ಬ್ರೇಕಿಂಗ್ ನ್ಯೂಸ್
05-07-26 08:39 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 5: ದ್ವಿತೀಯ ಮಹಾಯುದ್ಧ ಕಾಲದ ಅತ್ಯಂತ ರೋಚಕ ಹಾಗೂ ನಿಗೂಢ ರಹಸ್ಯವೊಂದು ಬರೋಬ್ಬರಿ 80 ವರ್ಷಗಳ ತೀವ್ರ ಶೋಧದ ಬಳಿಕ ಕೊನೆಗೂ ಜಗತ್ತಿನ ಮುಂದೆ ಅನಾವರಣಗೊಂಡಿದೆ. ಯುದ್ಧದ ಸಮಯದಲ್ಲಿ ಜರ್ಮನಿಗೆ ತಲುಪಿಸಲು ಹೊರಟಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ 2 ಟನ್ ಚಿನ್ನದೊಂದಿಗೆ ನಾಪತ್ತೆಯಾಗಿದ್ದ ಜಪಾನ್‌ನ ದೈತ್ಯ ಸಬ್‌ಮರೀನ್ ‘I-52’ ಅಟ್ಲಾಂಟಿಕ್ ಸಾಗರದ ಸುಮಾರು 3 ಮೈಲಿ (17,000 ಅಡಿಗಿಂತಲೂ ಹೆಚ್ಚು) ಆಳದಲ್ಲಿ ಸಂಪೂರ್ಣ ಸುಸ್ಥಿತಿಯಲ್ಲಿ ಪತ್ತೆಯಾಗಿದೆ.
1944ರ ಹೊತ್ತಿಗೆ ದ್ವಿತೀಯ ಮಹಾಯುದ್ಧವು ತಾರಕಕ್ಕೇರಿತ್ತು. ಮಿತ್ರಪಡೆಗಳ (Allied Forces) ನೌಕಾಪಡೆಗಳು ಸಾಗರದ ಮೇಲ್ಮೈಯನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದರಿಂದ, ಮಿತ್ರರಾಗಿದ್ದ ಜಪಾನ್ ಮತ್ತು ಜರ್ಮನಿ ನಡುವೆ ಸರಕು ಸಾಗಣೆ ಅಸಾಧ್ಯ ಎನ್ನುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಜಪಾನ್ ತನ್ನ ಅತ್ಯಂತ ದೊಡ್ಡ ರಹಸ್ಯ ಸಾರಿಗೆ ಸಬ್‌ಮರೀನ್ ‘I-52’ ಅನ್ನು ಜರ್ಮನಿಗೆ ಕಳುಹಿಸಲು ನಿರ್ಧರಿಸಿತು.
ಈ ಸಬ್ ಮರೀನ್‌ನಲ್ಲಿ ಜರ್ಮನಿಯ ಮಿಲಿಟರಿ ಉದ್ಯಮಕ್ಕೆ ಅಗತ್ಯವಿದ್ದ ತವರ, ಟಂಗ್‌ಸ್ಟನ್, ನೈಸರ್ಗಿಕ ರಬ್ಬರ್ ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ತುಂಬಲಾಗಿತ್ತು. ಇದರೊಂದಿಗೆ ಅತ್ಯಂತ ಪ್ರಮುಖವಾಗಿ, ಜರ್ಮನಿಯಿಂದ ಅತ್ಯಾಧುನಿಕ ರೇಡಾರ್ ತಂತ್ರಜ್ಞಾನ ಮತ್ತು ಯುದ್ಧ ವಿಮಾನಗಳ ಬ್ಲೂಪ್ರಿಂಟ್‌ಗಳನ್ನು ಖರೀದಿಸಲು 146 ಬಾರ್‌ಗಳಲ್ಲಿದ್ದ ಸುಮಾರು 2 ಟನ್ ಶುದ್ಧ ಚಿನ್ನವನ್ನು ಇದರಲ್ಲಿ ಇಡಲಾಗಿತ್ತು. ಇಂದು ಇದರ ಮೌಲ್ಯ ನೂರಾರು ಕೋಟಿ ರೂಪಾಯಿಗಳಾಗುತ್ತವೆ.
ಜಪಾನ್‌ಗೆ ಮುಳುವಾಯ್ತು ‘ಕೋಡ್ ಬ್ರೇಕಿಂಗ್’
ಜಪಾನ್ ಈ ಕಾರ್ಯಾಚರಣೆಯನ್ನು ಅತ್ಯಂತ ರಹಸ್ಯವಾಗಿಡಲು ಬಯಸಿತ್ತಾದರೂ, ಬ್ರಿಟಿಷ್ ಮತ್ತು ಅಮೆರಿಕನ್ ಕೋಡ್ ಬ್ರೇಕರ್‌ಗಳು ಜಪಾನ್ ಹಾಗೂ ಜರ್ಮನಿ ನಡುವಿನ ರಹಸ್ಯ ನೌಕಾ ಸಂದೇಶಗಳನ್ನು ಡಿಕೋಡ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ‘I-52’ ಸಬ್‌ಮರೀನ್ ಯಾವ ಮಾರ್ಗದಲ್ಲಿ ಚಲಿಸುತ್ತಿದೆ ಮತ್ತು ಜರ್ಮನಿಯ ಯು-ಬೋಟ್ (U-530) ಅನ್ನು ಎಲ್ಲಿ ಭೇಟಿಯಾಗಲಿದೆ ಎಂಬ ನಿಖರ ಮಾಹಿತಿ ಅಮೆರಿಕನ್ ನೌಕಾಪಡೆಗೆ ಲಭ್ಯವಾಗಿತ್ತು. ಇದರ ಆಧಾರದ ಮೇಲೆ ಅಮೆರಿಕದ ‘USS Bogue’ ಯುದ್ಧ ನೌಕೆಯಿಂದ ಗಗನಕ್ಕೆ ಹಾರಿದ ಟಿಬಿಎಂ ಅವೆಂಜರ್ ಯುದ್ಧ ವಿಮಾನಗಳು ಜಪಾನ್ ಸಬ್‌ಮರೀನ್ ಅನ್ನು ನಡುರಾತ್ರಿಯ ಕತ್ತಲಿನಲ್ಲಿ ಸುತ್ತುವರಿದವು.


ಜೂನ್ 23, 1944 : ಸಾಗರದ ಗರ್ಭ ಸೇರಿದ 109 ಜೀವಗಳು
1944ರ ಜೂನ್ 23ರ ರಾತ್ರಿ, ಅಟ್ಲಾಂಟಿಕ್ ಸಾಗರದ ಮಧ್ಯಭಾಗದಲ್ಲಿ ಜಪಾನ್ ಸಬ್‌ಮರೀನ್ ರಹಸ್ಯ ತಾಣದಲ್ಲಿ ಜರ್ಮನಿಯ ಯು- ಬೋಟ್ ನೌಕೆಗೆ ರೇಡಾರ್ ಉಪಕರಣಗಳನ್ನು ಪೂರೈಸುತ್ತಿದ್ದಾಗಲೇ ಅಮೆರಿಕದ ವಿಮಾನಗಳು ದಾಳಿ ನಡೆಸಿದ್ದವು. ಶಬ್ದದ ತರಂಗಗಳನ್ನು ಆಧರಿಸಿ ಗುರಿ ಇಡುವ ‘ಮಾರ್ಕ್ 24 ಅಕೌಸ್ಟಿಕ್ ಹೋಮಿಂಗ್ ಟಾರ್ಪಿಡೊ’ ಕ್ಷಿಪಣಿಯನ್ನು ಸಬ್‌ಮರೀನ್‌ನತ್ತ ಹಾರಿಸಲಾಗಿತ್ತು. ಅದು ಸಬ್‌ಮರೀನ್‌ನ ಪ್ರೊಪೆಲ್ಲರ್‌ಗೆ ನೇರವಾಗಿ ಅಪ್ಪಳಿಸಿತು. ಸಾಗರದ ಆಳದಲ್ಲಿ ಭೀಕರ ಸ್ಫೋಟ ಸಂಭವಿಸಿ, ಅದರಲ್ಲಿದ್ದ ಎಲ್ಲಾ 109 ನಾವಿಕರೊಂದಿಗೆ ‘I-52’ ಸಂಪೂರ್ಣವಾಗಿ ಮುಳುಗಿ ಇತಿಹಾಸದ ಪುಟಗಳಿಂದ ಕಣ್ಮರೆಯಾಗಿತ್ತು.
50 ವರ್ಷಗಳ ಸುದೀರ್ಘ ಹುಡುಕಾಟ
ಅಟ್ಲಾಂಟಿಕ್ ಸಾಗರದ ಮಧ್ಯೆ ರಾತ್ರಿ ವೇಳೆ ದುರಂತ ನಡೆದು ಹಡಗು ಪೂರ್ತಿ ಮುಳುಗಿ ಹೋಗಿದ್ದರಿಂದ ಎಲ್ಲಿ ಘಟನೆ ನಡೆದಿತ್ತು ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ಯುದ್ಧದ ಸಮಯದಲ್ಲಿ ದಾಖಲಾಗಿದ್ದ ಅಮೆರಿಕದ ನೌಕಾಪಡೆಯ ಕಕ್ಷೆಗಳು ಕೂಡ ತಪ್ಪು ಮಾಹಿತಿಯನ್ನು ಹೊಂದಿದ್ದರಿಂದ, ದಶಕಗಳಿಂದ ನಡೆದಿದ್ದ ಹುಡುಕಾಟಗಳು ವಿಫಲವಾಗಿದ್ದವು. ಆದರೆ 1990ರ ದಶಕದಲ್ಲಿ ಪಾಲ್ ಟಿಡ್ವೆಲ್ ಎಂಬ ಪ್ರಸಿದ್ಧ ಸಾಗರ ಸಂಶೋಧಕ ಜಪಾನ್ ಮತ್ತು ಅಮೆರಿಕದ ಮೂಲ ಮಿಲಿಟರಿ ಡೈರಿಗಳು ಹಾಗೂ ಹವಾಮಾನ ವರದಿಗಳನ್ನು ಮರು ಪರಿಶೀಲನೆಗೆ ಒಳಪಡಿಸಿದ್ದರು. ಅಲ್ಲದೆ, ಆಧುನಿಕ (RENAV) ಕಂಪ್ಯೂಟರ್ ಸಿಮ್ಯುಲೇಶನ್ ತಂತ್ರಜ್ಞಾನ ಸಹಾಯದಿಂದ ಸಾಗರದ ಪ್ರವಾಹಗಳನ್ನು ಲೆಕ್ಕಹಾಕಿ, ಹಿಂದೆ ಗುರುತಿಸಿದ್ದ ಜಾಗದಿಂದ 10 ಮೈಲಿ ದೂರದಲ್ಲಿ ಹೊಸ ಜಾಗವನ್ನು ಗುರುತಿಸಿದರು. ಕೊನೆಗೆ, 1995 ರ ಮೇ 2ರಂದು ಸುಮಾರು 17,000 ಅಡಿಯಷ್ಟು ಆಳದಲ್ಲಿ ದೈತ್ಯ ಸಬ್‌ಮರೀನ್ ಪತ್ತೆ ಮಾಡಲಾಯಿತು. ಸಾಗರದ ತಳದಲ್ಲಿ ಸಬ್‌ಮರೀನ್ ಯಾವುದೇ ಹಾನಿಯಾಗದೆ ನೆಟ್ಟಗೆ ನಿಂತಿರುವುದನ್ನು ಕಂಡು ಸಂಶೋಧಕರು ಆಶ್ಚರ್ಯಚಕಿತರಾದರು.

ಇಂದಿಗೂ ಮುಳುಗಿರುವ ಚಿನ್ನದ ರಹಸ್ಯ
ಸಬ್‌ಮರೀನ್‌ನ ಅವಶೇಷಗಳು ಪತ್ತೆಯಾಗಿದ್ದರೂ, ಅದರಲ್ಲಿರುವ 2 ಟನ್ ಚಿನ್ನವನ್ನು ಇದುವರೆಗೆ ಹೊರ ತೆಗೆಯಲಾಗಿಲ್ಲ. ಈ ಚಿನ್ನವು ಸಬ್‌ಮರೀನ್‌ನ ಮುಂಭಾಗದ ಸುರಕ್ಷಿತ ಕೊಠಡಿಯಲ್ಲಿದೆ ಎಂದು ನಂಬಲಾಗಿದೆ. ಆದರೆ, ಈ ಸಬ್‌ಮರೀನ್ ಪತ್ತೆಯಾಗಿರುವ ಆಳವು ಅತ್ಯಂತ ಅಪಾಯಕಾರಿಯಾಗಿದ್ದು, ಅಲ್ಲಿಗೆ ತಲುಪುವುದು ತಾಂತ್ರಿಕವಾಗಿ ದೊಡ್ಡ ಸವಾಲಾಗಿದೆ. ಅಲ್ಲದೆ, ಈ ಘಟನೆಯಲ್ಲಿ 109 ಜಪಾನಿ ಯೋಧರು ಸಮಾಧಿಯಾಗಿರುವುದರಿಂದ, ಜಾಗತಿಕ ನಿಯಮಗಳ ಪ್ರಕಾರ ಅಲ್ಲಿ ಯಾವುದೇ ಉತ್ಖನನ ನಡೆಸಲು ಕಾನೂನು ಮತ್ತು ನೈತಿಕ ಅಡ್ಡಿಗಳು ಎದುರಾಗುತ್ತವೆ. ಹೀಗಾಗಿ ಆ ಕೋಟ್ಯಂತರ ಮೌಲ್ಯದ ಚಿನ್ನ ಇಂದಿಗೂ ಸಾಗರದ ಆಳದಲ್ಲೇ ಭದ್ರವಾಗಿ ಉಳಿದುಕೊಂಡಿದೆ.
One of the most fascinating mysteries of the Second World War has finally been solved after nearly 80 years. The Japanese submarine I-52, which disappeared in 1944 while transporting approximately two tons of gold to Nazi Germany, has been located nearly 17,000 feet (over 3 miles) beneath the Atlantic Ocean.
04-07-26 02:51 pm
HK News Staffer
ರಾಮನಗರ ಕಲ್ಯಾಣ ಮಂಟಪದಲ್ಲಿ ಮತದಾರರನ್ನು ಸೇರಿಸಿ ಎಸ್...
03-07-26 01:21 pm
ರಾಮನಗರದಲ್ಲಿ 10 ಸಾವಿರಕ್ಕೂ ಹೆಚ್ಚು ಬಾಂಗ್ಲಾ ಪ್ರಜೆ...
02-07-26 09:19 pm
ಆರ್ಎಸ್ಎಸ್ಗೆ ಬರುವ ಪ್ರತಿ ರೂಪಾಯಿಗೂ ಲೆಕ್ಕವಿದೆ,...
02-07-26 09:18 pm
ಬಿಜೆಪಿಯವರು ದೇವಸ್ಥಾನಗಳ ಮುಂದೆ ಹುಂಡಿ ಹಣ ಕಳ್ಳರಿದ್...
01-07-26 09:49 pm
05-07-26 08:39 pm
HK News Desk
ಚೀನಾ ಮಹಾಗೋಡೆ ಮಾದರಿಯಲ್ಲೇ ಆಫ್ರಿಕಾ ಮರುಭೂಮಿಯಲ್ಲಿ...
04-07-26 08:09 pm
ರಷ್ಯಾದಿಂದ ತೈಲ ಖರೀದಿಸಿ ಮತ್ತೆ ಆ ದೇಶಕ್ಕೇ ಪೆಟ್ರೋಲ...
03-07-26 09:40 pm
ಲಾಡ್ಲೆ ಮಶಾಕ್ ದರ್ಗಾ ಗಲಭೆ ಪ್ರಕರಣ ಸೇರಿ 52 ಕ್ರಿಮಿ...
02-07-26 03:37 pm
ಹಿಂದು ವಿವಾಹಕ್ಕೆ ನೋಂದಣಿಯಷ್ಟೇ ಸಾಲದು, ಸಪ್ತಪದಿ ಇನ...
02-07-26 01:56 pm
05-07-26 10:15 pm
HK News Desk
ಉನ್ನತ ಶಿಕ್ಷಣಕ್ಕಾಗಿ ಜರ್ಮನಿ ತೆರಳಿದ್ದ ಮಂಗಳೂರಿನ ಯ...
05-07-26 09:34 pm
Panambur Block, Mangalore: ಪಣಂಬೂರು ಹೆದ್ದಾರಿಯಲ...
05-07-26 06:33 pm
Kuloor Accident: ಕುಳೂರು ಬಳಿ ಸ್ಕೂಟರ್ ಗೆ ಟ್ಯಾಂಕ...
03-07-26 10:17 pm
ಕೆರೆಬೈಲ್ ಎಸ್ಟೇಟ್ ಆವರಣ ಗೋಡೆ ಕುಸಿದು ಅವಾಂತರ ; ಸ...
02-07-26 10:53 pm
04-07-26 09:47 pm
HK News Staffer
Panambur Gold Robbery, Update: ಚಿನ್ನದ ವ್ಯಾಪಾರ...
04-07-26 09:43 pm
ಅಶ್ಲೀಲ ವಿಡಿಯೋ ಇದೆಯೆಂದು ಹೇಳಿ ರಿಯಲ್ ಎಸ್ಟೇಟ್ ಉದ್...
04-07-26 06:54 pm
'ಡಿಜಿಟಲ್ ಅರೆಸ್ಟ್’ ಸೈಬರ್ ವಂಚಕರಿಗೆ ಅಮಾಯಕರ ಹೆಸರಲ...
04-07-26 05:58 pm
ಮಲ್ಪೆ ವಾಟರ್ ಸ್ಪೋರ್ಟ್ಸ್ ಉದ್ಯಮಿ ಸಂದೀಪ್ ಸಾಲ್ಯಾನ್...
04-07-26 03:12 pm