ಬ್ರೇಕಿಂಗ್ ನ್ಯೂಸ್
18-11-26 07:27 pm HK News Staffer ಕರಾವಳಿ
ಮಂಗಳೂರು, ನ.18: ರೆಸ್ಟೋರೆಂಟ್ ಹಾಗೂ ಹೊಟೇಲ್‌ಗಳಲ್ಲಿ ಬಳಸಿದ ಅಡುಗೆ ತೈಲದ ಮರು ಬಳಕೆ ತಡೆಯಲು ಅಂತಹ ತೈಲಗಳನ್ನು ಕಂಪನಿಗಳಿಗೆ ಮಾರಾಟ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಇದು ಇನ್ನು ಮೂರು ತಿಂಗಳಲ್ಲಿ ಕಾರ್ಯಗತವಾಗಲಿದ್ದು, ಮಂಗಳೂರು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಬರಲಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು, ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಆ್ಯಪ್ ರೂಪಿಸಲಾಗುತ್ತಿದೆ. ಅಡುಗೆಗೆ ಬಳಕೆಯಾದ ತೈಲವನ್ನು ಆಯಾ ಹೊಟೇಲ್ ಹಾಗೂ ರೆಸ್ಟೋರೆಂಟ್‌ಗಳು ಆ್ಯಪ್ ಮೂಲಕ ಕಂಪನಿಗಳನ್ನು ಸಂಪರ್ಕಿಸಿ ತಮ್ಮಲ್ಲಿರುವ ಬಳಕೆಯಾದ ತೈಲವನ್ನು ಮಾರಾಟ ಮಾಡಲು ಅವಕಾಶ ಇದೆ. ಕಂಪನಿಗಳಿಗೆ ಈ ಬಗ್ಗೆ ಸರ್ಕಾರವೇ ಅನುಮತಿ ನೀಡಲಿದೆ. ಆ್ಯಪ್ ಮೂಲಕ ಮಾರಾಟ ಮಾಡಿದರೆ, ಆಗ ಅಡುಗೆಗೆ ಬಳಕೆಯಾಗುವ ತೈಲದ ಪ್ರಮಾಣವನ್ನು ನಿರ್ಧರಿಸುವುದು ಸುಲಭವಾಗುತ್ತದೆ. ಇದರಿಂದ ಹೊಟೇಲ್, ರೆಸ್ಟೋರೆಂಟ್‌ಗಳಿಗೂ ಆದಾಯ ಸಿಗುತ್ತದೆ ಎಂದರು.
ಮರು ಬಳಕೆಯ ತೈಲವನ್ನು ಬಯೋ ಡೀಸೆಲ್ ಕಂಪನಿ, ಏವಿಯೇಷನ್ ಕಂಪನಿ ಹಾಗೂ ಸೋಪು ತಯಾರಿಕಾ ಕಂಪನಿಗಳು ಉತ್ಪನ್ನಗಳ ತಯಾರಿಕೆಗೆ ಬಳಸುತ್ತವೆ. ಅಲ್ಲದೆ ಧಾರ್ಮಿಕವಾಗಿ ದೀಪ ಉರಿಸಲು ತೈಲದ ಬೇಡಿಕೆ ಇದ್ದು, ಇಂತಹ ಬಳಕೆಯಾದ ತೈಲವನ್ನು ಪೂರೈಸುವ ಬದಲು ಪರ್ಯಾಯ ಏನು ಮಾಡಬಹುದು ಎಂಬ ಬಗ್ಗೆ ಆಲೋಚಿಸಲಾಗುತ್ತಿದೆ ಎಂದರು.
ಏವಿಷೇಯನ್ ಕಂಪನಿಗಳಿಗೆ ಮರು ಬಳಕೆ ತೈಲ ಪೂರೈಸಲು ಅನುಕೂಲವಾಗಲು ಕೇಂದ್ರ ಸರ್ಕಾರ ಆಮದಿನಲ್ಲಿ ಸಡಿಲ ನೀತಿ ಅನುಸರಿಸುವಂತೆ ಕೋರಿ ಪತ್ರ ಬರೆಯಲಾಗುವುದು. ಇದರಿಂದ ಹೊರ ದೇಶಗಳೂ ಇಂತಹ ತೈಲ ಖರೀದಿಗೆ ಸಾಧ್ಯವಾಗುತ್ತದೆ ಎಂದು ಖಾದರ್ ಹೇಳಿದರು. ಮುಂದಿನ ಹಂತದಲ್ಲಿ ಮನೆಯಲ್ಲಿ ಬಳಕೆಯಾದ ತೈಲಕ್ಕೂ ಇದೇ ರೀತಿಯ ಖರೀದಿ ಯೋಜನೆ ರೂಪಿಸಲು ಚಿಂತಿಸಲಾಗಿದೆ ಎಂದರು.
25ರಂದು ರಕ್ತದಾನ ಶಿಬಿರ
ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು ನ. 25 ರಂದು ರಕ್ತದಾನ ಶಿಬಿರ ಆಯೋಜಿಸಲು ನಿರ್ಧರಿಸಲಾಗಿದೆ. ಪ್ರತಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ರಕ್ತದಾನ ಶಿಬಿರ ನಡೆಸಲಾಗುವುದು. ಬೇಕಾದಷ್ಟು ರಕ್ತ ಸಿಗುವಂತಾಗಲು ರಕ್ತಸಂಗ್ರಹಕ್ಕೆ ಗುರಿ ನಿಗದಿಪಡಿಸಲಾಗುವುದು. 12 ವರ್ಷ ಮೇಲ್ಪಟ್ಟವರಿಗೆ ರಕ್ತದಾನ ಮಾಡುವಂತೆ ಪ್ರೇರೇಪಿಸಲಾಗುವುದು ಎಂದರು.
ಆರೋಗ್ಯ ಕ್ಷೇತ್ರಕ್ಕೆ ವಿದೇಶಿ ಹೂಡಿಕೆ ಬೇಡ
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರ ಪಟ್ಟಿ ಪ್ರದರ್ಶನಕ್ಕೆ ಸೂಚನೆ ನೀಡಲಾಗಿದ್ದು, ಇದನ್ನು ಪಾಲಿಸುವ ಖಾಸಗಿ ಆಸ್ಪತ್ರೆಯನ್ನೇ ರಾಜ್ಯಕ್ಕೆ ಮಾದರಿಯಾಗಿ ಪ್ರಚುರಪಡಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು. ಆರೋಗ್ಯ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಬಾರದು. ಈಗಾಗಲೇ ರಾಜ್ಯದ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ವಿದೇಶಿ ಕಂಪನಿಗಳ ಕೈಯಲ್ಲಿವೆ. ಹೀಗಾಗಿ ಸಾಮಾನ್ಯರು ಕೂಡ ಆರೋಗ್ಯಕ್ಕಾಗಿ ಲಕ್ಷಗಟ್ಟಲೆ ಖರ್ಚು ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದರು.
ಆಸ್ಪತ್ರೆಗಳ ವಿರುದ್ಧ ದೂರಿಗೆ ಟೋಲ್‌ಫ್ರೀ ನಂಬರ್
ಆಯುಷ್ಮಾನ್ ಆರೋಗ್ಯ ಮಿತ್ರ ಯೋಜನೆ ಇದ್ದೂ ಕಾರ್ಯ ನಿರ್ವಹಿಸದ ಆಸ್ಪತ್ರೆಗಳ ವಿರುದ್ಧ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಆರೋಗ್ಯ ಮಿತ್ರರು ರೋಗಿಗಳ ಪರವಾಗಿ ಕೆಲಸ ಮಾಡಬೇಕಿದ್ದು, ಈ ಬಗ್ಗೆ ದೂರು ನೀಡಲು ಶೀಘ್ರವೇ ಟೋಲ್‌ಫ್ರೀ ನಂಬರ್ ತೆರೆಯಲಾಗುವುದು ಎಂದರು.
ಆಶಾ ಬೇಡಿಕೆ ಈಡೇರಿಕೆ ಯತ್ನ
ಬೆಂಗಳೂರಲ್ಲಿ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದೆ. ಅವರಿಗೆ ಕನಿಷ್ಠ ವೇತನ ನೀಡುವ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಅವರ ಜೊತೆ ಸರ್ಕಾರ ಇದೆ ಎಂದರು.
ಬಿಜೆಪಿ ಅವಧಿಯಲ್ಲೂ ಸೈನಿಕ ತರಬೇತಿ ಇತ್ತು
ಅಲ್ಪಸಂಖ್ಯಾತರಿಗೆ ಸೈನಿಕ ತರಬೇತಿ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಆಯಾ ಇಲಾಖೆಗಳು ಸರ್ಕಾರದ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿವೆ. ಅದೇ ರೀತಿ ಸೈನಿಕರ ಉದ್ಯೋಗಕ್ಕೆ ಸೇರುವ ಮುನ್ನ ತರಬೇತಿ ನೀಡುವ ಕಾರ್ಯಕ್ರಮ ಬಿಜೆಪಿ ಸರ್ಕಾರದ ಅವಧಿಯಲ್ಲೂ ಇತ್ತು ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರಾದ ಯು.ಟಿ.ಖಾದರ್ ಹೇಳಿದರು.
ಇಂತಹ ಯೋಜನೆ ಹಿಂದುಳಿದ ವರ್ಗ, ಎಸ್‌ಸಿ ಎಸ್‌ಟಿ ಇಲಾಖೆಗಳಲ್ಲೂ ಇದೆ. ಇಲ್ಲಿ ತರಬೇತಿ ಪಡೆದ ಬಳಿಕ ಸೇನೆಗೆ ಸೇರ್ಪಡೆ ವೇಳೆ ಅವರಿಗೆ ಸುಲಭವಾಗುತ್ತದೆ. ಸೇನೆಗೆ ಸೇರ್ಪಡೆ ವೇಳೆ ಜಾತಿ, ಧರ್ಮವನ್ನು ನೋಡಿ ಸೇರಿಸುವುದಿಲ್ಲ. ಮಾಹಿತಿ ಗೊತ್ತಿಲ್ಲದೆ, ಅಥವಾ ತಿಳಿದುಕೊಳ್ಳಲು ಆಸಕ್ತಿ ಇಲ್ಲದೆ ಹಿಂದು ಸಂಘಟನೆಗಳು, ಬಿಜೆಪಿಗರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.
ನಾನು ಮೈಸೂರಿನ ಟಿಪ್ಪು ಸುಲ್ತಾನ್ ಸಮಾಧಿ ಜಾಗಕ್ಕೆ ಸಚಿವನಾಗಿ, ಪ್ರವಾಸಿಯಾಗಿಯೂ ತೆರಳಿದ್ದೇನೆ. ಅದೇ ರೀತಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೂ ಭೇಟಿ ನೀಡಿದ್ದೆ. ಅಲ್ಲಿಗೆ ಭೇಟಿ ನೀಡಿದಾಕ್ಷಣ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಹೊರಟಿದೆ ಎಂದು ತಪ್ಪು ಪ್ರಚಾರ ನಡೆಸಲಾಗುತ್ತಿದೆ ಎಂದರು.
18-11-26 07:26 pm
HK News Staffer
ರೇಸ್ ಕೋರ್ಸ್ ವ್ಯಾಪ್ತಿಯ 79 ಎಕರೆ ಸರ್ಕಾರದ ವಶಕ್ಕೆ...
18-11-26 05:38 pm
ಕೆಪಿಎಸ್ಸಿ ಅಕ್ರಮ ನೇಮಕಾತಿ ಹಗರಣ ; ಆಯೋಗದ ಅಧ್ಯಕ್ಷ...
17-11-26 12:09 pm
ಆಟವಾಡುತ್ತಿದ್ದ ವೇಳೆ ದುರಂತ ; ಬಿಸಿ ಕೆಮಿಕಲ್ ಬಕೆಟ್...
14-11-26 09:24 pm
'ಕಾಸ್ಮೋಸ್ ಮೈಸೂರು' ದೇಶದ ಮೊದಲ ಎಲ್ಇಡಿ ಡೋಮ್ ತಾರಾಲ...
13-11-26 10:13 pm
16-11-26 10:56 pm
Mangaluru Staffer
ಝಾಕಿರ್ ನಾಯ್ಕ್ 'ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್' ಮೇ...
14-11-26 10:00 am
ಚೀನಾ ಗೂಢಚಾರಿಣಿ ಬಲೆಗೆ ಎನ್ವಿಡಿಯಾ ಸಿಇಒ? ವಿವಾಹೇತ...
09-11-26 04:45 pm
ಯುದ್ಧ ನಿಲ್ಲಿಸಿ ಸಂಧಾನಕ್ಕೆ ಬನ್ನಿ.. ಇಲ್ಲದಿದ್ದರೆ...
09-11-26 11:51 am
ಇಸ್ರೇಲ್ ಅಧಿಪತ್ಯ ಪಡೆಯಲು ನೆತನ್ಯಾಹು ಸೋಲು ; ಹೊಸ ಸ...
29-10-26 09:28 pm
18-11-26 07:27 pm
HK News Staffer
Bolas Factory Raid, Mangalore: ಗ್ರಾಹಕರನ್ನು ದಾ...
18-11-26 01:18 pm
Ideal Icecream Raid, Mangalore: ಕೊಲ್ಯ ಐಡಿಯಲ್...
17-11-26 08:15 pm
ಸೌಜನ್ಯಾ ಪ್ರಕರಣ ; ಮೂವರು ತಜ್ಞ ವೈದ್ಯರ ಕಮಿಟಿ ರಚನೆ...
17-11-26 06:42 pm
ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣ ; ರೆಕಾರ್ಡ್ ಮಾಡಿದ್ದ...
17-11-26 03:15 pm
18-11-26 07:20 pm
HK News Staffer
ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ...
18-11-26 12:46 pm
ಬಂಟ್ವಾಳದಲ್ಲಿ ವ್ಯಾಪಾರಿ ಅಡ್ಡಗಟ್ಟಿ ಎಂಟು ಲಕ್ಷ ದರೋ...
18-11-26 12:36 pm
ಕೇರಳದಲ್ಲಿ ಟ್ರಾಫಿಕ್ ಉಲ್ಲಂಘನೆ ದಂಡ ; ಇ-ಚಲನ್ ಏಪ್...
16-11-26 09:56 pm
ಮೊಟ್ಟೆ ಸಾಗಾಟ ನೆಪದಲ್ಲಿ ಕೇರಳಕ್ಕೆ ಜಾನುವಾರು ಸಾಗಣೆ...
16-11-26 04:31 pm