ಬ್ರೇಕಿಂಗ್ ನ್ಯೂಸ್
14-06-26 01:08 pm HK News Staffer ದೇಶ - ವಿದೇಶ
ತಿರುವನಂತಪುರಂ, ಜೂನ್ 14: ಕೇರಳದಲ್ಲಿ ಕೆಎಸ್‌ಆರ್‌ಟಿಸಿ 'ಸಾಮಾನ್ಯ' ಬಸ್‌ಗಳಲ್ಲಿ ಮಹಿಳೆಯರಿಗಾಗಿ 'ಪ್ರಿಯದರ್ಶಿನಿ' ಉಚಿತ ಪ್ರಯಾಣ ಯೋಜನೆ ಜಾರಿಗೆ ಬಂದಿದ್ದು ಜೂನ್ 15ರಂದು ಮುಖ್ಯಮಂತ್ರಿ ವಿಡಿ ಸತೀಶನ್ ಚಾಲನೆ ನೀಡಲಿದ್ದಾರೆ.
ವಿಶೇಷ ಅಂದರೆ, ಕೇರಳದಲ್ಲಿ ಈ ಸೌಲಭ್ಯವು ಎಲ್ಲಾ ಮಹಿಳೆಯರಿಗೂ ಅನ್ವಯವಾಗಲಿದೆ. ಕೇರಳದವರು ಮತ್ತು ಹೊರಗಿನಿಂದ ಭೇಟಿ ನೀಡುವವರಿಗೂ ಈ ಸೌಲಭ್ಯ ದೊರಕಲಿದೆ. ಲಿಂಗತ್ವ ಅಲ್ಪಸಂಖ್ಯಾತ ಪ್ರಯಾಣಿಕರಿಗೂ ಈ ಯೋಜನೆ ಲಾಭ ಸಿಗಲಿದೆ. ಇದಕ್ಕಾಗಿ ಪ್ರತ್ಯೇಕ ಗುರುತಿನ ಚೀಟಿ ತೋರಿಸುವ ಅಗತ್ಯವಿಲ್ಲ. ಬದಲಾಗಿ, ಅವರಿಗೆ "ಶೂನ್ಯ ದರ" (zero-fare) ಟಿಕೆಟ್‌ಗಳನ್ನು ನೀಡಲಾಗುತ್ತದೆ. ಇದರಿಂದ ಸರ್ಕಾರಕ್ಕೆ ಈ ಯೋಜನೆ ಲಾಭ ಪಡೆದವರ ಸಂಖ್ಯೆ ಸಿಗಲಿದ್ದು ಆರ್ಥಿಕ ಪರಿಣಾಮವನ್ನು ಅಂದಾಜು ಮಾಡಲು ಸಹಾಯವಾಗಲಿದೆ.
ರಾಜ್ಯದಾದ್ಯಂತ ಕಾರ್ಯಾಚರಿಸುತ್ತಿರುವ 3,125 ಕೆಎಸ್‌ಆರ್‌ಟಿಸಿ 'ಸಾಮಾನ್ಯ' ಬಸ್‌ಗಳಿಗೆ ಈ ಯೋಜನೆ ಅನ್ವಯಿಸುತ್ತದೆ. ಇದರಲ್ಲಿ ಅತಿ ಹೆಚ್ಚು ಅಂದರೆ 687 ಬಸ್‌ಗಳು ತಿರುವನಂತಪುರಂ ಜಿಲ್ಲೆಯಲ್ಲಿವೆ. ಈ ಬಗ್ಗೆ ಸಾರಿಗೆ ಸಚಿವ ಸಿ.ಪಿ. ಜಾನ್ ಮಾಹಿತಿ ನೀಡಿದ್ದು, ಈ ಯೋಜನೆಯಿಂದ ಅನೇಕ ಮಹಿಳೆಯರಿಗೆ ದೈನಂದಿನ ಪ್ರಯಾಣದ ವೆಚ್ಚದಲ್ಲಿ ಉಳಿತಾಯ ಆಗಲಿದ್ದು ಅವರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಲಿದೆ ಎಂದರು. ಈ ಯೋಜನೆಗಾಗಿ ರಾಜ್ಯ ಸರ್ಕಾರಕ್ಕೆ 800 ಕೋಟಿಯಷ್ಟು ನಷ್ಟ ಎದುರಾಗಲಿದೆ.
ಯಾವೆಲ್ಲಾ ಬಸ್ ಗಳಲ್ಲಿ ಸೌಲಭ್ಯ ?
ಸಾಮಾನ್ಯ ಮತ್ತು ಪ್ರಮುಖ ನಗರ ಸಾರಿಗೆ ಬಸ್ ಗಳಲ್ಲಿ ಮಾತ್ರ ಈ ಫ್ರೀ ಯೋಜನೆ ಇರಲಿದೆ. ಲಿಮಿಟೆಡ್ ಸ್ಟಾಪ್ ಇರುವ ಸಾಮಾನ್ಯ ಸಾರಿಗೆ ಬಸ್ ಗಳಲ್ಲಿಯೂ ಉಚಿತ ಸಂಚಾರ ಇರಲಿದ್ದು ಈ ಸೌಲಭ್ಯ ಇರುವ ಬಸ್ ಗಳಲ್ಲಿ ಪ್ರತ್ಯೇಕ ಬೋರ್ಡ್ ಅಳವಡಿಸಲು ಸಾರಿಗೆ ಸಚಿವರು ಸೂಚಿಸಿದ್ದಾರೆ. ಕೆಎಸ್ಸಾರ್ಟಿಸಿ ಬಿಡುಗಡೆಗೊಳಿಸಿದ ಪಟ್ಟಿ ಪ್ರಕಾರ, ಏಳು ವಿಭಾಗಗಳಲ್ಲಿ ಉಚಿತ ಸಾರಿಗೆ ಸೌಲಭ್ಯ ಇರಲಿದೆ. ಸಾಮಾನ್ಯ ಬಸ್, ನಗರ ಸಾರಿಗೆ, ಟೌನ್ ಟು ಟೌನ್ ಸಾರಿಗೆ, ಲಿಮಿಟೆಡ್ ಸ್ಟಾಪ್ ಸಾರಿಗೆ ಬಸ್ ಗಳಲ್ಲಿ ಮಹಿಳೆಯರು ಉಚಿತ ಸಂಚಾರ ಮಾಡಬಹುದು.
ಇದಲ್ಲದೆ, ಗ್ರಾಮೀಣ ಸಂಪರ್ಕವನ್ನು ಸುಧಾರಿಸಲು ಹಿಂದಿನ ಎಲ್‌ಡಿಎಫ್ ಸರ್ಕಾರವು ಆರಂಭಿಸಿದ್ದ ಗ್ರಾಮೀಣ ಬಸ್ ಸೌಲಭ್ಯ 'ಗ್ರಾಮ ವಂಡಿ' ಯೋಜನೆಯನ್ನು ಸ್ಥಳೀಯ ಸಂಸ್ಥೆಗಳ ಸಹಾಯದೊಂದಿಗೆ 58 ರಿಂದ 500 ಸೇವೆಗಳಿಗೆ ವಿಸ್ತರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಯೋಜಿಸಿದೆ.
12-06-26 12:02 pm
HK News Staffer
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
14-06-26 01:08 pm
HK News Staffer
ದಿನಕ್ಕೆ ಒಂದು ವಾಹನಕ್ಕೆ 200 ಲೀಟರ್ ಡೀಸೆಲ್ ಮಾತ್ರ...
13-06-26 03:01 pm
4,399 ದಿನಗಳ ಸುದೀರ್ಘ ಆಡಳಿತ, ಭಾರತದ ಇತಿಹಾಸದಲ್ಲೇ...
10-06-26 06:42 pm
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
13-06-26 05:28 pm
HK News Staffer
ಮಧ್ಯರಾತ್ರಿ ಎದೆನೋವಿನಿಂದ ಮನೆಯಲ್ಲೇ ಕುಸಿದು ಬಿದ್ದ...
12-06-26 10:48 pm
ಎಂಬಿಎ ಲ್ಯಾಬ್ ಶುಲ್ಕ ಅಕ್ರಮ; ಮಂಗಳೂರು ವಿವಿಯ ಆಡಳಿತ...
12-06-26 08:44 pm
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಸಿಎಂ ವಿಜಯ್ ಜೋಸೆ...
12-06-26 04:31 pm
ದ್ರಾವಿಡ ನಾಡಿನ ಸಿಎಂ ಜೋಸೆಫ್ ವಿಜಯ್ ದಿಢೀರ್ ಕೊಲ್ಲೂ...
12-06-26 02:56 pm
13-06-26 09:17 pm
HK News Staffer
ಬೆಂಗಳೂರಿನ ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ನಲ್ಲಿ ಅನ್...
13-06-26 08:43 pm
ಕಾಲೇಜು ಫೀಸ್ಗೆ ಕೊಟ್ಟ 10 ಸಾವಿರವೇ ಜೀವ ತೆಗೆಯಿತು!...
13-06-26 06:14 pm
ಪತ್ನಿ ಹತ್ಯೆಗೆ ಜೈಲಿನಿಂದಲೇ ಸುಪಾರಿ ; ಬುರ್ಖಾ ಧರಿಸ...
12-06-26 11:58 am
Manoj Kodikere Arrest: ಕೋಕಾ ಕಾಯ್ದೆ- ಕಿಡ್ನಾಪ್...
11-06-26 08:44 pm