ದೆಹಲಿಯಲ್ಲಿ ಐಸಿಸ್ ಉಗ್ರನ ಬಂಧನ ; ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶ

22-08-20 10:26 am       Headline Karnataka News Network   ದೇಶ - ವಿದೇಶ

ದೆಹಲಿ ಪೊಲೀಸ್ ವಿಶೇಷ ಘಟಕವು ದೆಹಲಿಯ ದೌಲಾ ಕುವಾನ್ ಪ್ರದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರನೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ಉಗ್ರನಿಂದ ಸುಧಾರಿತ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ನವದೆಹಲಿ, ಆಗಸ್ಟ್ 22: ದೆಹಲಿ ಪೊಲೀಸ್ ವಿಶೇಷ ಘಟಕವು ದೆಹಲಿಯ ದೌಲಾ ಕುವಾನ್ ಪ್ರದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರನೊಬ್ಬನನ್ನು ಬಂಧಿಸಿದ್ದಾರೆ. ಈ ಬಂಧನಕ್ಕೂ ಮುನ್ನ ಪೊಲೀಸರು ಮತ್ತು ಉಗ್ರನ ನಡುವೆ ಕೆಲ ಸಮಯ ಗುಂಡಿನ ಚಕಮಕಿ ನಡೆದಿದೆ.

ಶುಕ್ರವಾರ ರಾತ್ರಿ ನಗರದ ಹೃದಯಭಾಗದಲ್ಲಿ ಈ ಘಟನೆ ನಡೆದಿದ್ದು, ಬಂಧಿತ ಉಗ್ರನಿಂದ ಸುಧಾರಿತ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಐಸಿಸ್ ಉಗ್ರನನ್ನು ಅಬ್ದುಲ್ ಯೂಸುಫ್ ಎಂದು ಗುರುತಿಸಲಾಗಿದೆ. ಆತ ದೆಹಲಿಯ ವಿವಿಧ ಪ್ರದೇಶಗಳನ್ನು ಗುರಿಯಾಗಿರಿ ದಾಳಿಗಳನ್ನು ನಡೆಸಲು ಹೊಂಚು ಹಾಕುತ್ತಿದ್ದ ಪ್ರಮುಖ ಸಂಚುಕೋರ ಎಂದು ಪೊಲೀಸರು ತಿಳಿಸಿದ್ದಾರೆ. ನಮ್ಮ ವಿಶೇಷ ಘಟಕವು ದೌಲಾ ಕುವಾನ್‌ನಲ್ಲಿ ಗುಂಡಿನ ಚಕಮಕಿ ನಡೆಸಿದ ಬಳಿಕ ಒಬ್ಬ ಐಸಿಸ್ ಉಗ್ರನನ್ನು ಬಂಧಿಸಿದೆ. ಆತನಿಂದ ಐಇಡಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸ್ ಉಪ ಆಯುಕ್ತ ಪ್ರಮೋದ್ ಸಿಂಗ್ ಕುಶ್ವಾಹ ತಿಳಿಸಿದ್ದಾರೆ.

ಕರೋಲ್ ಬಾಗ್ ಮತ್ತು ದೌಲಾ ಕುವಾನ್ ಪ್ರದೇಶಗಳಲ್ಲಿ ಗುಂಡಿನ ಕಾಳಗ ನಡೆದಿದೆ. ಬಂಧಿತ ಉಗ್ರ ಅಬ್ದುಲ್ ಯೂಸುಫ್ ದೆಹಲಿಯ ಕೆಲವು ಸಹಚರರೊಂದಿಗೆ ನಂಟು ಹೊಂದಿದ್ದು, ಅವರು ಆತನಿಗೆ ಅಗತ್ಯ ಉಪಕರಣಗಳನ್ನು ಸರಬರಾಜು ಮಾಡುತ್ತಿದ್ದರು. ಆತನ ಸಹವರ್ತಿಗಳಿಗೆ ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.