ಗಡಿದಾಟಿ ಬಂದದ್ದನ್ನ ಪ್ರಶ್ನಿಸಿದ್ದಕ್ಕೆ ಸೈನಿಕರ ಮೇಲೆಯೇ ಗುಂಡಿನ ದಾಳಿ ; ಪ್ರತಿದಾಳಿ ನಡೆಸಿ ಐವರ ಸಂಹಾರ

22-08-20 04:04 pm       Headline Karnataka News Network   ದೇಶ - ವಿದೇಶ

ಗಡಿದಾಟಿ ಬಂದದ್ದನ್ನ ಪ್ರಶ್ನಿಸಿದ್ದಕ್ಕೆ ಗುಂಡಿನ ದಾಳಿ ಎಸಗಿದ ಹಿನ್ನೆಲೆಯಲ್ಲಿ ಪ್ರತಿದಾಳಿ ನಡೆಸಿ ಐವರು ವ್ಯಕ್ತಿಗಳನ್ನ ಭಾರತದ ಗಡಿಭದ್ರತಾ ಪಡೆಯ ಸೈನಿಕರು ಕೊಂದುಹಾಕಿದ್ದಾರೆ. ​​​​​​​

ನವದೆಹಲಿ, ಆಗಸ್ಟ್‌ 22: ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಭಾಗದಿಂದ ಪಂಜಾಬ್ ಪ್ರದೇಶಕ್ಕೆ ಒಳನುಸುಳಿದ್ದ ಐವರು ವ್ಯಕ್ತಿಗಳನ್ನ ಭಾರತದ ಗಡಿಭದ್ರತಾ ಪಡೆಯ ಸೈನಿಕರು ಕೊಂದುಹಾಕಿದ್ದಾರೆ. 

ಗಡಿದಾಟಿ ಬಂದದ್ದನ್ನ ಪ್ರಶ್ನಿಸಿದ್ದಕ್ಕೆ ಗುಂಡಿನ ದಾಳಿ ಎಸಗಿದ ಹಿನ್ನೆಲೆಯಲ್ಲಿ ಪ್ರತಿದಾಳಿ ನಡೆಸಿ ಅವರನ್ನು ಸಾಯಿಸಲಾಯಿತು ಎಂದು ಬಿಎಸ್​ಎಫ್ ಅಧಿಕಾರಿ ತಿಳಿಸಿದ್ಧಾರೆ.

ಪಂಜಾಬ್​ನ ತರನ್ ತಾರನ್ ಸಾಹಿಬ್ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಗಡಿ ನಿಯಮ ಉಲ್ಲಂಘಿಸಿದ ವ್ಯಕ್ತಿಗಳು ಅನುಮಾನಾಸ್ಪದವಾಗಿ ಸಂಚರಿಸುತ್ತಿರುವುದು ಕಂಡ ಬಂದ ನಂತರ 103ನೇ ಬೆಟಾಲಿಯನ್ ತುಕಡಿಗಳನ್ನ ಎಚ್ಚರಿಸಲಾಯಿತು. ಅವರನ್ನ ನಿಲ್ಲಿಸಲು ಹೇಳಿದಾಗ ಆ ವ್ಯಕ್ತಿಗಳು ಬಿಎಸ್​ಎಫ್ ತುಕಡಿಗಳ ಮೇಲೆ ಗುಂಡಿನ ದಾಳಿ ನಡೆಸಿದರು. ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಲಾಯಿತು. ಆಗ ಆ ಐವರು ವ್ಯಕ್ತಿಗಳು ಸಾವನ್ನಪ್ಪಿದರು” ಎಂದು ಬಾರ್ಡರ್ ಸೆಕ್ಯೂರಿಟಿ ಫೋರ್ಸ್​ನ ಸೇನಾಧಿಕಾರಿ ವಿವರ ನೀಡಿದ್ದಾರೆ.