ಬ್ರೇಕಿಂಗ್ ನ್ಯೂಸ್
09-10-26 05:40 pm HK News Staffer ದೇಶ - ವಿದೇಶ
ತಿರುವನಂತಪುರಂ, ಅ.9: ಕೇರಳದ ಮಾಜಿ ಮುಖ್ಯಮಂತ್ರಿ, ಸಿಪಿಎಂ ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಅವರ ಪುತ್ರಿ ಟಿ.ವೀಣಾ ಹಾಗೂ ಅಳಿಯ ಮೊಹಮ್ಮದ್ ರಿಯಾಸ್ ಮತ್ತಿತರರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ರಾಜ್ಯ ಪೊಲೀಸರಿಗೆ ಕೇರಳ ಹೈಕೋರ್ಟ್ ಆದೇಶ ಮಾಡಿದೆ.
2017-2020ರಲ್ಲಿ ಪಿಣರಾಯಿ ವಿಜಯನ್ ಸಿಎಂ ಆಗಿದ್ದಾಗ ವೀಣಾಗೆ ಸೇರಿದ ಎಕ್ಸಲಾಜಿಕ್ ಸೊಲ್ಯುಶನ್ಸ್ ಎನ್ನುವ ಐಟಿ ಸಂಸ್ಥೆಗೆ ಕೊಚ್ಚಿನ್ ಮಿನರಲ್ಸ್ ಅಂಡ್ ರೂಟೈಲ್ ಲಿಮಿಟೆಡ್ ಎನ್ನುವ ಸರ್ಕಾರಿ ಸಂಸ್ಥೆಯಿಂದ ಅಕ್ರಮವಾಗಿ ಪ್ರತಿ ತಿಂಗಳು 1.7 ಕೋಟಿಯಷ್ಟು ಮೊತ್ತದ ಹಣ ಸಂದಾಯವಾಗಿದೆ ಎನ್ನುವ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶ ಮಾಡಿದೆ. ಆಗ ಮುಖ್ಯಮಂತ್ರಿಯಾಗಿದ್ದ ಪಿಣರಾಯಿ ವಿಜಯನ್, ಪುತ್ರಿ ವೀಣಾ ಮತ್ತು ಆಕೆಯ ಪತಿ ಮತ್ತು ಸಿಪಿಎಂ ರಾಜ್ಯ ಸೆಕ್ರಟರಿಯಾಗಿರುವ ಮೊಹಮ್ಮದ್ ರಿಯಾಸ್ ಹಾಗೂ ಇತರರ ವಿರುದ್ಧ ತನಿಖೆಗೆ ಆದೇಶ ಮಾಡಿದೆ.
ಐಟಿ ಮತ್ತು ಇಡಿ ಅಧಿಕಾರಿಗಳ ವರದಿ ಆಧರಿಸಿ ಎಫ್ಐಆರ್ ದಾಖಲಿಸದೆ ಕ್ರೈಂ ಬ್ರಾಂಚ್ ಪೊಲೀಸರಿಂದ ಪ್ರಾಥಮಿಕ ತನಿಖೆಗೆ ಆದೇಶ ಮಾಡಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಚುತಾನಂದನ್ ಅವರಿಗೆ ಖಾಸಗಿ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ ಕೆ.ಎಂ.ಶಹಜಹಾನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಪಿಣರಾಯಿ ವಿಜಯನ್ ಮೊದಲ ಅವಧಿಯಲ್ಲಿ ಸಿಎಂ ಆಗಿದ್ದಾಗ ಅಧಿಕಾರ ದುರುಪಯೋಗಪಡಿಸಿ ಪುತ್ರಿ ವೀಣಾಗೆ ಸೇರಿದ ಎಕ್ಸಲಾಜಿಕ್ ಸೊಲ್ಯುಶನ್ಸ್ ಸಂಸ್ಥೆಗೆ ಸಿಎಂಆರ್ ಎಲ್ ಕಂಪನಿಯಿಂದ 2.78 ಕೋಟಿ ರೂಪಾಯಿ ಪಾವತಿಯಾಗಿದ್ದನ್ನು ಐಟಿ ಅಧಿಕಾರಿಗಳು ಪತ್ತೆ ಮಾಡಿದ್ದರು. ಸಿಎಂಆರ್ ಎಲ್ ಕಂಪನಿಯು ಯಾವುದೇ ಸೇವೆ ನೀಡಿರದಿದ್ದರೂ ಸಿಎಂ ಕುಟುಂಬದ ಐಟಿ ಕಂಪನಿಗೆ ಹಣ ಪಾವತಿ ಮಾಡುವ ಮೂಲಕ ಭ್ರಷ್ಟಾಚಾರ ಎಸಗಿದ್ದು ಮೇಲ್ನೋಟಕ್ಕೆ ಪತ್ತೆಯಾಗಿತ್ತು. ಈ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸಿ ಅಕ್ರಮ ಹಣ ವರ್ಗಾವಣೆಯೆಂದು ಘೋಷಿಸಿದ್ದರು. ಇದಲ್ಲದೆ, ಇಡಿಯವರು ವಿಜಯನ್ ಅವರಿಗೆ ಸೇರಿದ ಕೋಜಿಕ್ಕೋಡ್ ಜಿಲ್ಲೆಯ ಎಂಟು ಕಡೆಗಳಿಗೆ ದಾಳಿ ನಡೆಸಿ ಹವಾಲಾ ರೂಪದಲ್ಲಿ ಅಕ್ರಮ ಹಣ ವರ್ಗಾವಣೆ ಆಗಿದ್ದನ್ನು ಪತ್ತೆ ಮಾಡಿದ್ದರು.
ಇಡಿ ವರದಿ ಪ್ರಕಾರ, ಸಿಎಂ ಆಗಿದ್ದ ವಿಜಯನ್ ಅವರು ಪುತ್ರಿ ವೀಣಾ ಮೂಲಕ ಸಿಎಂಆರ್ ಎಲ್ ಕಂಪನಿಯಿಂದ 3.28 ಕೋಟಿ ರೂ. ಹಣವನ್ನು ಭ್ರಷ್ಟಾಚಾರದ ರೂಪದಲ್ಲಿ ಪಡೆದಿದ್ದರು. ಅಲ್ಲದೆ, ಸಿಎಂಆರ್ ಎಲ್ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ, ಸಚಿವರಾಗಿದ್ದ ಮೊಹಮ್ಮದ್ ರಿಯಾಸ್ ಅವರು ದುಬೈಗೆ ಹಣವನ್ನು ತಲುಪಿಸಲು ನೆರವಾಗಿದ್ದರೆಂದು ಮಾಹಿತಿ ನೀಡಿದ್ದಾಗಿ ವರದಿ ತಿಳಿಸಿತ್ತು. ಎಕ್ಸಲಾಜಿಕ್ ಸೊಲ್ಯುಶನ್ ಸಂಸ್ಥೆಯ ಹಿರಿಯ ಅಧಿಕಾರಿಗಳ ವಿರುದ್ಧವೂ ಎಫ್ಐಆರ್ ದಾಖಲಿಸಲು ಇಡಿ ಸೂಚಿಸಿತ್ತು. ಆದರೆ ವಿಜಯನ್ ತನ್ನ ಮತ್ತು ಕುಟುಂಬದ ಮೇಲಿನ ಭ್ರಷ್ಟಾಚಾರ ಆರೋಪವನ್ನು ನಿರಾಕರಿಸಿದ್ದರು.
ಲಾವಲಿನ್ ಹಗರಣದಲ್ಲಿ ಸಿಬಿಐ ತನಿಖೆಗೀಡಾಗಿದ್ದ ವಿಜಯನ್
ದೀರ್ಘ ಕಾಲದ ಸಕ್ರಿಯ ರಾಜಕಾರಣದಲ್ಲಿರುವ ಪಿಣರಾಯಿ ವಿಜಯನ್ ಮೇಲೆ ಇದು ಎರಡನೇ ಬಾರಿ ದೊಡ್ಡ ಮಟ್ಟದ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಈ ಹಿಂದೆ ಸಿಬಿಐ ಅಧಿಕಾರಿಗಳು ಪಿಣರಾಯಿ ಅವರನ್ನು 1995-97ರಲ್ಲಿ ಇಂಧನ ಸಚಿವರಾಗಿದ್ದ ವೇಳೆ ಎಸ್ಎನ್ ಸಿ ಲಾವಲಿನ್ ಹಗರಣ ನಡೆಸಿದ್ದ ವಿಚಾರದಲ್ಲಿ ತನಿಖೆಗೊಳಪಡಿಸಿದ್ದರು. ಇವರ ಅವಧಿಯಲ್ಲಿ ಕೇರಳದಲ್ಲಿರುವ ಜಲವಿದ್ಯುತ್ ಯೋಜನೆಗಳನ್ನು ನವೀಕರಣಗೊಳಿಸುವ ನೆಪದಲ್ಲಿ ಕೆನಡಾ ಮೂಲದ ಎಸ್ಎನ್ ಸಿ ಲಾವಲಿನ್ ಕಂಪನಿಗೆ ಗುತ್ತಿಗೆ ಕೊಟ್ಟಿದ್ದು ಅದರಿಂದಾಗಿ ರಾಜ್ಯಕ್ಕೆ 370 ಕೋಟಿ ರೂಪಾಯಿ ನಷ್ಟ ಆಗುವಂತಾಗಿತ್ತು.
ಲಾವಲಿನ್ ಹಗರಣ ವಿಚಾರದಲ್ಲಿ 2006ರಲ್ಲಿ ಉಮ್ಮನ್ ಚಾಂಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಜಯನ್ ವಿರುದ್ಧ ಸಿಬಿಐ ತನಿಖೆಗೆ ಆದೇಶ ಮಾಡಿದ್ದರು. ಸಿಬಿಐ ತನಿಖೆ ನಡೆಸಿ ವಿಜಯನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರೂ, ಕೇರಳ ಹೈಕೋರ್ಟ್ ವೈಯಕ್ತಿಕವಾಗಿ ಪಿಣರಾಯಿ ವಿಜಯನ್ ಹಣಕಾಸು ಲಾಭ ಪಡೆದಿದ್ದಾರೆ ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿಲ್ಲವೆಂದು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರೂ, ದೀರ್ಘ ಕಾಲದಿಂದ ಅರ್ಜಿ ಇತ್ಯರ್ಥವಾಗದೆ ಬಾಕಿ ಉಳಿದಿದೆ. ಇದೀಗ ಮತ್ತೊಂದು ಹಗರಣ ವಿಜಯನ್ ಕೊರಳಿಗೆ ಸುತ್ತಿಕೊಂಡಿದೆ.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
09-10-26 05:40 pm
HK News Staffer
Prakash Raj, Dhruv Rathee: SIR ರದ್ದತಿಗೆ ಬೆಂಗಳ...
08-10-26 08:03 pm
ಭಾರತೀಯ ಪೈಲಟ್ ಸಾಹಸಕ್ಕೆ ಅಮೆರಿಕ ಸಂಸತ್ ಗೌರವ ; 17...
07-10-26 01:10 pm
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
08-10-26 04:30 pm
HK News Staffer
Santhosh laad, Araga jnanendra ಕಾರ್ಮಿಕ ಇಲಾಖೆಯ...
08-10-26 04:27 pm
ಆಟೋದಲ್ಲಿ 48 ಗ್ರಾಂ ಚಿನ್ನ ಬಿಟ್ಟುಹೋದ ಮಹಿಳೆ ; ‘ಚಿ...
08-10-26 12:06 pm
Kural Tulu Touch, Tulu lipi: ತುಳು ಲಿಪಿಗೆ ಡಿಜಿ...
07-10-26 02:39 pm
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
09-10-26 05:37 pm
HK News Staffer
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm
Nisha Raphael, POCSO: 11 ವರ್ಷದ ಬಾಲಕನ ಮೇಲೆ ಲೈಂ...
09-10-26 03:23 pm
Albert Rego, Body Exhume, Mangalore: ಆಸ್ತಿಗಾಗ...
09-10-26 10:01 am
ದಾಂಡಿಯಾ ಹೆಸರಿನಲ್ಲಿ ಅಸಭ್ಯ ನೃತ್ಯ, ಫ್ಯಾಷನ್ ಶೋ, ಪ...
08-10-26 08:44 pm