ಚೀನಾ ಕಂಪನಿಗಳು ಔಟ್: 44 ವಂದೇ ಭಾರತ್ ರೈಲು ಟೆಂಡರ್ ರದ್ದು

22-08-20 04:35 pm       Headline Karnataka News Network   ದೇಶ - ವಿದೇಶ

44 ವಂದೇ ಭಾರತ್ ಅರೆ ಹೈಸ್ಪೀಡ್ ರೈಲುಗಳ ಉತ್ಪಾದನೆಗಾಗಿ ಕರೆದಿದ್ದ ಟೆಂಡರ್ ರದ್ದುಪಡಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಪ್ರಕಟಿಸಿದೆ.

ಹೊಸದಿಲ್ಲಿ , ಆಗಸ್ಟ್‌ 22: 44 ವಂದೇ ಭಾರತ್ ಅರೆ ಹೈಸ್ಪೀಡ್ ರೈಲುಗಳ ಉತ್ಪಾದನೆಗಾಗಿ ಕರೆದಿದ್ದ ಟೆಂಡರ್ ರದ್ದುಪಡಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಪ್ರಕಟಿಸಿದೆ.

ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಗೆ ಆದ್ಯತೆ ನೀಡಿ ಒಂದು ವಾರದ ಒಳಗೆ ಹೊಸ ಟೆಂಡರ್ ಕರೆಯಲಾಗುವುದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಚೀನಾದ ಜಂಟಿ ಸಹಭಾಗಿತ್ವದ ಸಿಆರ್‌ಆರ್‌ಸಿ ಪ್ರವರ್ತಕ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಈ ಟೆಂಡರ್‌ನಲ್ಲಿ ಭಾಗವಹಿಸಿದ್ದ ಆರು ಕಂಪನಿಗಳ ಪೈಕಿ ಏಕೈಕ ವಿದೇಶಿ ಕಂಪನಿಯಾಗಿದ್ದು, ಸರ್ಕಾರದ ಈ ಕ್ರಮ ಚೀನಾಗೆ ದೊಡ್ಡ ಹಿನ್ನಡೆಯಾಗಿದೆ.

44 ಅರೆ ಹೈಸ್ಪೀಡ್ ರೈಲುಗಳ ಉತ್ಪಾದನೆಗೆ ಕರೆದಿದ್ದ ಟೆಂಡರ್ ರದ್ದುಪಡಿಸಲಾಗಿದೆ. ಹೊಸ ಟೆಂಡರ್‌ಗಳನ್ನು ಪರಿಷ್ಕೃತ ಸಾರ್ವಜನಿಕ ಖರೀದಿ (ಮೇಕ್ ಇನ್ ಇಂಡಿಯಾಗೆ ಆದ್ಯತೆ) ಆದೇಶಕ್ಕೆ ಅನುಸಾರವಾಗಿ ಕರೆಯಲಾಗುತ್ತದೆ ಎಂದು ರೈಲ್ವೆ ಸಚಿವಾಲಯ ಟ್ವೀಟ್ ಮಾಡಿದೆ.

ಚೀನಾದ ಸಿಆರ್‌ಆರ್‌ಸಿ, ಎಲೆಕ್ಟ್ರಿಕಲ್ ಕಂಪನಿ ಮತ್ತು ಗುರುಗ್ರಾಮದ ಪಯೋನಿಯರ್ ಫಿಲ್-ಮೆಡ್ ಪ್ರೈವೇಟ್ ಲಿಮಿಟೆಡ್ 2015ರಲ್ಲಿ ಸಹಭಾಗಿತ್ವದ ಕಂಪನಿ ರಚಿಸಿಕೊಂಡಿದ್ದವು.