Bolas Factory Raid, Mangalore: ಗ್ರಾಹಕರನ್ನು ದಾರಿತಪ್ಪಿಸಿದ ಬೋಳಾಸ್ ! ಕೋಲ್ಡ್ ಪ್ರೆಸ್ಡ್ ಆಯಿಲ್ ಹೆಸರಲ್ಲಿ ಮಿಸ್ ಬ್ರ್ಯಾಂಡಿಂಗ್, 1240 ಕೇಜಿ ಕಡಲೆ ಕಾಯಿ ಎಣ್ಣೆ ವಶಕ್ಕೆ

18-11-26 01:18 pm       HK News Staffer   ಕರಾವಳಿ

ಗ್ರಾಹಕರನ್ನು ದಾರಿತಪ್ಪಿಸಿ ಸಾಮಾನ್ಯ ಕಡಲೆಕಾಯಿ ಎಣ್ಣೆಯನ್ನು ಕೋಲ್ಡ್ ಪ್ರೆಸ್ಡ್ ಓಯಿಲ್ (ಅಡುಗೆ ಎಣ್ಣೆ) ಎಂದು ಪ್ಯಾಕ್ ಮಾಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಬೈಕಂಪಾಡಿಯ ‘ಬೋಲಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಆಹಾರೋತ್ಪನ್ನ ಘಟಕದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮಂಗಳೂರು, ನ.18; ಗ್ರಾಹಕರನ್ನು ದಾರಿತಪ್ಪಿಸಿ ಸಾಮಾನ್ಯ ಕಡಲೆಕಾಯಿ ಎಣ್ಣೆಯನ್ನು ಕೋಲ್ಡ್ ಪ್ರೆಸ್ಡ್ ಓಯಿಲ್ (ಅಡುಗೆ ಎಣ್ಣೆ) ಎಂದು ಪ್ಯಾಕ್ ಮಾಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಬೈಕಂಪಾಡಿಯ ‘ಬೋಲಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಆಹಾರೋತ್ಪನ್ನ ಘಟಕದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ಮಿಸ್ ಬ್ರ್ಯಾಂಡಿಂಗ್ ಹಾಗೂ ಲೇಬಲ್ ಲೋಪಗಳನ್ನು ಎಸಗುತ್ತಿದ್ದುದನ್ನು ಪತ್ತೆ ಮಾಡಿದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಬರೋಬ್ಬರಿ 1,240 ಕೆ.ಜಿ. ಅಡುಗೆ ಎಣ್ಣೆಯನ್ನು ವಶಪಡಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಕಚ್ಚಾ ಕಡಲೆಕಾಯಿ ಎಣ್ಣೆಯನ್ನು ತರಿಸಿ, ಅದನ್ನು ‘ಕೋಲ್ಡ್ ಪ್ರೆಸ್ಡ್ ಕಡಲೆಕಾಯಿ ಎಣ್ಣೆ’ (Cold Pressed Groundnut Oil) ಎಂದು ರೀಪ್ಯಾಕ್ ಮಾಡಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಗ್ರಾಹಕರನ್ನು ದಾರಿತಪ್ಪಿಸಿ ಹೆಚ್ಚಿನ ಹಣ ಪೀಕಿಸುವ ಕೃತ್ಯ ಇದಾಗಿದ್ದು ಅಧಿಕಾರಿಗಳು ಜಪ್ತಿ ಕ್ರಮ ಕೈಗೊಂಡಿದ್ದಾರೆ. 

ಬೋಲಾಸ್ ಆಗ್ರೋ ಘಟಕದಿಂದ ಒಟ್ಟು ವಿವಿಧ ಮಾದರಿಯ 1,240 ಕೆ.ಜಿ. ತೂಕದ ಅಡುಗೆ ಎಣ್ಣೆ ದಾಸ್ತಾನನ್ನು ವಶಕ್ಕೆ ಪಡೆಯಲಾಗಿದೆ. 

ಕಡಲೆಕಾಯಿ ಎಣ್ಣೆ ಪ್ರತಿ ಬಾಕ್ಸ್‌ನಲ್ಲಿ 10 ಕೆ.ಜಿ.ಯಂತೆ ಒಟ್ಟು 11 ಬಾಕ್ಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲ, ಪ್ರತಿ ಕ್ಯಾನ್‌ಗೆ 35 ಲೀಟರ್‌ನಂತೆ ಒಟ್ಟು 30 ಕ್ಯಾನ್‌ಗಳಲ್ಲಿ ಕಡಲೆಕಾಯಿ ಎಣ್ಣೆ ವಶಕ್ಕೆ ಪಡೆದಿದ್ದಾರೆ. ಮತ್ತೊಂದು ತಲಾ 20 ಕೇಜಿಯುಳ್ಳ ನಾಲ್ಕು ಬಾಕ್ಸ್ ಗಳನ್ನು ವಶಕ್ಕೆ ಪಡೆಯಲಾಗಿದೆ.

A case has been registered against the food processing unit of Bolas Agro Private Limited at Baikampady for allegedly misleading consumers by packaging and selling ordinary groundnut oil as cold-pressed groundnut oil at a higher price.