ಬ್ರೇಕಿಂಗ್ ನ್ಯೂಸ್
09-01-21 11:52 am Headline Karnataka News Network ದೇಶ - ವಿದೇಶ
ಸ್ಯಾನ್‌ಫ್ರಾನ್ಸಿಸ್ಕೊ, ಜ.8: ಅಮೆರಿಕದ ಸಂಸತ್ ಮೇಲೆ ಟ್ರಂಪ್ ಬೆಂಬಲಿಗರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಟ್ರಂಪ್ ಮತ್ತಷ್ಟು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಟ್ರಂಪ್ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ಆಗಿ ರದ್ದುಪಡಿಸಿರುವುದಾಗಿ ಟ್ವಿಟ್ಟರ್ ಪ್ರಕಟಿಸಿದೆ.
"@ರಿಯಲ್‌ಡೊನಾಲ್ಡ್‌ಟ್ರಂಪ್ ಖಾತೆಯ ಇತ್ತೀಚಿನ ಟ್ವೀಟ್‌ಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ, ಮತ್ತಷ್ಟು ಹಿಂಸೆಗೆ ಕುಮ್ಮಕ್ಕು ನೀಡುವ ಸಾಧ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ನಾವು ಶಾಶ್ವತವಾಗಿ ಈ ಖಾತೆಯನ್ನು ರದ್ದುಪಡಿಸುತ್ತಿದ್ದೇವೆ" ಎಂದು ಟ್ವಿಟ್ಟರ್ ಹೇಳಿಕೆ ನೀಡಿದೆ.
ಬುಧವಾರ ಅಮೆರಿಕ ಸಂಸತ್ತಿನ ಮೇಲೆ ಟ್ರಂಪ್ ಬೆಂಬಲಿಗರು ದಾಳಿ ನಡೆಸಿದ ಬೆನ್ನಲ್ಲೇ 12 ಗಂಟೆ ಕಾಲ ಟ್ರಂಪ್ ಅವರ ಅತ್ಯಂತ ಪ್ರಿಯವಾದ ಟ್ವಿಟ್ಟರ್ ಖಾತೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿತ್ತು. ಜತೆಗೆ ನಿಯಮಾವಳಿಯನ್ನು ಉಲ್ಲಂಘಿಸಿದರೆ ಶಾಶ್ವತವಾಗಿ ರದ್ದುಪಡಿಸುವು ದಾಗಿ ಎಚ್ಚರಿಸಲಾಗಿತ್ತು.
ಗುರುವಾರ ಮತ್ತೆ ಸಕ್ರಿಯರಾಗಿದ್ದ ಟ್ರಂಪ್, ತಮ್ಮ ಬೆಂಬಲಿಗರಿಂದ ನಡೆದ ದಾಳಿಯ ಬಳಿಕದ ಉದ್ವಿಗ್ನ ಪರಿಸ್ಥಿತಿಯ ಕುರಿತ ವೀಡಿಯೊ ಪೋಸ್ಟ್ ಮಾಡಿದ್ದರು. ತಮ್ಮ ಅಧ್ಯಕ್ಷಾವಧಿ ಮುಕ್ತಾಯವಾಗುತ್ತಿದೆ. ಜೋ ಬೈಡನ್ ಅವರಿಗೆ ಸುಲಲಿತವಾಗಿ ಅಧಿಕಾರ ವರ್ಗಾಯಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದರು. ಆದರೆ ಬೈಡನ್ ಅವರನ್ನು ಅಭಿನಂದಿಸಿಲ್ಲ ಅಥವಾ ಅವರ ಉತ್ತರಾಧಿಕಾರಿಯ ಹೆಸರನ್ನೂ ಎಲ್ಲೂ ಉಲ್ಲೇಖಿಸಿಲ್ಲ.
ಮುಂದಿನ ಕ್ರಮಕ್ಕಾಗಿ ಟ್ರಂಪ್ ಅವರ ಸಾಮಾಜಿಕ ಜಾಲತಾಣ ಚಟುವಟಿಕೆಗಳ ಮೇಲೆ ನಿಗಾ ಇಡಲಾಗುವುದು ಎಂದು ಟ್ವಿಟ್ಟರ್ ಹೇಳಿಕೆ ನೀಡಿದೆ.
Twitter Inc said on Friday that it has permanently suspended US President Donald Trump’s account due to the risk of further incitement of violence following the storming of the US Capitol on Wednesday by hundreds of his supporters.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm