ಬೈರೂತ್ ಸ್ಫೋಟ: ರಾಜೀನಾಮೆ ನೀಡಿದ ಲೆಬನಾನ್ ಪ್ರಧಾನಿ

11-08-20 09:20 am       Headline Karnataka News Network   ದೇಶ - ವಿದೇಶ

ಲೆಬನಾನ್​ನ ಬೈರೂತ್​ನಲ್ಲಿ ಸಂಭವಿಸಿದ ಸ್ಫೋಟಕ್ಕೆ ಅಲ್ಲಿನ ಸರ್ಕಾರ ಭಾರೀ ದಂಡ ತೆತ್ತಿದೆ. ಸ್ಫೋಟದ ಬೆನ್ನಲ್ಲೇ ಅಲ್ಲಿನ ಜನರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದರು. ಪರಿಣಾಮ ಲೆಬನಾನ್​ ಪ್ರಧಾನಿ ಹಸ್ಸನ್​ ದಿಯಾಬ್​ ರಾಜೀನಾಮೆ ನೀಡಿದ್ದಾರೆ.

ಬೈರೂತ್, ಆಗಸ್ಟ್ 11: ಲೆಬನಾನ್​ನ ಬೈರೂತ್​ನಲ್ಲಿ ಸಂಭವಿಸಿದ ಸ್ಫೋಟಕ್ಕೆ ಅಲ್ಲಿನ ಸರ್ಕಾರ ಭಾರೀ ದಂಡ ತೆತ್ತಿದೆ. ಸ್ಫೋಟದ ಬೆನ್ನಲ್ಲೇ ಅಲ್ಲಿನ ಜನರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದರು. ಪರಿಣಾಮ ಲೆಬನಾನ್​ ಪ್ರಧಾನಿ ಹಸ್ಸನ್​ ದಿಯಾಬ್​ ರಾಜೀನಾಮೆ ನೀಡಿದ್ದಾರೆ.

ಲೆಬನಾನ್ ರಾಜಧಾನಿ ಬೈರುತ್ ನಗರದ ಬಂದರು ಪ್ರದೇಶದಲ್ಲಿ ಆಗಸ್ಟ್​5ರಂದು ಮಧ್ಯಾಹ್ನ ಸಂಭವಿಸಿರುವ ಭಾರೀ ಸ್ಟೋಟದಿಂದ ಅಲ್ಲಿನ ಜನರ ಬದುಕು ನುಚ್ಚು ನೂರಾಗಿದೆ. 6 ಸಾವಿರ ಜನ ಗಾಯಗೊಂಡು 160 ಹೆಚ್ಚು ಜನರು ಮೃತಪಟ್ಟಿದ್ದಾರೆ. 20 ಜನರು ಕಾಣೆಯಾಗಿದ್ದಾರೆ. ಈ ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್​ ಕಾರಣವಾಗಿತ್ತು. 2013-14 ಸಂದರ್ಭದಲ್ಲಿ ಹಡಗೊಂದರಿಂದ ಸುಮಾರು 2,750 ಟನ್​  ಅಮೋನಿಯಂ ನೈಟ್ರೇಟ್ ವಶಕ್ಕೆ ಪಡೆಯಲಾಗಿತ್ತು. ಅದನ್ನು ಬೈರೂತ್​ ಬಂದರಿನಲ್ಲಿ ಶೇಖರಿಸಿಡಲಾಗಿತ್ತು. ಇದಕ್ಕೆ ಬೆಂಕಿ ತಾಕಿ ಇಡಿ ಬೈರೂತ್​ ನಾಶವಾಗಿತ್ತು.

ಈ ಅವಘಢಕ್ಕೆ ರಾಜಕಾರಣಿಗಳ ನಿರ್ಲಕ್ಷ್ಯ ಮುಖ್ಯ ಕಾರಣ ಎನ್ನಲಾಗುತ್ತಿದೆ. ಹೀಗಾಗಿ, ಅಲ್ಲಿನ ಜನರು ಬೀದಿಗೆ ಇಳಿದು ದಂಗೆ ನಡೆಸುತ್ತಿದ್ದಾರೆ. ದಂಗೆ ನಿಯಂತ್ರಣ ಮಾಡಲಾಗದೆ ಮಣಿದಿರುವ ಅಲ್ಲಿನ ಪ್ರಧಾನಿ ರಾಜೀನಾಮೆ ನೀಡಿದ್ದಾರೆ.