ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ ; ಡೊನಾಲ್ಡ್ ಟ್ರಂಪ್ ಆಹ್ವಾನ ಒಪ್ಪಿದ ಮುಸ್ಲಿಂ ರಾಷ್ಟ್ರಗಳು, ಜರ್ಮನಿ, ಚೀನಾ, ಭಾರತ, ರಷ್ಯಾದಿಂದ ನಿರಾಕರಣೆ 

22-01-26 10:16 pm       HK News Desk   ದೇಶ - ವಿದೇಶ

ಗಾಜಾದಲ್ಲಿ ಶಾಶ್ವತ ಶಾಂತಿ ಸ್ಥಾಪನೆ ಹಾಗೂ ಸಂಭಾವ್ಯ ಜಾಗತಿಕ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'ಶಾಂತಿ ಮಂಡಳಿ'ಯನ್ನು ರಚಿಸಿದ್ದು, ಮಂಡಳಿಗೆ ಸಹಿ ಹಾಕುವ ಕಾರ್ಯಕ್ರಮದಿಂದ ಯುರೋಪ್ ರಾಷ್ಟ್ರಗಳು ದೂರವುಳಿದಿವೆ. ಇದಲ್ಲದೆ, ಟ್ರಂಪ್ ಆಹ್ವಾನ ಹೊರತಾಗಿಯೂ ಭಾರತವೂ ಸಹಿ ಹಾಕದೆ ಮೌನ ವ್ರತ ಪಾಲಿಸಿದೆ.‌

ನವದೆಹಲಿ, ಜ.22 : ಗಾಜಾದಲ್ಲಿ ಶಾಶ್ವತ ಶಾಂತಿ ಸ್ಥಾಪನೆ ಹಾಗೂ ಸಂಭಾವ್ಯ ಜಾಗತಿಕ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'ಶಾಂತಿ ಮಂಡಳಿ'ಯನ್ನು ರಚಿಸಿದ್ದು, ಮಂಡಳಿಗೆ ಸಹಿ ಹಾಕುವ ಕಾರ್ಯಕ್ರಮದಿಂದ ಯುರೋಪ್ ರಾಷ್ಟ್ರಗಳು ದೂರವುಳಿದಿವೆ. ಇದಲ್ಲದೆ, ಟ್ರಂಪ್ ಆಹ್ವಾನ ಹೊರತಾಗಿಯೂ ಭಾರತವೂ ಸಹಿ ಹಾಕದೆ ಮೌನ ವ್ರತ ಪಾಲಿಸಿದೆ.‌

ಆದರೆ ಪಾಕಿಸ್ತಾನ ಶಾಂತಿ ಮಂಡಳಿಯ ನಿಯಮಗಳಿಗೆ ಸಹಿ ಹಾಕಿದೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದದ ಎರಡನೇ ಹಂತದಲ್ಲಿ ಶಾಂತಿ ಮಂಡಳಿ ಘೋಷಿಸಿದ್ದು ಡೊನಾಲ್ಡ್ ಟ್ರಂಪ್ ಅವರ ವಿಶ್ವಾಸರಹಿತ ನಡೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಜಾಗತಿಕ ನಾಯಕರು ಈ ಮಂಡಳಿಯಿಂದ ದೂರ ಉಳಿದಿದ್ದಾರೆ. ಫ್ರಾನ್ಸ್, ಯುನೈಟೆಡ್ ಕಿಂಗ್‌ಡಮ್, ಚೀನಾ, ಜರ್ಮನಿ ಮತ್ತಿತರ ಯುರೋಪ್ ಭಾಗದ ಪ್ರಮುಖ ರಾಷ್ಟ್ರಗಳು ಟ್ರಂಪ್ ಅವರ ಶಾಂತಿ ಮಂಡಳಿಯನ್ನು ಬಹಿಷ್ಕರಿಸಿವೆ. 

ದಾವೋಸ್ ವಾರ್ಷಿಕ ವಿಶ್ವ ಆರ್ಥಿಕ ವೇದಿಕೆಯಲ್ಲಿ ಟ್ರಂಪ್ ಸಮಾರಂಭವನ್ನು ಆಯೋಜಿಸಿದ್ದರು. ಸಮಾರಂಭದಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಸೇರಿದಂತೆ ಯುಎಇ, ಸೌದಿ ಅರೇಬಿಯಾ, ಟರ್ಕಿ, ಅಜರ್ ಬೈಜಾನ್ ಸೇರಿದಂತೆ ಹಲವು ದೇಶಗಳ ನಾಯಕರು ಪಾಲ್ಗೊಂಡಿದ್ದರು. ‌ಜರ್ಮನಿ, ರಷ್ಯಾ, ಚೀನಾ, ಭಾರತ ಟ್ರಂಪ್ ನಿರ್ದೇಶಿತ ಶಾಂತಿ ಮಂಡಳಿ ಸೇರುವ ವಿಚಾರದಲ್ಲಿ ನಿರ್ಧಾರ ತಿಳಿಸಿಲ್ಲ. ಇದು ಸೂಕ್ಷ್ಮ ವಿಷಯಗಳನ್ನು ಒಳಗೊಂಡಿರುವುದರಿಂದ ಭಾರತ ವಿವಿಧ ಅಂಶಗಳನ್ನು ಪರಿಗಣಿಸುತ್ತಿದೆ ಎಂದು ತಿಳಿದುಬಂದಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಗಡಿಯೊಳಗೆ ಶಾಂತಿ ಮತ್ತು ಭದ್ರತೆಗಾಗಿ ಪ್ಯಾಲೆಸ್ತೀನ್ ಸಮಸ್ಯೆಗೆ 'ದ್ವಿ-ರಾಜ್ಯ ಪರಿಹಾರ'ಕ್ಕಾಗಿ ಭಾರತ ಒತ್ತಾಯಿಸುತ್ತಿದೆ. 

ಅರ್ಜೆಂಟೀನಾ ಅರ್ಮೇನಿಯಾ, ಅಜೆರ್ಬೈಜಾನ್, ಬಹ್ರೇನ್, ಬೆಲಾರಸ್, ಈಜಿಪ್ಟ್, ಹಂಗೇರಿ, ಕಝಾಕಿಸ್ತಾನ್, ಮೊರಾಕೊ, ಪಾಕಿಸ್ತಾನ, ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ ಮತ್ತು ವಿಯೆಟ್ನಾಂ ಶಾಂತಿ ಮಂಡಳಿಗೆ ಒಪ್ಪಿಗೆ ಸೂಚಿಸಿದ್ದರೆ, ಜರ್ಮನಿ, ಇಟಲಿ, ಪರಾಗ್ವೆ, ರಷ್ಯಾ, ಸ್ಲೊವೇನಿಯಾ, ತುರ್ಕಿಯೆ ಮತ್ತು ಉಕ್ರೇನ್ ಸೇರಿದಂತೆ ಹಲವಾರು ದೇಶಗಳು ಆಹ್ವಾನ ತಿರಸ್ಕರಿಸಿವೆ.

US President Donald Trump has announced a 35-nation “Peace Council” aimed at establishing lasting peace in Gaza. While several Muslim-majority countries, including Pakistan, Saudi Arabia, UAE, and Turkey, accepted the invitation, major global powers such as India, China, Russia, Germany, France, and the UK declined to join, citing strategic and diplomatic concerns.