ಬ್ರೇಕಿಂಗ್ ನ್ಯೂಸ್
28-06-26 04:03 pm HK News Staffer ದೇಶ - ವಿದೇಶ
ಚೆನ್ನೈ, ಜೂನ್ 28: ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡವರು ಹಿಂದುಳಿದ ವರ್ಗ (ಓಬಿಸಿ) ಕೋಟಾದಡಿಯಲ್ಲಿ ಮೀಸಲಾತಿಯನ್ನು ಪಡೆಯಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಮತಾಂತರದ ನಂತರ ಅವರು ಕೇವಲ ಮುಸ್ಲಿಂ ಆಗಿರಬೇಕು, ಹಳೆಯ ಧರ್ಮದಲ್ಲಿ ಹೊಂದಿದ್ದ ಮೀಸಲನ್ನು ಪಡೆಯುವಂತಿಲ್ಲ. ಹಿಂದುಳಿದ ವರ್ಗಗಳಿಗೆ ಮತಾಂತರಗೊಂಡವರಿಗೂ ಮೀಸಲಾತಿ ನೀಡುವ ತಮಿಳುನಾಡು ಸರ್ಕಾರದ 2024ರ ಆದೇಶವನ್ನು ನ್ಯಾಯಾಲಯವು ಅಸಂವಿಧಾನಿಕ ಎಂದು ಘೋಷಿಸಿದೆ.
ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡಿದ್ದ ವ್ಯಕ್ತಿಯೊಬ್ಬ 2016ರಲ್ಲಿ ಮುಸ್ಲಿಂ ಪದ್ಧತಿಗಳ ಪ್ರಕಾರ ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಸ್ವಲ್ಪ ಸಮಯದ ನಂತರ, ಅವರು ಮುಸ್ಲಿಂ ಲೆಬ್ಬೈ ಸಮುದಾಯದಿಂದ ಜಾತಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ತಹಶೀಲ್ದಾರ್ ಅವರ ಅರ್ಜಿಯನ್ನು ತಿರಸ್ಕರಿಸಿದ್ದಕ್ಕೆ ಆ ವ್ಯಕ್ತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಸ್ಥಳೀಯ ಸಮುದಾಯವು ಅವರನ್ನು ಒಪ್ಪಿಕೊಂಡಿದ್ದು ಕಂದಾಯ ಇಲಾಖೆ ಅಧಿಕಾರಿಗೆ ಅದನ್ನು ಪ್ರಶ್ನಿಸುವ ಹಕ್ಕಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
ಜಿ.ಆರ್. ಸ್ವಾಮಿನಾಥನ್ ಮತ್ತು ಪಿ.ಬಿ. ಬಾಲಾಜಿ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠವು ಬೇಡಿಕೆಯನ್ನು ತಿರಸ್ಕರಿಸಿದ್ದು ಸಂವಿಧಾನದ 25ನೇ ವಿಧಿಯ ಅಡಿಯಲ್ಲಿ ಒಬ್ಬರು ತಮ್ಮ ಧರ್ಮವನ್ನು ಬದಲಾಯಿಸುವುದು ಮೂಲಭೂತ ಹಕ್ಕಾಗಿದ್ದರೂ, ಧರ್ಮವನ್ನು ಬದಲಾಯಿಸಿದ ನಂತರವೂ ಹಳೆ ಧರ್ಮದ ಮೀಸಲಾತಿ ಸೌಲಭ್ಯಗಳನ್ನು ಪಡೆಯುವುದು ಕಾನೂನು ಪ್ರಕಾರ ಅಮಾನ್ಯವಾಗಿದೆ ಎಂದು ಹೇಳಿದೆ.
ನ್ಯಾಯಾಲಯವು ಇಸ್ಲಾಂ ಪ್ರಕಾರ, ಯಾವುದೇ ಅರಬ್ಬರು ಅರಬ್ಬರಲ್ಲದವರಿಗಿಂತ ಅಥವಾ ಬಿಳಿಯರು ಕರಿಯರಿಗಿಂತ ಯಾವುದೇ ಶ್ರೇಷ್ಠತೆಯನ್ನು ಹೊಂದಿಲ್ಲ. ಇಸ್ಲಾಂ ಎಲ್ಲಾ ಮನುಷ್ಯರನ್ನು ಸಮಾನರು ಎಂದು ಗುರುತಿಸುತ್ತದೆಯಾದರೂ, ಜಾತಿ ಆಧಾರದ ಮೇಲೆ ಯಾರನ್ನಾದರೂ ಹಿಂದುಳಿದವರು ಅಥವಾ ಮುಂದಕ್ಕೆ ವರ್ಗೀಕರಿಸುವುದು ಇಸ್ಲಾಂನ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದೆ.
ಮುಸ್ಲಿಂ ಸಮಾಜದಲ್ಲಿ ರಾವತ್, ಮರಕ್ಕಾಯರ್ ಅಥವಾ ಡೆಕ್ಕನಿ ಮುಂತಾದ ಕೆಲವು ವರ್ಗಗಳು ಐತಿಹಾಸಿಕವಾಗಿ ಇದೆಯಾದರೂ, ಈ ವರ್ಗಗಳನ್ನು ಹುಟ್ಟಿನಿಂದಲೇ ನಿರ್ಧರಿಸಲಾಗುತ್ತದೆ. ಒಬ್ಬ ವ್ಯಕ್ತಿಯು ಬೇರೆ ಧರ್ಮಕ್ಕೆ ಮತಾಂತರಗೊಳ್ಳುವ ಮೂಲಕ ಈ ಯಾವುದೇ ಜಾತಿಗಳು ಅಥವಾ ವರ್ಗಗಳ ಭಾಗವಾಗಲು ಸಾಧ್ಯವಿಲ್ಲ. ತಮಿಳುನಾಡು ಕಾನೂನಿನಡಿ ಅನ್ಸಾರ್, ಡೆಕ್ಕನಿ, ದುಡೇಕುಲಾ, ಲಬ್ಬೈ, ಮಾಪ್ಪಿಲ್ಲ, ಶೇಖ್ ಮತ್ತು ಸೈಯದ್ ಎಂಬ ಏಳು ಮುಸ್ಲಿಂ ಸಮುದಾಯಗಳಿಗೆ ಮಾತ್ರ ಹಿಂದುಳಿದ ವರ್ಗದ ಸ್ಥಾನಮಾನ ನೀಡಲಾಗಿದೆ. ಈ ಸಮುದಾಯಗಳಲ್ಲಿ ಜನಿಸದ ವ್ಯಕ್ತಿಗೆ ಈ ಪ್ರಮಾಣಪತ್ರವನ್ನು ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
25-07-26 07:34 pm
HK News Staffer
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
ಮತ್ತೆ ಪ್ರತಿಭಟನೆಗೆ ಬಂದ್ರೆ ಜೇಬಿನಲ್ಲಿ 50 ಗ್ರಾಂ ಡ...
23-07-26 06:26 pm
25-07-26 07:32 pm
HK News Staffer
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
ನೀಟ್ ಪರೀಕ್ಷೆ ; ಮಂಗಳೂರಿನಲ್ಲೂ ಮೊಳಗಿದ ವಿದ್ಯಾರ್ಥಿ...
24-07-26 10:37 pm
Surathkal Brdige, Thokottu, Mangalore: ಸುರತ್ಕ...
23-07-26 10:27 pm
25-07-26 07:36 pm
HK News Staffer
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm
Astra Group Fraud, Lanchu Lal, Mangalore: ‘ಅಸ...
24-07-26 05:30 pm