ಬ್ರೇಕಿಂಗ್ ನ್ಯೂಸ್
19-02-26 11:04 pm mangalore ದೇಶ - ವಿದೇಶ
ನವದೆಹಲಿ, ಫೆ.19ಒಂದೆಡೆ ಇರಾನ್ ಜೊತೆಗೆ ಶಾಂತಿ ಮಾತುಕತೆ ಎನ್ನುತ್ತಿರುವಾಗಲೇ ಅಮೆರಿಕ ಮಧ್ಯ ಪ್ರಾಚ್ಯದಲ್ಲಿ ತನ್ನ ವಾಯುಪಡೆಯನ್ನು ಸಜ್ಜುಗೊಳಿಸಿ ಬೆದರಿಕೆ ತಂತ್ರಕ್ಕೆ ಮುಂದಾಗಿದೆ. ಅಮೆರಿಕ ತನ್ನ ಬಳಿ ಇರುವ ಅತ್ಯಾಧುನಿಕ ಎಫ್-35, ಎಫ್-16 ಯುದ್ಧ ವಿಮಾನಗಳನ್ನು ಇರಾನ್ ಬಳಿಯಲ್ಲಿ ಸನ್ನದ್ಧವಾಗಿರಿಸಿದೆ.
2003ರ ಇರಾಕ್ ವಿರುದ್ಧ ದಾಳಿಗೆ ನಿಯೋಜನೆಗೊಂಡಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಯುದ್ಧ ವಿಮಾನಗಳನ್ನು ಅಮೆರಿಕ ಈಗ ಮಧ್ಯಪ್ರಾಚ್ಯಕ್ಕೆ ಕಳುಹಿಸಿಕೊಟ್ಟಿದೆ. ಯುದ್ಧ ವಿಮಾನಗಳನ್ನು ತುಂಬಿದ ಎರಡನೇ ವಿಮಾನ ವಾಹಕ ನೌಕೆಯೂ ಈಗ ಗಲ್ಫ್ ದೇಶಗಳತ್ತ ಬರುತ್ತಿದೆ ಎಂದು ಅಮೆರಿಕದ ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ವರದಿಯ ಪ್ರಕಾರ ಅಮೆರಿಕ ದಾಳಿ ನಡೆಸಲು ಸನ್ನದ್ಧ ರೀತಿಯಲ್ಲಿದ್ದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮತಿಗಾಗಿ ಕಾಯುತ್ತಿದೆ. ಟ್ರಂಪ್ ದಾಳಿಗೆ ಅನುಮತಿ ನೀಡಿದರೆ ದಾಳಿ ನಡೆಯೋದು ಖಚಿತ ಎನ್ನಲಾಗುತ್ತಿದೆ. ಆದರೆ, ಇದು ಟ್ರಂಪ್ ಇರಾನ್ ಮೇಲೆ ನಡೆಸುತ್ತಿರುವ ಬೆದರಿಕೆ ತಂತ್ರವೆಂದೂ ಹೇಳಲಾಗುತ್ತಿದೆ.
ದಾಳಿಗೆ ಅನುಮತಿ ನೀಡಿದರೆ ಇರಾನ್ ಒಳಗಿರುವ ಪರಮಾಣು ಸ್ಥಾವರ ಮತ್ತು ಕ್ಷಿಪಣಿಗಳನ್ನು ಸಂಗ್ರಹಿಸಿಟ್ಟಿರುವ ಜಾಗಗಳನ್ನು ಗುರಿಯಾಗಿಸಿ ನಾಶ ಮಾಡಲಿದೆ. ಕೊನೆಗೆ ಅಲ್ಲಿರುವ ಖಮೇನಿ ಆಡಳಿತವನ್ನು ಉರುಳಿಸುವ ಸಾಧ್ಯತೆಯಿದೆ. ಖಮೇನಿ ವಿರುದ್ಧ ಇರಾನ್ ಯುವಜನರು ಕಳೆದೆರಡು ತಿಂಗಳಿನಿಂದ ಪ್ರತಿಭಟನೆ, ಹಿಂಸಾಚಾರ ನಡೆಸುತ್ತಿದ್ದಾರೆ. ಇದರ ಹಿಂದೆ ಅಮೆರಿಕ ಇದೆಯೆಂದು ಖಮೇನಿ ಆಡಳಿತ ಆರೋಪಿಸಿತ್ತು.
ಫ್ಲೈಟ್-ಟ್ರ್ಯಾಕಿಂಗ್ ಡೇಟಾದ ಪ್ರಕಾರ ಡಜನ್ಗಟ್ಟಲೇ ಯುಎಸ್ ಏರ್ ಫೋರ್ಸ್ ಫೈಟರ್ ಜೆಟ್ಗಳು, ಕಾರ್ಗೋ ವಿಮಾನಗಳು ಮತ್ತು ಹಲವು ಬೆಂಬಲಿತ ವಿಮಾನಗಳು ಜೋರ್ಡಾನ್ ವಾಯು ಪ್ರದೇಶದ ಮುವಾಫಾಕ್ ಸಾಲ್ಟಿ ವಾಯುನೆಲೆ ಮತ್ತು ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆಗೆ ಸ್ಥಳಾಂತರಗೊಂಡಿವೆ. ಆಮೂಲಕ ಅಮೆರಿಕ ಯಾವುದೇ ಕ್ಷಣದಲ್ಲಿ ದಾಳಿ ನಡೆಸುವ ಸಾಧ್ಯತೆಯಿದೆ ಎಂಬುದನ್ನು ವಿಶ್ವ ಸಮುದಾಯಕ್ಕೆ ತೋರಿಸಿದೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am