ಆಸ್ಟ್ರೇಲಿಯಾದ ನಾಲ್ಕು ಮಂದಿ ಪೊಲೀಸರ ಹತ್ಯೆ ; ಭಾರತ ಮೂಲದ ವ್ಯಕ್ತಿಗೆ 22 ವರ್ಷ ಜೈಲು ಶಿಕ್ಷೆ

14-04-21 02:07 pm       Headline Karnataka News Network   ದೇಶ - ವಿದೇಶ

ಆಸ್ಟ್ರೇಲಿಯಾದ ಪೊಲೀಸರನ್ನು ಹತ್ಯೆ ಮಾಡಿದ ಪ್ರಕರಣದಡಿ ಮೊಹಿಂದರ್‌ ಸಿಂಗ್‌ಗೆ 22 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಮೆಲ್ಬರ್ನ್, ಏ. 14‌: ಆಸ್ಟ್ರೇಲಿಯಾದ ನಾಲ್ಕು ಮಂದಿ ಪೊಲೀಸರನ್ನು ಹತ್ಯೆ ಮಾಡಿದ ಪ್ರಕರಣದಡಿ ಭಾರತೀಯ ಮೂಲದ ಮೊಹಿಂದರ್‌ ಸಿಂಗ್‌ಗೆ 22 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಕಳೆದ ವರ್ಷ ಏಪ್ರಿಲ್‌ 22 ರಂದು ಮೆಲ್ಬರ್ನ್‌ನ ಈಸ್ಟರ್ನ್ ಫ್ರೀವೇನಲ್ಲಿ ಭಾರತ ಮೂಲದ ಮೊಹಿಂದರ್‌ ಸಿಂಗ್‌, ಡ್ರಗ್ಸ್‌ ನಶೆಯಲ್ಲಿ ಪೊಲೀಸರ ಮೇಲೆ ಟ್ರಕ್‌ ಚಲಾಯಿಸಿದ್ದ.

ಈ ಪ್ರಕರಣದ ವಿಚಾರಣೆ ನಡೆಸಿದ ವಿಕ್ಟೋರಿಯಾದ ಸುಪ್ರೀಂಕೋರ್ಟ್‌, ಮೊಹಿಂದರ್‌ ಸಿಂಗ್‌ಗೆ 22 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ 18 ವರ್ಷ 6 ತಿಂಗಳವರೆಗೆ ಅಪರಾಧಿಗೆ ಪರೋಲ್‌ ನೀಡದಂತೆ ನಿರ್ಬಂಧ ವಿಧಿಸಿದೆ.

A truck driver was sentenced to 22 years in prison on Wednesday for hitting and killing four police officers on an Australian freeway. Mohinder Singh was drug-affected and sleep-deprived when his truck veered into an emergency stopping lane of Melbourne's Eastern Freeway where three policemen and a policewoman were standing after stopping a speeding car on April 22 last year. The four died at the scene.