ಗಣೇಶ ಚತುರ್ಥಿ ದಿನವೇ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಲಾಂಚ್ ! ನಿತ್ಯಾನಂದನ ಹೊಸ ಲೋಕ ಅಸ್ತಿತ್ವಕ್ಕೆ 

22-08-20 07:01 pm       Headline Karnataka News Network   ದೇಶ - ವಿದೇಶ

ನಿತ್ಯಾನಂದ ಆಫ್ರಿಕಾ ಖಂಡದ ಈಕ್ವೆಡಾರ್ ದೇಶದ ಬಳಿಯ ದ್ವೀಪ ಒಂದರಲ್ಲಿ ಗಣೇಶ ಚತುರ್ಥಿ ದಿನವೇ ಹೊಸ ದೇಶದ ರಿಸರ್ವ್ ಬ್ಯಾಂಕ್ ಲಾಂಚ್ ಮಾಡಿದ್ದಾನೆ. ಹೊಸ ದೇಶಕ್ಕೆ "ಕೈಲಾಸ" ಎಂದು ಹೆಸರಿಟ್ಟಿದ್ದು ಅಲ್ಲಿನ ಪ್ರಧಾನಿಯಾಗಿ ತನ್ನನ್ನೇ ಘೋಷಣೆ ಮಾಡಿಕೊಂಡಿದ್ದಾನೆ.

ಬೆಂಗಳೂರು, ಆಗಸ್ಟ್ 22: ಎರಡು ದಿನಗಳ ಹಿಂದಷ್ಟೇ ತನ್ನ ಹೊಸ ದೇಶದ ಬಗ್ಗೆ ಹೇಳಿಕೊಂಡಿದ್ದ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಆಫ್ರಿಕಾ ಖಂಡದ ಈಕ್ವೆಡಾರ್ ದೇಶದ ಬಳಿಯ ದ್ವೀಪ ಒಂದರಲ್ಲಿ ಗಣೇಶ ಚತುರ್ಥಿ ದಿನವೇ ಹೊಸ ದೇಶದ ರಿಸರ್ವ್ ಬ್ಯಾಂಕ್ ಲಾಂಚ್ ಮಾಡಿದ್ದಾನೆ. 

ಹೊಸ ದೇಶಕ್ಕೆ "ಕೈಲಾಸ" ಎಂದು ಹೆಸರಿಟ್ಟಿದ್ದು ಅಲ್ಲಿನ ಪ್ರಧಾನಿಯಾಗಿ ತನ್ನನ್ನೇ ಘೋಷಣೆ ಮಾಡಿಕೊಂಡಿದ್ದಾನೆ. 2019ರ ನವೆಂಬರ್ ನಲ್ಲಿ ಭಾರತದಿಂದ ನಾಪತ್ತೆಯಾದ ಬಳಿಕ ನಿತ್ಯಾನಂದ ಈ ಹೊಸ ದ್ವೀಪದಲ್ಲಿ ನೆಲೆಯಾಗಿದ್ದಾನೆ ಎನ್ನಲಾಗ್ತಿದೆ. ಈ ದ್ವೀಪ ಖಚಿತವಾಗಿ ಎಲ್ಲಿದೆ ಎನ್ನುವುದು ಗೊತ್ತಾಗಿಲ್ಲ. ಕೆಲವು ಮಾಧ್ಯಮಗಳ ಮಾಹಿತಿಯ ಪ್ರಕಾರ, ಈಕ್ವೆಡಾರ್ ದೇಶದ ಕರಾವಳಿ ತೀರದಲ್ಲಿರುವ ದ್ವೀಪ ಆಗಿದ್ದು ನಿತ್ಯಾನಂದ ಅದನ್ನು ಖರೀದಿಸಿ ಅಲ್ಲಿಯೇ ನೆಲೆ ಕಂಡುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ ಈಕ್ವೆಡಾರ್ ತನಗೆ ಸೇರಿದ ಯಾವುದೇ ದ್ವೀಪದಲ್ಲಿ ಅಂಥ ವ್ಯಕ್ತಿ ಇಲ್ಲ ಎಂದು ಹೇಳಿದೆ. 

ತಮ್ಮ ದೇಶಗಳಲ್ಲಿ ಹಿಂದುತ್ವ ಪಾಲಿಸಲಾಗದೆ ಪರಿತ್ಯಕ್ತರಾದ ಹಿಂದುಗಳು ಸೇರಿ ಈ ಹೊಸ ದೇಶವನ್ನು ಕಟ್ಟಿದ್ದಾರೆ. ಈ ದೇಶಕ್ಕೆ ಯಾವುದೇ ಗಡಿಯ ಮಿತಿ ಇರುವುದಿಲ್ಲ. ನಾನೇನು ಹಿಂದು ಧರ್ಮ ಸುಧಾರಕ ಎಂದು ಹೇಳಿಕೊಳ್ಳಲ್ಲ. ಆದರೆ ಹಿಂದುಗಳನ್ನು ಎಚ್ಚರಿಸುವವನು ಎನ್ನಲು ಬಯಸುತ್ತೇನೆ ಎಂದು ಹೊಸ ವಿಡಿಯೋದಲ್ಲಿ ನಿತ್ಯಾನಂದ ಹೇಳಿದ್ದಾನೆ. 

ನಿತ್ಯಾನಂದ ತನ್ನ ಅಧಿಕೃತ ವೆಬ್ ಸೈಟ್ www.kailasa.org ಮೂಲಕ ಹೊರ ಜಗತ್ತಿಗೆ ಮಾಹಿತಿ ತಿಳಿಸುತ್ತಿದ್ದಾನೆ.