ಪಾಸ್ ಪೋರ್ಟ್ ಇಲ್ಲದ ಕಾರಣಕ್ಕಾಗಿ 16 ವರ್ಷದಲ್ಲಿ 29 ಲಕ್ಷ ರೂ.ದಂಡ ಕಟ್ಟಿದ ತೇಲಂಗಾಣ ಮೂಲದ ವ್ಯಕ್ತಿ

02-09-20 07:15 pm       Headline Karnataka News Network   ದೇಶ - ವಿದೇಶ

ತೆಲಂಗಾಣದ ವ್ಯಕ್ತಿ ಪಾಸ್‌ಪೋರ್ಟ್‌ ಇಲ್ಲದ ಕಾರಣಕ್ಕಾಗಿ ದುಬೈನಲ್ಲಿ 16 ವರ್ಷಗಳ ಕಾಲ ಇದ್ದು ಇದೀಗ ತೆಲಂಗಾಣಕ್ಕೆ ವಾಪಸ್ಸಾಗಿದ್ದಾರೆ.

ಹೈದರಾಬಾದ್, ಸೆಪ್ಟೆಂಬರ್. 2: ತೆಲಂಗಾಣ ಮೂಲದ  ವ್ಯಕ್ತಿ ಪಾಸ್‌ಪೋರ್ಟ್‌ ಇಲ್ಲದೆಯೇ 16 ವರ್ಷಗಳ ಬಳಿಕ ದುಬೈನಿಂದ ವಾಪಾಸ್ಸಾಗಿದ್ದು, ಕಳೆದ 16 ವರ್ಷಗಳಲ್ಲಿ ದುಬೈನಲ್ಲಿ ಸಿಲುಕಿಕೊಂಡಿದ್ದ ಅವರಿಗೆ 29 ಲಕ್ಷ ರೂ ನಷ್ಟು ದಂಡ ವಿಧಿಸಲಾಗಿತ್ತು.

ನೀಲ ಯಲ್ಲಯ್ಯ ಚಿಂತಮಾನಪಳ್ಳಿಯವರು, 2004ರಲ್ಲಿ ಕೆಲಸಕ್ಕೆಂದು ದುಬೈಗೆ ಹೋಗಿದ್ದರು. ಬಳಿಕ ಕೆಲವು ಸನ್ನಿವೇಶಗಳು ಅವರನ್ನು ಅಲ್ಲಿಯೇ ಉಳಿದುಕೊಳ್ಳುವಂತೆ ಮಾಡಿತು. ಜೈನ್ ಸೇವಾ ಮಿಷನ್ ಸ್ವಯಂಸೇವಕರಾದ ರೂಪೇಶ್ ಮೆಹ್ತಾ ಎಂಬುವವರು ಅವರಿಗೆ ಸಹಾಯ ಮಾಡಿದ್ದು, ದುಬೈನಲ್ಲಿರುವ ಭಾರತೀಯ ಕೌನ್ಸುಲೇಟ್‌ನಲ್ಲಿ ತಾತ್ಕಾಲಿಕ ಪಾಸ್‌ಪೋರ್ಟ್‌ ಪಡೆದು ಅವರನ್ನು ಕರೆತರಲಾಗಿದೆ.

ಯಲ್ಲಯ್ಯ ಅವರ ಪತ್ನಿ ಒತ್ತಾಯದ ಮೇರೆಗೆ ಹೈದರಾಬಾದ್ ಕಚೇರಿಯಲ್ಲಿ ಹಳೆಯ ಪಾಸ್‌ಪೋರ್ಟ್ ಪಡೆಯಲಾಯಿತು. ಅವರಿಗೆ ಉಚಿತ ವಿಮಾನ ಟಿಕೆಟ್ ನೀಡಿ ಕರೆಸಿಕೊಳ್ಳಲಾಯಿತು.ಅವರ ವೀಸಾ ಅವಧಿ ಮುಗಿದು ಕೂಡ ಅಲ್ಲಿಯೇ ಇದ್ದ ಕಾರಣ ನಿತ್ಯ 500 ರೂ.ನಷ್ಟು ಇಲ್ಲಿಯವರೆಗೆ 29 ಲಕ್ಷದಷ್ಟು ದಂಡ ವಿಧಿಸಲಾಗಿತ್ತು. ದುಬೈ ಸರ್ಕಾರ ಆ ದಂಡವನ್ನು ಮನ್ನಾ ಮಾಡಿದೆ.

ಅವರು ಸೋಮವಾರ ಸಂಜೆ ತೆಲಂಗಾಣವನ್ನು ತಲುಪಿದ್ದು, ಸದ್ಯ  ಹೋಂ ಕ್ವಾರಂಟೈನ್‌ನಲ್ಲಿರಲು ಅವಕಾಶ ಮಾಡಿಕೊಡಲಾಗಿದೆ. ಯಲ್ಲಯ್ಯ ಅವರು ದುಬೈಗೆ ಹೊರಡುವ ಸಂದರ್ಭದಲ್ಲಿ ಮಗಳು ಇನ್ನೂ ಚಿಕ್ಕವಳು. ಈಗ ಆಕೆ ಒಂದು ಮಗುವಿನ ತಾಯಿಯಾಗಿದ್ದಾಳೆ.