ಬ್ರೇಕಿಂಗ್ ನ್ಯೂಸ್
30-08-26 02:41 pm HK News Staffer ದೇಶ - ವಿದೇಶ
ನ್ಯೂಯಾರ್ಕ್, ಆ.30: ಹಿಂದೂ ರಾಷ್ಟ್ರದ ಪರಿಕಲ್ಪನೆ ಮುಸ್ಲಿಮರನ್ನು ದೇಶದಿಂದ ಹೊರಗಿಡುವುದಲ್ಲ. ಭಾರತದಲ್ಲಿ ಮುಸ್ಲಿಮರಿಗೆ ಸ್ಥಾನ ಇರಬಾರದು ಎಂಬುದು ಹಿಂದುತ್ವವೇ ಅಲ್ಲ. ಧರ್ಮಗಳು ಬೇರೆಯಾಗಿರಬಹುದು. ಆದರೆ ಎನ್ನುವುದು ಮಾನವೀಯತೆ ಒಂದೇ. ಎಲ್ಲ ಧರ್ಮಗಳ ಆಚರಣೆಗೆ ಅವಕಾಶ ನೀಡುವುದೇ ಹಿಂದುತ್ವ ಎಂದು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವದ ಜಾಗತಿಕ ಸಂಪರ್ಕ ಕಾರ್ಯಕ್ರಮದ ಭಾಗವಾಗಿ ಭಾಗವತ್ ಅಮೆರಿಕಕ್ಕೆ ಭೇಟಿ ನೀಡಿದ್ದು, ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದರು. ‘ಒಂದು ಜಗತ್ತು, ಒಂದು ಮಾನವ ಕುಲ’ ಎನ್ನುವ ಸರ್ವಧರ್ಮ ಸಂವಾದ ಕಾರ್ಯಕ್ರಮದಲ್ಲಿ ಈ ಮಾತುಗಳನ್ನಾಡಿದ್ದಾರೆ.
ಯಾರಾದರೂ ಹಿಂದೂ ಎಂದು ಕರೆದುಕೊಳ್ಳಬೇಕಾದರೆ, ಎಲ್ಲಾ ಧರ್ಮಗಳ ಹಾದಿಯೂ ಒಂದೇ ಗುರಿಯತ್ತ ಸಾಗುತ್ತದೆ ಮತ್ತು ಎಲ್ಲ ಮನುಷ್ಯರಿಗೂ ಒಂದೇ ರೀತಿಯ ಗೌರವವಿದೆ ಎಂಬುದನ್ನು ನಂಬಬೇಕು. ಮಾನವ ಕುಲದಲ್ಲಿ ಯಾವುದೇ ಭೇದಭಾವವಿಲ್ಲ ಎಂದು ಭಾಗವತ್ ಹೇಳಿದ್ದಾರೆ. ಈ ವೇಳೆ ಹಿಂದುತ್ವ ಪರಿಕಲ್ಪನೆ, ಹಿಂದು ರಾಷ್ಟ್ರದ ವ್ಯಾಖ್ಯೆಯಲ್ಲಿ 'ಭಾರತದ ಮುಸ್ಲಿಮರ ಸ್ಥಾನವೇನು?' ಎಂಬ ಪ್ರಶ್ನೆಗೆ ಭಾಗವತ್ ಮೇಲಿನಂತೆ ಉತ್ತರಿಸಿದ್ದಾರೆ.
"ಹಿಂದೊಮ್ಮೆ ನನ್ನ ಉಪನ್ಯಾಸವೊಂದರಲ್ಲಿ ಭಾಗವಹಿಸಿದ್ದ ಮುಸ್ಲಿಂ ಸಹೋದರರು, 'ನೀವು ಹಿಂದೂ ರಾಷ್ಟ್ರ ಎಂದು ಹೇಳುತ್ತೀರಿ, ಹಾಗಿದ್ದರೆ ಮುಸ್ಲಿಮರಾದ ನಮ್ಮ ಕಥೆಯೇನು? ನಮ್ಮನ್ನು ದೇಶದಿಂದ ಹೊರಹಾಕುತ್ತೀರಾ?' ಎಂದು ಪ್ರಶ್ನಿಸಿದ್ದರು. ಅದಕ್ಕೆ ನಾನು 'ಖಂಡಿತ ಇಲ್ಲ, ಮುಸ್ಲಿಮರನ್ನು ದೂರ ಇಡುವ ಪರಿಕಲ್ಪನೆ ಹಿಂದುತ್ವವೇ ಅಲ್ಲ' ಎಂದು ಹೇಳಿದ್ದೆ. ಭಾರತದಲ್ಲಿ ಮುಸ್ಲಿಮರು ಇರಲೇಬಾರದು ಎಂದು ಹಿಂದುವೊಬ್ಬ ಭಾವಿಸಿದರೆ, ಆತ ನೈಜ ಹಿಂದುವಾಗಿ ಉಳಿಯಲು ಸಾಧ್ಯವಿಲ್ಲ" ಎಂದು ಹೇಳಿದರು.
‘ಭಾರತದಲ್ಲಿ ಮುಸ್ಲಿಮರು ಇರಬಾರದು ಎಂಬುದಾಗಿ ಭಾವಿಸುವುದೇ ತಪ್ಪು. ನಾವು ಹಿಂದೂ ಎಂದು ಕರೆದುಕೊಳ್ಳಬೇಕಾದರೆ ಎಲ್ಲಾ ಧರ್ಮಗಳನ್ನು ಗೌರವಿಸಬೇಕು. ಜನ ತಮ್ಮ ವಿಶ್ವಾಸದಂತೆ ವಿಭಿನ್ನ ಧಾರ್ಮಿಕ ಮಾರ್ಗಗಳನ್ನು ಅನುಸರಿಸಬಹುದು. ಅಂತಿಮವಾಗಿ ಎಲ್ಲಾ ಧರ್ಮಗಳು ಒಂದೇ ಆಗಿರುತ್ತದೆ. ಒಂದೇ ದೇವರು ಎನ್ನುವ ಕಲ್ಪನೆಯತ್ತ ಕೊಂಡೊಯ್ಯುತ್ತವೆ ಎಂಬುದನ್ನು ಮರೆಯಬಾರದು ಎಂದು ಭಾಗವತ್ ಹೇಳಿದರು.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 01:47 pm
HK News Staffer
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
16-10-26 11:04 am
HK News Staffer
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm