರೀನ್‌ಲ್ಯಾಂಡನ್ನು ವಶಕ್ಕೆ ತೆಗೆದುಕೊಳ್ಳಲು ಬಲಪ್ರಯೋಗ ನಡೆಸುವುದಿಲ್ಲ. ಆದರೆ ಖನಿಜದಿಂದ ಸಮೃದ್ಧವಾದ ಗ್ರೀನ್‌ಲ್ಯಾಂಡ್ ದ್ವೀಪವನ್ನು ಅಮೆರಿಕ ಮಾತ್ರ ರಕ್ಷಿಸಬಲ್ಲದು. ಅಮೆರಿಕ ಬೆಳೆಯುತ್ತಿದೆ. ಆದರೆ, ಯುರೋಪ್ ಸರಿಯಾದ ದಿಕ್ಕಿಗೆ ಸಾಗುತ್ತಿಲ್ಲ ಎಂದು ಹೇಳಿದ್ದಾರೆ.
US President Donald Trump has withdrawn his decision to impose additional tariffs on eight European countries over their opposition to American control of Greenland. The sudden U-turn came after discussions on the sidelines of the World Economic Forum in Davos, easing fears of a major trade conflict between the US and the European Union.
21-01-26 01:31 pm
HK News Desk
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
ಬಾರ್ ಲೈಸನ್ಸ್ ನೀಡಲು 1.5 ಕೋಟಿ ಲಂಚ ; 25 ಲಕ್ಷ ರೂ....
20-01-26 02:15 pm
ರಾಸಲೀಲೆಯ ಬಿರುಗಾಳಿ ಬೆನ್ನಲ್ಲೇ ರಾಮಚಂದ್ರ ರಾವ್ ತಲ...
20-01-26 12:20 pm
ಮೈಸೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಸುಗಮ ಬಸ್...
20-01-26 12:18 pm
22-01-26 01:52 pm
HK News Desk
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೇರಳ, ಕರ್ನಾಟಕ, ತಮ...
21-01-26 11:10 am
KSRTC Hikes Kasaragod Mangaluru: ಕುಂಬಳೆ ಟೋಲ್...
20-01-26 07:04 pm
22-01-26 02:55 pm
Mangalore Correspondent
ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮ...
21-01-26 10:55 pm
ಸ್ವಚ್ಛತೆ, ತ್ಯಾಜ್ಯಮುಕ್ತ ಗ್ರಾಮ, ಪರಿಸರ ಸ್ನೇಹಿ ಆಡ...
21-01-26 06:18 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸಿಕ್ಕಿದ ಏಳು ಅಸ್ಥಿಪಂಜರಗ...
21-01-26 11:53 am
158 ವರ್ಷಗಳ ಇತಿಹಾಸವುಳ್ಳ ದೇಶದ ಮೊದಲ ಮಂಗಳೂರು ಟೈಲ್...
20-01-26 10:59 pm
22-01-26 02:40 pm
Bangalore Correspondent
ಜೂಜಾಡಿ ಸಾಲ ; ಹಣದಾಸೆಗೆ ಇಂಜೆಕ್ಷನ್ ನೀಡಿ ಸ್ವಂತ...
21-01-26 09:35 pm
Actor Kicha Sudeep, Fraud: ನಟ ಕಿಚ್ಚ ಸುದೀಪ್, ಮ...
20-01-26 07:51 pm
ಸಿಎಂ ಕ್ಲಾಸ್ ಬೆನ್ನಲ್ಲೇ ಅಲರ್ಟ್ ಆದ ಬೆಂಗಳೂರು ಖಾಕಿ...
20-01-26 05:01 pm
100ಕ್ಕೂ ಹೆಚ್ಚು ಜನರನ್ನು ಹನಿಟ್ರ್ಯಾಪ್ ಬಲೆಗೆ ಬೀಳ...
19-01-26 10:20 pm