ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವಜೋಡಿ ; ಅದು 'ನನ್ನಿಷ್ಟ' ಎಂದ ಯುವತಿಗೆ ನೆಟ್ಟಿಗರ ತರಾಟೆ 

22-01-26 01:52 pm       HK News Desk   ದೇಶ - ವಿದೇಶ

ಯುವ ಜೋಡಿಯೊಂದು ಎರಡು ಗಂಟೆಗಳ ಕಾಲ ರೈಲಿನ ಶೌಚಾಲಯದೊಳಗೆ ಲಾಕ್ ಮಾಡಿಕೊಂಡ ಘಟನೆ ನಡೆದಿದ್ದು ಇದರ ವಿಡಿಯೋ ವೈರಲ್ ಆಗಿದ್ದು ಈ ವೇಳೆ ಯುವತಿ ಆಡಿರುವ ಮಾತು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. 

ನವದೆಹಲಿ, ಜ.22 :  ಯುವ ಜೋಡಿಯೊಂದು ಎರಡು ಗಂಟೆಗಳ ಕಾಲ ರೈಲಿನ ಶೌಚಾಲಯದೊಳಗೆ ಲಾಕ್ ಮಾಡಿಕೊಂಡ ಘಟನೆ ನಡೆದಿದ್ದು ಇದರ ವಿಡಿಯೋ ವೈರಲ್ ಆಗಿದ್ದು ಈ ವೇಳೆ ಯುವತಿ ಆಡಿರುವ ಮಾತು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. 

ಶೌಚಾಲಯದಿಂದ ಹೊರಬಂದ ಯುವತಿಯನ್ನು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡಿದ್ದು ಆಕೆ ಮಾತ್ರ ಅದು ನನ್ನ ಇಷ್ಟ ಎಂದು ದರ್ಪ ತೋರಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ರೈಲಿನ ಶೌಚಾಲಯವನ್ನು ಯುವ ಜೋಡಿ ಒಳಗಿನಿಂದ ಲಾಕ್ ಮಾಡಿಕೊಂಡಿದ್ದರಿಂದ ಇತರ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಅಂತಿಮವಾಗಿ ರೈಲ್ವೆ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. 

ಕೊನೆಗೆ ಬಾಗಿಲು ತೆರೆದಾಗ, ಯುವಕ ಹೊರಗೆ ಬಂದು ಯುವತಿಗೆ ಮುಟ್ಟಾಗುತ್ತಿದ್ದು ನೋವಿನಿಂದ ಬಳಲುತ್ತಿದ್ದಳು ಎಂದು ಸಬೂಬು ಹೇಳಿದ್ದಾನೆ. ಯವತಿ ಮಾತ್ರ ಏನೂ ತಲೆಕೆಡಿಸಿಕೊಳ್ಳದೆ, ನಾನು ಯಾರನ್ನು ಒಳಗೆ ಕರೆದುಕೊಂಡು ಹೋಗಬೇಕೋ ಅದು ನನ್ನ ಆಯ್ಕೆ ಎಂದು ಜೋರಾಗಿ ಹೇಳಿದ್ದಾಳೆ. ಈಕೆ ಮಾತನಾಡಿದ ವಿಡಿಯೋ ವೈರಲ್ ಆಗಿದ್ದು ಜನರ ವಿರೋಧಕ್ಕೆ ಕಾರಣವಾಗಿದೆ. ‌

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಕತ್ ವೈರಲ್ ಆಗಿದ್ದು, ಸಾಕಷ್ಟು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಓಯೋ ರೂಮ್ ಅಲ್ಲ, ಸಾರ್ವಜನಿಕರ ಶೌಚಾಲಯ ಎಂದು ಜೋಡಿಗೆ ತರಾಟೆ ತೆಗೆದುಕೊಂಡಿದ್ದಾರೆ.

A video of a young couple locking themselves inside a train toilet for nearly two hours has gone viral, triggering widespread anger online. Passengers were inconvenienced and confronted the couple after informing railway staff.