ಬ್ರೇಕಿಂಗ್ ನ್ಯೂಸ್
30-06-26 04:34 pm HK News Staffer ದೇಶ - ವಿದೇಶ
ನ್ಯೂಯಾರ್ಕ್, ಜೂನ್ 30: “ಮಕ್ಕಳು ಟಿವಿ ಮುಂದೆ ಕುಳಿತರೆ ಬೈಯುವ ಪೋಷಕರು,” “ಓದಬೇಕು, ಸಮಯ ವ್ಯರ್ಥ ಮಾಡಬಾರದು” ಎಂದು ಹೇಳುವುದು ಸಾಮಾನ್ಯ. ಆದರೆ ಇದೇ ಟಿವಿ ನೋಡುವ ಕೆಲಸವೇ ಯಾರಿಗೋ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ತರುತ್ತಿದೆ ಅಂದ್ರೆ ನೀವು ನಂಬ್ತೀರಾ? ಹೌದು, ಫುಟ್ಬಾಲ್ ಅಭಿಮಾನಿಗಳ ಕನಸಿನ ಕೆಲಸವೊಂದು ಇದೀಗ ನಿಜವಾಗಿದ್ದು, ಕೇವಲ ಪಂದ್ಯಗಳನ್ನು ನೋಡಿದರೆ ಸಾಕು ಬರೋಬ್ಬರಿ ₹43 ಲಕ್ಷ (50,000 ಡಾಲರ್) ಸಂಬಳ ಸಿಗುತ್ತಿದೆ!
ಫಿಫಾ ವಿಶ್ವಕಪ್ 2026 ರೋಚಕತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆ, ಟೂರ್ನಿಯ ಎಲ್ಲಾ 104 ಪಂದ್ಯಗಳನ್ನು ಲೈವ್ ಆಗಿ ವೀಕ್ಷಿಸುವ ಕೆಲಸಕ್ಕೆ ಇಬ್ಬರು ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗಿದೆ. ಇವರನ್ನು “ಮುಖ್ಯ ವಿಶ್ವಕಪ್ ವೀಕ್ಷಕರು” ಎಂದು ಕರೆಯಲಾಗುತ್ತಿದ್ದು, ಸಾವಿರಾರು ಸ್ಪರ್ಧಿಗಳನ್ನು ಹಿಂದಿಕ್ಕಿ ಫ್ಲೋರಿಡಾದ ಕೆವಿನ್ ಮತ್ತು ಫಿಲಡೆಲ್ಫಿಯಾದ ಆಸ್ಟಿನ್ ಈ ವಿಶಿಷ್ಟ ಅವಕಾಶ ಪಡೆದಿದ್ದಾರೆ.
ಈ ಕೆಲಸಕ್ಕಾಗಿ ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ ಹೃದಯಭಾಗದಲ್ಲಿರುವ ಗಾಜಿನ ಕೋಣೆಯನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಅಲ್ಲಿ ಆರಾಮದಾಯಕ ಲೆದರ್ ಸೋಫಾಗಳು, ದೊಡ್ಡ ಸ್ಕ್ರೀನ್ ಟಿವಿಗಳು ಮತ್ತು ಫುಟ್ಬಾಲ್ ಟೇಬಲ್ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿಶ್ವದ ವಿವಿಧ ದೇಶಗಳಿಂದ ಬರುವ ಅಭಿಮಾನಿಗಳು ಈ “ಲೈವ್ ವಾಚಿಂಗ್ ಸ್ಟುಡಿಯೋ” ಅನ್ನು ನೋಡಬಹುದಾಗಿದೆ.
ಆದರೆ ಹೊರಗಿನಿಂದ ನೋಡಿದಷ್ಟು ಇದು ಸುಲಭದ ಕೆಲಸವಲ್ಲ. ವಿಶ್ವಕಪ್ ಹಲವು ವಾರಗಳ ಕಾಲ ನಡೆಯುವುದರಿಂದ ಪ್ರತಿದಿನ ನಿರಂತರವಾಗಿ ಪಂದ್ಯಗಳನ್ನು ನೋಡುವುದು, ತಮ್ಮ ದಿನಚರಿಯನ್ನು ಅದಕ್ಕೆ ಹೊಂದಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ ಎಂದು ಆಯ್ಕೆಯಾದ ಕೆವಿನ್ ಹೇಳಿದ್ದಾರೆ. ಕೆಲವೊಮ್ಮೆ ನಿರಂತರ ವೀಕ್ಷಣೆಯಿಂದ ಆಯಾಸವೂ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಆಸ್ಟಿನ್ ಕೂಡ ಇದೇ ಅನುಭವ ಹಂಚಿಕೊಂಡಿದ್ದು, ಗಂಟೆಗಟ್ಟಲೆ ಕುಳಿತು ಪಂದ್ಯ ವೀಕ್ಷಿಸುವುದು ಸುಲಭದ ಕೆಲಸವಲ್ಲ ಎಂದು ಹೇಳಿದ್ದಾರೆ. ವಿಶ್ವಕಪ್ ವೇಳಾಪಟ್ಟಿಗೆ ಅನುಗುಣವಾಗಿ ತಮ್ಮ ನಿದ್ರೆ ಮತ್ತು ದಿನಚರಿಯನ್ನು ನಿರ್ವಹಿಸಬೇಕಾಗಿದ್ದು, ಕನಿಷ್ಠ ಎಂಟು ಗಂಟೆಗಳ ನಿದ್ರೆ ಪಡೆಯಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ. ಆದಾಗ್ಯೂ ಕೆಲಸದ ನಡುವೆ ಅವರಿಗೆ ಹೊರಗೆ ಹೋಗುವ ಅವಕಾಶವೂ ಇದೆ.
ಈ ಕೆಲಸದ ಮತ್ತೊಂದು ವಿಶೇಷತೆ ಎಂದರೆ ವಿವಿಧ ದೇಶಗಳ ಪಂದ್ಯಗಳ ಸಮಯದಲ್ಲಿ ಆ ದೇಶಗಳ ಸಾಂಪ್ರದಾಯಿಕ ಆಹಾರಗಳನ್ನು ಸವಿಯುವ ಅವಕಾಶವೂ ಇವರಿಗೆ ಸಿಗುತ್ತಿದೆ. ಹೀಗಾಗಿ ಇದು ಕೇವಲ ಕೆಲಸವಲ್ಲ, ವಿಭಿನ್ನ ದೇಶಗಳ ಸಂಸ್ಕೃತಿಯನ್ನು ಅನುಭವಿಸುವ ಒಂದು ವಿಶೇಷ ಅವಕಾಶವೂ ಆಗಿದೆ.
ಇದುವರೆಗೆ ಕೆವಿನ್ ಮತ್ತು ಆಸ್ಟಿನ್ ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಅರ್ಜೆಂಟೀನಾದ ಸೂಪರ್ಸ್ಟಾರ್ ಲಿಯೋನೆಲ್ ಮೆಸ್ಸಿ ವಿಶ್ವದಾಖಲೆ ನಿರ್ಮಿಸಿದ ಕ್ಷಣವನ್ನು ಸಹ ಅವರು ಇದೇ ಗಾಜಿನ ಕೋಣೆಯಿಂದ ನೇರಪ್ರಸಾರದಲ್ಲಿ ವೀಕ್ಷಿಸಿದ್ದಾರೆ.
ವಿಶ್ವಕಪ್ ಗೆಲ್ಲುವ ತಂಡದ ಬಗ್ಗೆ ಇವರಿಬ್ಬರ ಅಭಿಪ್ರಾಯವೂ ವಿಭಿನ್ನವಾಗಿದೆ. ಕೆವಿನ್ಗೆ ಸ್ಪೇನ್ ತಂಡದ ಮೇಲೆ ಭರವಸೆ ಇದ್ದರೆ, ಅಮೆರಿಕ ಮತ್ತು ಘಾನಾ ತಂಡಗಳ ಆಟವೂ ಅವರಿಗೆ ಮೆಚ್ಚಾಗಿದೆ. ಆಸ್ಟಿನ್ ಮಾತ್ರ ಈ ಬಾರಿ ನಾರ್ವೆ ತಂಡ ಅಚ್ಚರಿ ಸಾಧನೆ ಮಾಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, “ಟಿವಿ ನೋಡಬೇಡ” ಎಂದು ಹೇಳುವ ಕಾಲದಲ್ಲೇ, ಟಿವಿ ನೋಡಿದ್ರೆ ಸಾಕು ಲಕ್ಷಾಂತರ ರೂಪಾಯಿ ಗಳಿಸುವ ಹೊಸ ಯುಗ ಆರಂಭವಾಗಿದೆ ಎಂಬುದೇ ಈ ಸುದ್ದಿಯ ಅಚ್ಚರಿ!
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
23-08-26 06:17 pm
HK News Staffer
ಧಾರ್ಮಿಕ ದ್ವೇಷದ ನೆಪದಲ್ಲಿ ಪುತ್ತೂರು ಬಂದ್ ಕರೆ ಕೊಟ...
23-08-26 05:36 pm
ತಾಂತ್ರಿಕ ದೋಷದಿಂದ ದಾಖಲೆ ಸುಟ್ಟ ಆರೋಪ ; ಪುತ್ತೂರಿನ...
23-08-26 05:18 pm
ರಾಜ್ಯದಲ್ಲಿ ಕೃತಕ ಪನೀರ್ ಬ್ಯಾನ್, ನಕಲಿ ಔಷಧ ಜಾಲ ಹಿ...
22-08-26 01:37 pm
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
24-08-26 11:05 am
HK News Staffer
ಹೊಳೆನರಸೀಪುರ ; ಟ್ರ್ಯಾಕ್ಟರ್ ಕೀಯನ್ನು ತಿರುಗಿಸಿದ ಮ...
23-08-26 05:20 pm
ಹೆತ್ತವರನ್ನು ಕೊಲ್ತೇನೆಂದು ಹೇಳಿ ಒಂಬತ್ತನೇ ಕ್ಲಾಸ್...
22-08-26 12:43 pm
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am