PM Modi's Independence Day Speech 2020: ಶೀಘ್ರದಲ್ಲೇ ಕೊರೊನಾಗೆ ತ್ರಿವಳಿ ಲಸಿಕೆ

15-08-20 09:53 am       Headline Karnataka News Network   ದೇಶ - ವಿದೇಶ

74ನೇ ಸ್ವಾತಂತ್ರೋತ್ಸವ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಭಾಷಣದ ಮುಖ್ಯಾಂಶಗಳು ಇಲ್ಲಿವೆ.

ನವದೆಹಲಿ, ಆಗಸ್ಟ್ 15: ದೇಶದ 74ನೇ ಸ್ವಾತಂತ್ರೋತ್ಸವ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು ‘ಆತ್ಮ ನಿರ್ಭರ ಭಾರತ’, ರಕ್ಷಣೆ, ಕೃಷಿ ಕ್ಷೇತ್ರಗಳಲ್ಲಿ ಸ್ವಾವಲಂಬನೆ, ಮಹಿಳಾ ಸಬಲೀಕರಣ, ಅಂತರರಾಷ್ಟ್ರೀಯ ಬಾಂಧವ್ಯ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಮೋದಿ ಅವರು ಸ್ವಾತಂತ್ರ್ಯೋತ್ಸವ ದಿನದಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿರುವುದು ಇದು 7ನೇ ಬಾರಿ. ಭಾಷಣದ ಮುಖ್ಯಾಂಶಗಳು ಇಲ್ಲಿವೆ.


  • ಎಷ್ಟು ದಿನಗಳವರೆಗೆ ಕಚ್ಚಾ ವಸ್ತುಗಳನ್ನು ರಫ್ತು ಮಾಡಿ, ಸಿದ್ಧವಸ್ತುಗಳನ್ನು ಆಮದು ಮಾಡಿಕೊಳ್ಳಬೇಕು, ಇದಕ್ಕೊಂದು ಅಂತ್ಯ ಬೇಕಿದೆ, ಆತ್ಮ ನಿರ್ಭರ ಭಾರತದಡಿ ದೇಶವನ್ನು ಸ್ವಾವಲಂಬಿಯಾಗಿಸಲು ಪಣ ತೊಡಬೇಕಿದೆ.
  • ಆತ್ಮ ನಿರ್ಭರ ಭಾರತ ಎನ್ನುವುದು 130 ಕೋಟಿ ಜನರ ಮಂತ್ರವಾಗಿದೆ
  • ಇಡೀ ವಿಶ್ವವೇ ಒಂದು ಕುಟುಂಬ ಎಂದು ಭಾರತ ನಂಬಿದೆ. ನಾವು ಆರ್ಥಿಕತೆ ಮತ್ತು ಅಭಿವೃದ್ಧಿ ಕಡೆಗೆ ಗಮನಹರಿಸುವಾಗ ಮಾನವೀಯತೆಯನ್ನು ಬಿಡಬಾರದು
  • ಕೆಲವು ತಿಂಗಳ ಹಿಂದೆ ಎನ್ 95 ಮಾಸ್ಕ್ ಆಮದು ಮಾಡಿಕೊಳ್ಳಲಾಗುತ್ತಿತ್ತು, ಉದ್ಯಮಿಗಳ ಸಹಕಾರದಿಂದ ಈಗ ನಮ್ಮಲ್ಲೇ ತಯಾರಿಸಿ ಬೇರೆ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ.
  • ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಶೇ.18ರಷ್ಟು ಹೆಚ್ಚಳವಾಗಿದೆ-ಕೊರೊನಾದಿಂದ ವಿಶ್ವದ ಆರ್ಥಿಕತೆ ಸ್ಥಬ್ಧವಾಗಿದೆ,ಆದರೆ ಭಾರತ ಆತ್ಮ ನಿರ್ಭರ ಭಾರತ ಇದೊಂದು ಅವಕಾಶವೆಂದು ತಿಳಿದಿವೆ, ಸಮಗ್ರ ವಿಶ್ವಕ್ಕೂ ಭಾರತ ತನ್ನ ಕೊಡುಗೆ ನೀಡುವ ಸಂದರ್ಭ ಬಂದಿದೆ.
  • ವಿಶ್ವಕ್ಕೆ ಭಾರತವು ರಫ್ತು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಆದರೆ ನಮ್ಮಲ್ಲಿರುವ ಕಚ್ಚಾ ವಸ್ತುಗಳಿಗೆ ಪಕ್ಕಾ ರೂಪ ನೀಡಿ ರಫ್ತು ಮಾಡುವ ಕೌಶಲ್ಯ ತೋರಬೇಕಿದೆ.
  • ಭಾರತದ ಗಡಿಯಲ್ಲಿ 1 ಲಕ್ಷ ಎನ್‌ಸಿಸಿ ಕೆಡೆಟ್ಸ್‌ಗಳನ್ನು ನಿಯೋಜನೆ ಮಾಡಲಾಗುತ್ತದೆ, ಹೆಣ್ಣುಮಕ್ಕಳಿಗೆ ಆಧ್ಯತೆ.
  • ಶತಕಗಳ ಕಾಲ ವಿವಾದದ ಸುಳಿಯಲ್ಲಿದ್ದ ರಾಮ ಮಂದಿರ ವಿಚಾರವು ಶಾಂತಿಪೂರ್ವಕವಾಗಿ ಬಗೆಹರಿದಿದೆ ದೇಶದ ಜನ ನಡೆದುಕೊಂಡ ರೀತಿಯು ಭವಿಷ್ಯದಲ್ಲಿ ಮಾದರಿಯಾಗಿ ದಾಖಲಾಗಿರಲಿದೆ.
  • ಜಮ್ಮು ಕಾಶ್ಮೀರದಲ್ಲಿ ಶೀಘ್ರವೇ ಕ್ಷೇತ್ರ ಮರುವಿಂಗಡಣೆ ಪೂರ್ಣಗೊಳ್ಳಲಿದ್ದು, ಜನರಿಂದ ಆಯ್ಕೆಯಾದ ಸರ್ಕಾರ ಕಾರ್ಯ ನಿರ್ವಹಿಸಲಿವೆ.
  • ಭಾರತದಲ್ಲಿ ಸುಮಾರು 1300 ದ್ವೀಪಗಳನ್ನು ಗುರುತಿಸಲಾಗಿದ್ದು, ಅದರ ಅಭಿವೃದ್ಧಿಗೆ ನೀಲನಕ್ಷೆ ರೂಪಿಸಲಾಗುತ್ತಿದೆ.
  • ಎಲ್‌ಎಸಿಯಿಂದ ಎಲ್‌ಒಸಿವರೆಗೂ ನಮ್ಮೆಡೆಗೆ ದೃಷ್ಟಿ ಹಾಯಿಸಿಲು ಯತ್ನಿಸಿದವರಿಗೆ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ.
  • ಇವತ್ತಿನಿಂದ ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಆರಂಭಿಸುತ್ತಿದ್ದೇವೆ. ಇದು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಲಿದೆ
  • ಭಾರತದಲ್ಲಿ ಮೂರು ಕೊರೊನಾ ಲಸಿಕೆಗಳ ಪ್ರಯೋಗ ನಡೆಯುತ್ತಿದ್ದು, ವಿಜ್ಞಾನಿಗಳ ಹಸಿರು ನಿಶಾನೆ ಸಿಕ್ಕ ಕೂಡಲೇ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಗೆ ತಯಾರಿ ನಡೆಸಿಕೊಳ್ಳಲಾಗುತ್ತಿದೆ
  • ವಿಕಾಸದ ಈ ಯಾತ್ರೆಯಲ್ಲಿ ಸಮಾಜದಲ್ಲಿ ಜನರು ಹಿಂದೆ ಉಳಿದುಬಿಡುತ್ತಿದ್ದಾರೆ, ಬಡತನದಿಂದಾಗಿ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಆತ್ಮ ನಿರ್ಭರ ಭಾರತವನ್ನಾಗಿಸಬೇಕು, ಹಿಂದುಳಿದ 110 ಜಿಲ್ಲೆಗಳನ್ನು ಗುರುತಿಸಿದ್ದು, ಅವುಗಳನ್ನು ಮುನ್ನಡೆಸುವ ಕುರಿತು ಆಲೋಚಿಸಲಾಗಿದೆ
  • ಮೇಕ್ ಇನ್ ಇಂಡಿಯಾ ಜೊತೆಗೆ ಮೇಕ್‌ ಫಾರ್ ವರ್ಲ್ಡ್ ಘೋಷವಾಖ್ಯದೊಂದಿಗೆ ಮುನ್ನುಗ್ಗಬೇಕಿದೆ
  • ರಾಷ್ಟ್ರೀಯ ಶಿಕ್ಷಣ ನೀತಿ, ಒಂದು ದೇಶ ಒಂದು ರೇಷನ್ ಕಾರ್ಡ್ ಯಾವುದೇ ಇರಲಿ ಪರಿವರ್ತನೆಯ ಕಾಲಘಟ್ಟವನ್ನು ವಿಶ್ವ ನೋಡುತ್ತಿದೆ
  • ಆಧುನಿಕ ಭಾರತ ನಿರ್ಮಾಣದಲ್ಲಿ ದೇಶದ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ, ರಾಷ್ಟ್ರೀಯ ಶಿಕ್ಷಣ ನೀತಿ ಎಲ್ಲಾ ವಿದ್ಯಾರ್ಥಿಗಳನ್ನು ಒಂದುಗೂಡಿಸುತ್ತದೆ ಒಂದೇ ರೀತಿಯ ಶಿಕ್ಷಣ ಪಡೆಯುತ್ತಾರೆ